ಸದಾಶಿವ ಆಯೋಗದ ವರದಿ ಅಂಗೀಕಾರಕ್ಕೆ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ ಆಗ್ರಹ

Date:

Advertisements

“14 ಕೋಟಿ ರೂ. ವೆಚ್ಚ ಮಾಡಿ, ವೈಜ್ಞಾನಿಕವಾಗಿ ದತ್ತಾಂಶವನ್ನು ಸಿದ್ಧಪಡಿಸಿರುವ ಸದಾಶಿವ ಆಯೋಗದ ವರದಿಯನ್ನು ಅಪ್ರಸ್ತುತಗೊಳಿಸದೇ, ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಬೇಕು” ಎಂದು ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ ಆಗ್ರಹಿಸಿದೆ.

ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಒಕ್ಕೂಟ, “ಕೇವಲ 6% ವ್ಯತ್ಯಾಸ ಇರಬಹುದಾದ ನಿಖರವಾದ ದತ್ತಾಂಶವನ್ನ ಅಧ್ಯಯನ ಮಾಡಿ ತಯಾರಿಸಿರುವ ವರದಿಯನ್ನ ಯಾವುದೇ ಒತ್ತಡಕ್ಕೆ ಮಣಿದು ಅಪ್ರಸ್ತುತಗೊಳಿಸಬಾರದು. ಈ ವರದಿಯ ದತ್ತಾಂಶಗಳನ್ನ ಪರಿಗಣಿಸಿ ಪರಿಶಿಷ್ಟ ಜಾತಿಯ ಜ್ವಲಂತ ಸಮಸ್ಯೆಗಳನ್ನ ಕೂಡಲೇ ಬಗೆಹರಿಸಬೇಕು” ಎಂದು ಒತ್ತಾಯಿಸಿದೆ.

“ಜತೆಗೆ, ಒಳಮೀಸಲಾತಿ ಜಾರಿಗೆ ಸಂಬಂಧಪಟ್ಟಂತೆ ಸಚಿವ ಸಂಪುಟ ನ್ಯಾ.ನಾಗಮೋಹನ್ ದಾಸ್ ಆಯೋಗ ರಚಿಸಿದ ನಂತರ ಮುಂದಿನ ಯಾವುದೇ ಹುದ್ದೆಗಳನ್ನ ತುಂಬದಿರಲು ಆದೇಶ ಹೊರಡಿಸಿದ ನಂತರ ರಾಜ್ಯದಲ್ಲಿ ನಾನಾ ಇಲಾಖೆಗಳಲ್ಲಿ 37,218 ಹುದ್ದೆಗಳನ್ನ ತರಾತುರಿಯಲ್ಲಿ ತುಂಬಿದ್ದಾರೆ. ಇದು ಖಂಡನೀಯ ಇದನ್ನು ಕೂಡಲೇ ರದ್ದುಗೊಳಿಸಬೇಕು” ಎಂದು ಆಗ್ರಹಿಸಿದೆ.

Advertisements

“ಒಳಮೀಸಲಾತಿ ಜಾರಿಗೆ ಸಂಬಂಧಪಟ್ಟಂತೆ ಜನವರಿ 29ರಂದು ರಾಜ್ಯದ ಎಲ್ಲ ಶಾಸಕರು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಒಕ್ಕೂಟ ನಿರ್ಣಯಿಸಿದೆ. ಜತೆಗೆ, ಫೆಬ್ರುವರಿ 19ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲು ತಿರ್ಮಾನಿಸಿದೆ” ಎಂದು ತಿಳಿಸಿದೆ.

