ಇತ್ತೀಚಿಗೆ ಸುರಿದ ಭಾರಿ ಮಳೆಗೆ ಯಾಕರ‍್ಲಹಳ್ಳಿ ಗ್ರಾಮದ ಸರಕಾರಿ ಶಾಲೆಯ ಕೊಠಡಿ ಕುಸಿದು ಬಿದ್ದು ಅದೃಷ್ಟವಶಾತ್ ಶಾಲಾ ಮಕ್ಕಳ ದೂರವಿದ್ದ ಕಾರಣ ಭಾರಿ ಅನಾಹುತದಿಂದ ಪಾರಾಗಿದ್ದಾರೆ.
ಮಧುಗಿರಿ ತಾಲೂಕಿನ ಕೊಡಗೇನಹಳ್ಳಿ ಹೋಬಳಿಯ ಕಡಗತ್ತೂರು ಗ್ರಾಪಂ ವ್ಯಾಪ್ತಿಯ ಯಾಕರ‍್ಲಹಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಕುಸಿದಿದೆ. ಕೇವಲ 3 ಕೊಠಡಿಗಳಿದ್ದು ಇರುವ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಸುಮಾರು 81 ಮಕ್ಕಳು ಶಿಕ್ಷಣ ಪಡೆಯುತಿದ್ದು ಇದರ ಜತೆ ಪೋಷಕರ ಸಹಕಾರದಿಂದ ಎಲ್‌ಕೆಜಿ ಶಿಕ್ಷಣವನ್ನು ನೀಡಲಾಗುತಿದ್ದು ಕೊಠಡಿ ಸಮಸ್ಯೆ ಬಗ್ಗೆ ಇಲಾಖೆ ವರದಿ ನೀಡಲಾಗುವುದು ಎಂದು ಮುಖ್ಯ ಶಿಕ್ಷಕ ಎಂ.ಆರ್ ನಾರಯಣಪ್ಪ ತಿಳಿಸಿದ್ದಾರೆ.
ಗ್ರಾಪಂ ಸದಸ್ಯ ನರಸೇಗೌಡ ಮಾತನಾಡಿ ಗ್ರಾಮದ ಶಾಲೆಯಲ್ಲಿ ಈಗಾಗಲೇ ಕೊಠಡಿ ಸಮಸ್ಯೆ ಇದ್ದು ಇದೀಗ ಮತ್ತೊಂದು ಕೊಠಡಿ ಕುಸಿದು ಬಿದಿದ್ದು ಇದರಿಂದ ಇದರ ಪಕ್ಕದ ಎರಡು ಕೊಠಡಿಗಳು ಡ್ಯಾಮೇಜ್ ಆಗಿವೆ, ಈ ಭಾಗದಲ್ಲಿ ತೀರ ಬಡವರ ಮಕ್ಕಳು ಶಿಕ್ಷಣ ಪಡೆಯುತಿದ್ದು ಶಿಕ್ಷಣ ಇಲಾಖೆ ಅಧಿಕಾರಿಗಳು ತುರ್ತಾಗಿ ಕೊಠಡಿ ಸಮಸ್ಯೆ ಪರಿಹಾರ ಮಾಡಬೇಕು ಎಂದು ಒತ್ತಾಯಿಸಿದರು..
