ತಂದೆ ಮಗ ಮೀನು ಹಿಡಿಯಲು ಹೋಗಿ ಸುಮಾರು 40 ವರ್ಷದ ವ್ಯಕ್ತಿ ಆಟೋ ಚಾಲಕ ರಂಗನಾಥ್ ಆಳವಾದ ಗುಂಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ವರದಿಯಾಗಿದೆ.
ಕೊಡಿಗೇಹಳ್ಳಿ ಹೋಬಳಿಯ ಸಿಂಗನಹಳ್ಳಿ ಗ್ರಾಮದ ಗುಟ್ಟೆ ಕೆರೆಯಲ್ಲಿ ಸಿಂಗನಹಳ್ಳಿ ಗ್ರಾಮದ ಆಟೋ ಚಾಲಕ ರಂಗನಾಥ್ ಮಗ ಧನುಷ್ ಮೀನು ಹಿಡಿಯಲು ಹೋಗಿದ್ದು ಆಳವಾದ ಗುಂಡಿಯಲ್ಲಿ ತಂದೆ ಮುಳುಗುತ್ತಿರುವುದು ಕಂಡ ಧನುಷ್ ಕೂಗಿಕೊಂಡು ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದು ಅಷ್ಟುಹೊತ್ತಿಗೆ ರಂಗನಾಥ್ ನೀರಿನಲ್ಲಿ ಮುಳುಗಿದ್ದಾರೆ.
ವಿಷಯ ತಿಳಿಯುತಿದ್ದಂತೆ ಪೊಲೀಸರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದು ಬೆಳಗ್ಗೆ 11 ರಿಂದ ಸಂಜೆ 6 ಗಂಟೆ ಮೃತದೇಹಕ್ಕೆ ಶೋಧಕಾರ್ಯಚರಣೆ ನಡೆಸಿ ಒಬಿಎಂ ಬೋಟಿಂಗ್ ಮಿಶನ್ ಮೂಲಕ ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಹೊರತೆಗೆದಿದ್ದಾರೆ. ಈ ಬಗ್ಗೆ ಮೃತನ ಪತ್ನಿ ರಮ್ಯ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಮೃತ ದೇಹವನ್ನು ಮಧುಗಿರಿಗೆ ರವಾನಿಸಲಾಗಿದೆ. ಮೃತರಿಗೆ ಇಬ್ಬರು ಹೆಣ್ಣು ಮತ್ತು ಒಂದು ಗಂಡು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ಪಿಎಸೈ ಶ್ರೀನಿವಾಸ್ ಪ್ರಸಾದ್, ಅಗ್ನಿ ಶಾಮಕ ಠಾಣಾಧಿಕಾರಿ ಜಿ ಹನುಮಂತಯ್ಯ, ಕೊರಟಗೆರೆ ಸಹಾಯಕ ಅಗ್ನಿ ಶಾಮಕ ಠಾಣಾಧಿಕಾರಿ ಜಿ.ಎಚ್ ಮಂಜುನಾಥ್ ಸೇರಿದಂತೆ ಅಗ್ನಿ ಶಾಮಕ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.