ಕನ್ನಡದ ನಾಡು, ನುಡಿ ಉಳಿಸಲು ಜಯ ಕರ್ನಾಟಕ ಸಂಘವು ಸದಾ ಸಕ್ರಿಯವಾಗಿದೆ. ಕಾರಣಾಂತರಗಳಿಂದ ಕೆಲ ದಿನಗಳಿಂದ ಸಂಘಟನೆ ಸಕ್ರಿಯವಾಗಿರಲಿಲ್ಲ. ನಮ್ಮ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಸಂಘಟನೆ ಪುನಃ ಸಕ್ರಿಯವಾಗಿ ಕನ್ನಡ ನಾಡು, ನುಡಿಗಾಗಿ ತೊಡಗಿಸಿಕೊಳ್ಳಲಿದೆ ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಯೋಗಣ್ಣ ಹೇಳಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಯ ಕರ್ನಾಟಕ ಸಂಘಟನೆಯ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ಮಾಡಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
“ಸುಭಾಷ್ ಚಂದ್ರ ಬೋಸ್ ಜಯಂತಿ ದಿನದಂದು ಹೆಚ್ಚಿನ ಜನಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ರಕ್ತದಾನ ಶಿಬಿರಕ್ಕೆ ಪಾಲ್ಗೊಳ್ಳಬೇಕು” ಎಂದು ಜಿಲ್ಲಾಧ್ಯಕ್ಷ ಯೋಗಣ್ಣ ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಮಂಡ್ಯ | ಇ-ಖಾತಾ ಆಂದೋಲನಕ್ಕೆ ಚಾಲನೆ; ಸದುಪಯೋಗ ಪಡೆದುಕೊಳ್ಳಲು ನಗರಸಭೆ ಅಧ್ಯಕ್ಷ ಕರೆ
ಜಿಲ್ಲಾ ಉಪಾಧ್ಯಕ್ಷರಾಗಿ ರಮೇಶ್, ತಾಲೂಕು ಅಧ್ಯಕ್ಷರಾಗಿ ಹರ್ಷಿತ್, ಉಪಾಧ್ಯಕ್ಷರಾಗಿ ಅಭಿಷೇಕ್, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ಆಯ್ಕೆ ಮಾಡಿ ಪ್ರಮಾಣ ಪತ್ರವನ್ನು ವಿತರಿಸಿದರು.
ನೂತನ ಜಿಲ್ಲಾ ಉಪಾಧ್ಯಕ್ಷ ರಮೇಶ್ ಮಾತನಾಡಿ, “ಕನ್ನಡದ ನಾಡು ನುಡಿ ವಿಷಯ ಬಂದಾಗ ಜಯ ಕರ್ನಾಟಕ ಸಂಘಟನೆ ಮುಂಚೂಣಿಯಲ್ಲಿರುತ್ತದೆ. ಅಲ್ಲದೆ ವಿವಿಧ ಸಾರ್ವಜನಿಕ ಸಮಸ್ಯೆಗಳ ಕುರಿತು ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. ಯುವಕರು ಸಂಘಟನೆಗೆ ಸೇರುವ ಮೂಲಕ ಶಕ್ತಿ ತುಂಬಬೇಕಾಗಿದೆ” ಎಂದರು.
ಇದನ್ನು ನೋಡಿದ್ದೀರಾ? ಮಂಡ್ಯ | ಕನ್ನಂಬಾಡಿ ಕಟ್ಟಿದ ತಮಿಳರ ಎತ್ತಂಗಡಿ?
ನೂತನವಾಗಿ ಆಯ್ಕೆಯಾದ ತಾಲೂಕು ಅಧ್ಯಕ್ಷ ಹರ್ಷಿತ್ ಮಾತನಾಡಿ, “ಜಿಲ್ಲಾಧ್ಯಕ್ಷರ ಸಲಹೆ ಮೇರೆಗೆ ತಾಲೂಕಿನಲ್ಲಿ ಜಯ ಕರ್ನಾಟಕ ಸಂಘಟನೆಯನ್ನು ಸಕ್ರಿಯವಾಗಿ ಮಾಡಿ, ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತಿ ಮಾಡುತ್ತೇನೆ” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿ, ತಾಲೂಕು ಪದಾಧಿಕಾರಿಗಳು ಹಾಜರಿದ್ದರು.