ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಇಂದು ಭೂ ಗುತ್ತಿಗೆ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಮೂಲಕ ಸಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬಡ ಜನರಿಗೆ ಭೂಮಿ ಹಾಗೂ ನಿವೇಶನ ಕಲ್ಪಿಸುವಂತೆ ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ರ್ಯಾಲಿಗೆ ಕೊಡಗಿನ ಎಲ್ಲಾ ಪ್ರಗತಿಪರ ಸಂಘಟನೆಗಳು ರ್ಯಾಲಿಯಲ್ಲಿ ಪಾಲ್ಗೊಳ್ಳುವುದರ ಮೂಲಕ ಬೆಂಬಲ ಸೂಚಿಸಿದವು.
ಕೊಡಗಿನಲ್ಲಿ ಭೂ ಗುತ್ತಿಗೆ ಆದೇಶಾವಾಗಿದ್ದು, ಉಳ್ಳವರ ಪರವಾಗಿ ಒತ್ತುವರಿ ಮಾಡಿಕೊಂಡ ಭೂ ಮಾಲೀಕ ಕೇವಲ ಸಾವಿರಾರು ರೂಪಾಯಿ ಪಾವತಿಸಿ ಸರ್ಕಾರದಿಂದ ಅಧಿಕೃತವಾಗಿ ಮೂವತ್ತು ವರ್ಷಗಳವರೆಗೆ ಭೂ ಗುತ್ತಿಗೆ ಪಡೆಯುವ ಪ್ರಕ್ರಿಯೆ ಆರಂಭಗೊಂಡು ,ಇನ್ನೇನು ವಿತರಿಸುವ ಹಂತಕ್ಕೆ ತಲುಪಿದೆ. ಕೊಡಗಿನ ಬಡ ಜನರ ವಿರೋಧಿ ಭೂ ಗುತ್ತಿಗೆ ಆದೇಶ ಜಾರಿಗೆ ತಂದ ಸರ್ಕಾರ,ಅನುಷ್ಠಾನ ಮಾಡುತ್ತಿರುವ ಜಿಲ್ಲಾಡಳಿತ ವಿರುದ್ಧ ಕೊಡಗಿನಲ್ಲಿ ಹೋರಾಟಗಳು ಆರಂಭಗೊಂಡಿವೆ. ಸರ್ಕಾರ ಉಳ್ಳವರಿಗೆ 25 ಎಕರೆ ಕೊಡುವುದಾದರೆ ನಿವೇಶನ , ಭೂಮಿ ಏನೂ ಇರದ ಬಡ ಜನರ ಪರಿಸ್ಥಿತಿ ಏನು? ಅಂತಹವರಿಗೆ ಭೂಮಿ ಕೊಡಿ ಭೂ ಮಾಲೀಕರು ಕೊಡುವ ಹಣಕ್ಕಿಂತ ದುಪ್ಪಟ್ಟು ಕೊಡುವುದಾಗಿ ಆಗ್ರಹ ಮಾಡಿದ್ದಾರೆ.

ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳಿಂದ ಬಂದಿದ್ದ ಆದಿವಾಸಿ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ಜನರು ನೀಲಿ, ಕೆಂಪು, ಹಸಿರು ಬಾವುಟ ಹಿಡಿದು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರ ಹಾಕುತ್ತಾ ಧಿಕ್ಕಾರ ಕೂಗುತ್ತ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಮಾಯಿಸಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಜಿಲ್ಲೆಯ ದಸಂಸ, ಸಿಪಿಐಎಂ, ಸಿಪಿಐಎಂಎಲ್, ಸಿಪಿಐಎಂ(ರೆಡ್ ಸ್ಟಾರ್) ರೈತ ಸಂಘಟನೆ, ಬಹುಜನ ಕಾರ್ಮಿಕ ಸಂಘಟನೆ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಹಲವು ಮುಖಂಡರು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ?: ಮಡಿಕೇರಿ | ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು: ಧರ್ಮಜ ಉತ್ತಪ್ಪ
ಪ್ರತಿಭಟನೆಯಲ್ಲಿ ಭೂ ಗುತ್ತಿಗೆ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕಾಮ್ರೇಡ್ ನಿರ್ವಾಣಪ್ಪ, ಸಂಚಾಲಕರಾದ ಕೆ ಮೊಣ್ಣಪ್ಪ, ರಮೇಶ್ ಮಾಯಮುಡಿ, ರಮೇಶ್ (ಸಿಪಿಐಎಂ), ಅಡ್ವೋಕೇಟ್ ಸುನಿಲ್, ದಸಂಸ ಮಾರ್ಕ್ಸ್‌ವಾದಿ ಕುಟ್ಟಪ್ಪ, ದಸಂಸ ಸಂಚಾಲಕರಾದ ಗೋವಿಂದಪ್ಪ, ರಜನೀಕಾಂತ್, ಹೆಚ್ ಎಲ್ ದಿವಾಕರ್, ವೀರಭದ್ರಯ್ಯ, ಜಗದೀಶ್, ಭೀಮವಾದ ಸಂಘಟನೆಯ ಕೆ ಬಿ ರಾಜು, ಗ್ರಾಮ ಪಂಚಾಯ್ತಿ ಸದಸ್ಯರಾದ ಕುಸುಮಾವತಿ, ಲಕ್ಷ್ಮಿ, ಪತ್ರಕರ್ತರಾದ ಜಯಪ್ಪ ಹಾನಗಲ್, ಮೋಹನ್ ಮೈಸೂರು ಭಾಗಿಯಾಗಿದ್ದರು.

