ಮಡಿಕೇರಿಯಲ್ಲಿ ಕೊಡಗು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹತ್ತನೇ ವರ್ಷದ ವಾರ್ಷಿಕೋತ್ಸವ ‘ ಅವೆನ್ಸಿಸ್ 2025 ‘ ಬೃಹತ್ ಆರೋಗ್ಯ ಜಾಗೃತಿ ಪ್ರದರ್ಶನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶಾಸಕ ಎ ಎಸ್ ಪೊನ್ನಣ್ಣ ಮಾತನಾಡಿ ‘ ವೈದ್ಯಕೀಯ ಶಿಕ್ಷಣಕ್ಕೆ ಸೇರುವಾಗಲೇ ಬಡಜನರ ಸೇವೆ ಮಾಡುವ ಸಂಕಲ್ಪ ಮಾಡುವಂತೆ ‘ ಸಲಹೆ ನೀಡಿದರು.
” ವೈದ್ಯಕೀಯ ವೃತ್ತಿ ಅತ್ಯಂತ ಮಹತ್ವದ್ದಾಗಿದ್ದು ಜನಸೇವೆ ಮಾಡಲು ಸೂಕ್ತವಾಗಿದೆ. ಗ್ರಾಮೀಣ ಭಾಗದಲ್ಲಿ ಒಂದಷ್ಟು ವರ್ಷ ಕಡ್ಡಾಯವಾಗಿ ಬಡಜನರಿಗೆ ಸೇವೆ ನೀಡುವ ಮೌಲ್ಯವನ್ನು ಬೆಳೆಸಿಕೊಳ್ಳಿ. ವೈದ್ಯರಾಗಿ ಜನರ ಸೇವೆ ಮಾಡುವುದು ನಿಜವಾದ ಸಾರ್ಥಕತೆಯ ಕೆಲಸ. ಅಂತಹ ನಿಟ್ಟಿನಲ್ಲಿ ಈಗಲಿಂದಲೇ ಸನ್ನದ್ದರಾಗಿ. ಸಹಜವಾಗಿ ವೈದ್ಯ ವೃತ್ತಿಗೆ ಬರುವವರು ಪಟ್ಟಣ್ಣ, ನಗರಗಳಲ್ಲಿ ಇರಲು ಇಚ್ಚಿಸುತ್ತ ಹಳ್ಳಿಗಳ ಕಡೆಗೆ ಮುಖ ಮಾಡುತ್ತಿಲ್ಲ. ಒಂದು ವೇಳೆ ಗ್ರಾಮೀಣ ಪ್ರದೇಶದ ಕಡೆಗೆ ಬಂದರು ಇರಲು ಇಚ್ಚಿಸುವುದಿಲ್ಲ “.
” ನಗರ, ಪಟ್ಟಣಗಳಿಗಿಂತ ಹೆಚ್ಚಾಗಿ, ತುರ್ತಾಗಿ ವೈದ್ಯರ ನೆರವಿನ ಅಗತ್ಯತೆ ಇರುವುದು ಬಡಜನರಿಗೆ, ಗ್ರಾಮೀಣ ಭಾಗದ ಬಡವರಿಗೆ. ಇದನ್ನೆಲ್ಲಾ ಈಗಿಂದಲೇ ವಿದ್ಯಾರ್ಥಿಗಳು ಮನನ ಮಾಡಿಕೊಂಡು ಉತ್ತಮ ಸೇವೆ ನೀಡುವ ಕಡೆಗೆ ಲಕ್ಷ್ಯ ವಹಿಸಬೇಕು. ಈಗಲೂ ಸಹ ಗ್ರಾಮೀಣ ಭಾಗದ ಸರ್ಕಾರಿ ಪ್ರಾಥಮಿಕ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದೆ, ಇಂತಹ ಪರಿಸ್ಥಿತಿ ತೊಡೆದು ಹಾಕುವಲ್ಲಿ ನಿಮ್ಮೆಲ್ಲರ ಪಾತ್ರ ದೊಡ್ಡದಿದೆ ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಡಗು | ನಾಲ್ವರ ಹತ್ಯೆ ಪ್ರಕರಣ; ಕೇರಳದಲ್ಲಿ ಆರೋಪಿ ಬಂಧನ
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಲೋಕೇಶ್ ಕುಮಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಪ್ರಾಂಶುಪಾಲ ಡಾ ವಿಶಾಲ್,ಅಡಳಿತ ವಿಭಾಗದ ಮುಖ್ಯಸ್ಥ ಡಾ ಸೋಮಶೇಖರ್,ಡಾ ಕಾಮತ್,ಡಾ ಮಂಜುನಾಥ್,ಡಾ ಪುರುಷೋತ್ತಮ್, ವಿಧ್ಯಾರ್ಥಿಗಳಾದ ಪೂರ್ಣ ಚಂದ್ರ,ಮನೋಜ್ ಶೇಖರ್,ಮಿಥುನ್ ಆರ್,ಪವನ್ ವಶಿಷ್ಠ,ನೇಹಾ,ಪುನೀತ್,ಕಾವ್ಯ ಗುಪ್ತಾ, ಸೂರ್ಯ ವೈ,ಅನುದೀಪ್, ಶಶಾಂಕ್ ವೈ, ನಾಝಿಯಾ ತಸ್ವೀನ್,ಮನು,ಪ್ರಜ್ನಾ,ಜಹರಾ,ಲಿಖಿತ ಬಿ ಟಿ ಐಶ್ವರ್ಯ ರಾಜ್,ಭವಾನಿ ರೆಡ್ಡಿ,ತೃಪ್ತಿ, ಚಂದನಶ್ರೀ ಸೇರಿದಂತೆ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.