“ಎಲ್ಲರಿಗೂ ನ್ಯಾಯ ಸಿಗಬೇಕು ಎನ್ನುವ ಆಶಯವನ್ನು ಸಂವಿಧಾನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಅಳವಡಿಸಿದ್ದಾರೆ. ಇದರ ಅನುಷ್ಟಾನಕ್ಕಾಗಿ ಸಂವಿಧಾನದ 15, 16 ಅನುಚ್ಛೇದದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಮೂಲಭೂತ ಹಕ್ಕು ನೀಡಿದ್ದಾರೆ. ಪರಿಶಿಷ್ಟ ಜಾತಿಯವರ ಅಭಿವೃದ್ಧಿಗೆ ಇಂತಹ ಬಲಿಷ್ಠವಾದ ಹಕ್ಕುಗಳನ್ನು ನೀಡಿದ್ದರೂ ಕೂಡ ಕಳೆದ 27 ವರ್ಷಗಳಿಂದಲೂ ಕರ್ನಾಟಕದ ಮಾದಿಗ, ಸಮಗಾರ, ಡೋಹರ, ಮಚಗಾರ ಜಾತಿಗಳಿಗೆ ಮೀಸಲಾತಿಯಲ್ಲಿ ಸಿಗಬೇಕಾದ ನ್ಯಾಯಯುತವಾದ ಪಾಲು ಸಿಕ್ಕಿಲ್ಲ. ಕಳೆದ 30 ವರ್ಷಗಳಿಂದಲೂ ಇದಕ್ಕಾಗಿ ಈ ಸಮಾಜ ಹೋರಾಡುತ್ತಿದೆ. ಹೋರಾಟಕ್ಕೆ ಮಣಿದ ಸರ್ಕಾರ 2005ರಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗವನ್ನ ರಚನೆ ಮಾಡಿತ್ತು” ಎಂದು ಹೇಳಿದೆ.

“ಸದಾಶಿವ ಆಯೋಗವು ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಪರಿಶಿಷ್ಟ ಜಾತಿಗೆ ಸೇರಿದ 1.58 ಲಕ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು ಸೇರಿದಂತೆ 96.60 ಲಕ್ಷ ಜನರ ಮನೆ-ಮನೆ ಸಮೀಕ್ಷೆಯ ಮೂಲಕ ಅವರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡಿ, ನಾಲ್ಕು ಗುಂಪುಗಳಿಗೆ ಮೀಸಲಾತಿ ಸೌಲಭ್ಯಗಳ ಹಂಚಿಕೆಗೆ ಶಿಫಾರಸ್ಸು ಮಾಡಿದರು. ಈ ಮಾಹಿತಿಯನ್ನು ಸಂಗ್ರಹಿಸಿ, ಅಧ್ಯಯನ ಮಾಡಿ ವರದಿ ಸಲ್ಲಿಸಲು ಸುಮಾರು 7 ವರ್ಷಗಳ ಕಾಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ನಾನಾ ಪರಿಶಿಷ್ಟ ಜಾತಿಯ ಸಂಘ ಸಂಸ್ಥೆಗಳು, ಅದರ ಮುಖಂಡರನ್ನು ಭೇಟಿ ಮಾಡಿ ಅವರ ಮನವಿಗಳನ್ನು ಸ್ವೀಕರಿಸಿ, ಅದನ್ನು ಅಧ್ಯಯನ ಮಾಡಿದ ಆಯೋಗವು ತನ್ನ ವರದಿಯನ್ನು 2012ರಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದ ಗೌಡ ಅವರಿಗೆ ಸಲ್ಲಿಸಿತ್ತು. ಆದರೆ, ಅಂದಿನ ಬಿಜೆಪಿ ಸರ್ಕಾರ ಈ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಿಲ್ಲ. ಜನತಾದಳ, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವುದಾಗಿ ಹೇಳಿ ಗೆದ್ದ ಮೇಲೆ ಜಾರಿ ಮಾಡದೆ ವಚನಭ್ರಷ್ಟರಾಗಿ ರಾಜ್ಯದ ಮಾದಿಗ, ಸಮಗಾರ, ಡೋಹರ, ಮಚಗಾರ ಸಮಾಜಕ್ಕೆ ಘೋರ ಅನ್ಯಾಯವನ್ನು ಮಾಡಿದೆ” ಎಂದು ಹೇಳಿದೆ.

