ವ್ಯಕ್ತಿಯೊಬ್ಬರು ತೇರಿನ ಮೇಲಿನಿಂದ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯಲ್ಲಿ ಬುಧವಾರ ಸಂಜೆ ನಡೆದಿರುವುದಾಗಿ ವರದಿಯಾಗಿದೆ.
ರಬಕವಿ ನಗರದ ತಿಪ್ಪಯ್ಯ ಗಿರಿಮಲ್ಲಯ್ಯ ಪೂಜಾರಿ (53) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ರಬಕವಿ ಶಂಕರಲಿಂಗ ಟ್ಟ್ರಸ್ಟ್ ನ ಅಡಿಯಲ್ಲಿನ ಮಹಾದೇವ ದೇವಸ್ಥಾನದ ಸುಪರ್ದಿಯಲ್ಲಿರುವ ತೇರಿನ ಮನೆಯಲ್ಲಿ ಜಾತ್ರೆ ಮುಗಿದ ನಂತರ ತೇರಿನ ಮೇಲೆ ಅರಿವೆ ಹೊದಿಸುವ ವೇಳೆ ಈ ಘಟನೆ ಸಂಭವಿಸಿದೆ.
ತೇರಿನ ಮೇಲಿದ್ದಾಗ ತಿಪ್ಪಯ್ಯ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಘಟನೆಯ ಸಂಬಂಧ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
