ವ್ಯಕ್ತಿಯೋರ್ವನನ್ನು ಬಿಯರ್ ಬಾಟಲಿಯಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಮಣಿಪಾಲದ ಲಕ್ಷ್ಮೀಂದ್ರ ನಗರ ಮುಖ್ಯ ರಸ್ತೆಯ ಅನಂತ ಕಲ್ಯಾಣ ಮಾರ್ಗದಲ್ಲಿ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಹೊನ್ನಾವರದ ಕಾಸಕೋಡು ನಿವಾಸಿ ಶ್ರೀಧರ ನಾಯಕ ಕೊಲೆಯಾಗಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ಹೋಟೆಲ್ ಕಾರ್ಮಿಕ ಎಂದು ತಿಳಿದುಬಂದಿದೆ.
ಶುಕ್ರವಾರ ಬೆಳಿಗ್ಗೆ ಸ್ಥಳೀಯ ನಿವಾಸಿಗಳು ವಾಯುವಿಹಾರಕ್ಕೆ ತೆರಳಿದಾಗ ವ್ಯಕ್ತಿಯ ಕೊಲೆಯ ವಿಚಾರ ಬೆಳಕಿಗೆ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಉಡುಪಿ | ‘ಹಿಂದೂಗಳ ಸಂತತಿ ಹೆಚ್ಚಾಗಲು ಕನಿಷ್ಠ ನಾಲ್ಕು ಮಕ್ಕಳು ಹೆರಬೇಕು’ ಎಂದ ಕಾಳಹಸ್ತೇಂದ್ರ ಸ್ವಾಮೀಜಿ!
ಎಸ್‌ಪಿ ಡಾ.ಅರುಣ್ ಕುಮಾರ್, ಮಣಿಪಾಲ ಇನ್‌ಸ್ಪೆಕ್ಟರ್ ದೇವರಾಜ್, ಮಂಜುನಾಥ್ ಸ್ಥಳ ಪರಿಶೀಲನೆ ನಡೆಸಿದ್ದು, ಕೊಲೆ ಆರೋಪಿಗಳಿಗಾಗಿ ತನಿಖೆ ಆರಂಭಿಸಿದ್ದಾರೆ.
