ಕಾವೇರಿ ಮಾತೆಗೆ ನಮಿಸಲು ಅವಕಾಶ ನಿರಾಕರಣೆ ಮಾಡಿದ ಕಾವೇರಿ ನಿಗಮದ ಮುಖ್ಯ ಎಂಜಿನಿಯರ್ ರಘುರಾಮ್ ಅವರು ಕ್ಷೇಮೆ ಕೋರಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಕಾರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟುಹಿಡಿದರು.
ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಬಳಿ ದರ್ಶನ್ ಪುಟ್ಟಣ್ಣಯ್ಯ ಹಾಗೂ ಕಾರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಆಹೋರಾತ್ರಿ ಧರಣಿ ವೇಳೆ ಪ್ರತಿಭಟನಾಕಾರರು ಪ್ರತಿಭಟನಾ ಸ್ಥಳದಿಂದ ಬೃಂದಾವನದ ಒಳಗಿರುವ ಕಾವೇರಿ ಮಾತಿಗೆ ನಮಿಸಲು ಪಂಜಿನ ಮೆರವೆಣೆಗೆ ಮೂಲಕ ಮುತ್ತಿಗೆ ಹಾಕಿದರು.
ಈ ವೇಳೆ ಕಾವೇರಿ ನಿಗಮದ ಮುಖ್ಯ ಎಂಜಿನಿಯರ್ ರಘುರಾಮ್ ಅವರು ಕಾವೇರಿ ಮಾತೆಗೆ ನಮಿಸಲು ಅವಕಾಶ ನಿರಾಕರಿಸಿದ್ದರಿಂದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, “ನಿಗಮದ ಎಂಜಿನಿಯರ್ ಪ್ರತಿಭಟನಾಕಾರರ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಕಾವೇರಿ ಮಾತೆ ಪ್ರತಿಮೆ ಬಳಿಯೇ ಚಳವಳಿ ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಇಲಾಖೆಗಳಲ್ಲಿನ ಬೇಕಾಬಿಟ್ಟಿ ವರ್ಗಾವಣೆಗೆ ಕಡಿವಾಣ ಹಾಕಿದ ಸಿಎಂ ಸಿದ್ದರಾಮಯ್ಯ
ಕಾವೇರಿ ನಿಗಮದ ಮುಖ್ಯ ಎಂಜಿನಿಯರ್ ರಘುರಾಮ್ ಅವರು ಶಾಸಕರು ಹಾಗೂ ರೈತ ಸಂಘದ ಕ್ಷಮೆ ಕೋರಿದ ಬಳಿಕ ಎಂದಿನಂತೆ ಆಹೋರಾತ್ರಿ ಧರಣಿ ಸ್ಥಳದಲ್ಲಿ ಪ್ರತಿಭಟನೆ ಮುಂದುವರಿಸಿದರು.
ಈ ವೇಳೆ ಬಡಗಪುರ ನಾಗೇಂದ್ರ, ಕೆಂಪೂಗೌಡ್ರು, ಪಿ ನಾಗರಾಜ್, ಕೊಡಗಿನ ಮನುಸೋಮಯ್ಯ, ಹೋಸಕೋಟೆ ಬಸವರಾಜ್ ಸೇರಿದಂತೆ ಪಾಂಡವಪುರ, ಶ್ರೀರಂಗಪಟ್ಟಣದ ರೈತ ಸಂಘದ ಕಾರ್ಯಕರ್ತರು ಇದ್ದರು.