ಈ ಸುದ್ದಿ ಓದಿದ್ದೀರಾ? ಅಲೆಮಾರಿ ಸಮುದಾಯಗಳಿಗೆ 3% ಮೀಸಲಾತಿ ಕಲ್ಪಿಸಿ ; ಮಹಾಸಭಾ ಮನವಿ

“ಸರ್ಕಾರ ಸಂವಿಧಾನದ ಆಶಯಗಳಾದ ಮೂಲಭೂತ ಹಕ್ಕುಗಳನ್ನು, ನ್ಯಾಯವನ್ನು ನಿರಾಕರಣೆ ಮಾಡುವುದು ಮುಂದುವರೆಸಿದೆ. 2023ರಲ್ಲಿ ಕಾಂಗ್ರೆಸ್ ದೊಡ್ಡ ಸಮಾವೇಶ ಮಾಡಿ ತಾನು ಅಧಿಕಾರಕ್ಕೆ ಬಂದರೇ ಮೊದಲನೇ ಕ್ಯಾಬಿನೆಟ್ ಸಭೆಯಲ್ಲಿ ಸದಾಶಿವ ಆಯೋಗದ ವರದಿ ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಆದರೆ, ಅವರ ಪ್ರಣಾಳಿಕೆಯಂತೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ” ಎಂದಿದೆ.

“ಮಾದಿಗರ ಮುಂದುವರೆದ ಹೋರಾಟಗಳಿಂದ 2023 ಚುನಾವಣಾ ಸಮೀಪದಲ್ಲಿ ಬಿಜೆಪಿ ಸರ್ಕಾರದ ಮಂತ್ರಿ ಮಾದುಸ್ವಾಮಿ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚನೆ ಮಾಡಿದರು. ಈ ಸಮಿತಿ ಯಾವುದೇ ಅಧ್ಯಯನ ನಡೆಸದೆ ತನ್ನ ವಿವೇಚನೆಯಿಂದ ಅಂಕಿ ಅಂಶಗಳನ್ನು ಕಲೆಹಾಕಿ ಮಾದಿಗ, ಸಮಗಾರ, ಡೋಹರ, ಮಚಗಾರ ಜಾತಿಗಳಿಗೆ 6%, ಹೊಲೆಯ ಮತ್ತು ಸಂಬಂಧಿತ ಜಾತಿಗಳಿಗೆ 5.5%, ಭೋವಿ, ಕೋರಚ ಲಮಾಣಿ ಸ್ಪೃಶ್ಯ ಜಾತಿಗಳಿಗೆ 4.5% ಅಲೆಮಾರಿಗಳಿಗೆ 1% ಮೀಸಲಾತಿಯನ್ನು ನಿಗದಿಪಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಕೈ ತೊಳೆದುಕೊಂಡರು” ಎಂದು ಹೇಳಿದೆ.

“ಸುಪ್ರೀಂಕೋರ್ಟ್ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡುವುದು ಸಂವಿಧಾನ ಬದ್ಧವಾಗಿದೆ ಎಂದು ಹೇಳಿರುವುದು ಮಾದಿಗರ ಹೋರಾಟಕ್ಕೆ ಸಂದ ಜಯವಾಗಿದೆ. ಒಳಮೀಸಲಾತಿ ಕುರಿತಂತೆ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿ 2024ರ ಆಗಸ್ಟ್‌ 1 ರಂದು ಆದೇಶ ನೀಡಿದೆ. ಆದರೆ, ಕರ್ನಾಟಕ ಸರ್ಕಾರ ಈ ಆದೇಶವನ್ನು ಜಾರಿ ಮಾಡುವ ಬದಲು ದತ್ತಾಂಶ ಸಂಗ್ರಹಿಸಿ 3 ತಿಂಗಳೊಳಗೆ ತಮ್ಮ ಶಿಫಾರನ್ನು ನೀಡುವಂತೆ ಆದೇಶಿಸಿ ಮತ್ತೊಂದು ಆಯೋಗವನ್ನು ನ್ಯಾಯಮೂರ್ತಿ ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಮಾಡಿದೆ. ಆದರೆ, ರಾಜ್ಯದ ಬೃಹತ್ ಪರಿಶಿಷ್ಟ ಜಾತಿಯ ಜನಸಂಖ್ಯೆಯನ್ನು ಸಂಪರ್ಕಿಸಿ ಮೂರು ತಿಂಗಳ ಒಳಗೆ ದತ್ತಾಂಶ ಸಂಗ್ರಹ ಮಾಡುವುದು ಅಸಾಧ್ಯವಾಗಿದೆ” ಎಂದು ಹೇಳಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X