ಮುಂದಿನ ದಿನಗಳಲ್ಲಿ ರೈತರು ಸಾವಯವ ಕೃಷಿಗೆ ಒತ್ತು ನೀಡಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಇಳುವರಿ ಕುಂಠಿತಗೊಳ್ಳುತ್ತದೆ. ಭೂಮಿ ಫಲವತ್ತತೆ ಕಳೆದುಕೊಂಡು ಬರಡಾಗುತ್ತದೆ ಎಂದು ಮಂಡ್ಯ ಜಿಲ್ಲೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಹೇಳಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಕುರಿ ಪಾಪಣ್ಣ ತೋಟದಲ್ಲಿ ʼಮಳವಳ್ಳಿ ಸಂಪೂರ್ಣ ಸಾವಯವ ಕೃಷಿʼಕರ ಸಂಘದಿಂದ ಹಮ್ಮಿಕೊಂಡಿದ್ದ ಮಾಸಿಕ ಸಭೆ ಉದ್ದೇಶಿಸಿ ಮಾತನಾಡಿದರು.
“ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುವುದರ ಜತೆಗೆ ಆಹಾರದ ಕೊರತೆ ಉಂಟಾಗಿ ತೀವ್ರ ಸಮಸ್ಯೆಗೆ ಸಿಲುಕುತ್ತೇವೆ. ಆದುದರಿಂದ ಈಗಿನಿಂದಲೇ ಸಾವಯವ ಕೃಷಿಗೆ ಹೊತ್ತು ನೀಡಿ ಭೂಮಿಯ ಫಲವತ್ತತೆ ಉಳಿಸಿದರೆ ಒಳ್ಳೆಯದು” ಎಂದು ಹೇಳಿದರು.
ಮಳವಳ್ಳಿ ತಾಲೂಕು ಕೃಷಿ ಸಹಾಯಕ ನಿರ್ದೇಶಕ ದೀಪಕ್ ಮಾತನಾಡಿ, “ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸಾವಯವ ಕೃಷಿಕರು ಪಡೆದುಕೊಳ್ಳಲು ನಮ್ಮ ಸಹಕಾರ ಸದಾ ಇರುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಂಬೇಡ್ಕರ್ ಭಾವಚಿತ್ರ ಭಗ್ನಗೊಳಿಸಿ ವಿಕೃತಿ ಮೆರೆದ ಕಿಡಿಗೇಡಿಗಳು: ಬಂಧನಕ್ಕೆ ದಸಂಸ ಆಗ್ರಹ
ಸಂಘದ ಅಧ್ಯಕ್ಷ ಮಹೇಶ್ ಕುಮಾರ್ ಮಾತನಾಡಿ, “ಸರ್ಕಾರದಿಂದ ಸಿಗುವ ಸೌಲತ್ತುಗಳು ಹಾಗೂ ಪ್ರಶಸ್ತಿಗಳು ಸಾವಯವ ಕೃಷಿಕರಿಗೆ ಪ್ರತ್ಯೇಕವಾಗಿ ದೊರಕುವಂತೆ ಮಾಡಬೇಕು” ಎಂದು ತಿಳಿಸಿದರು.
ಈ ಸಭೆಯಲ್ಲಿ ಭಾರತಿ ಕಾಲೇಜಿನ ಕಾರ್ಯದರ್ಶಿ ಬಿ ಎಂ ನಂಜೇಗೌಡ, ಕೆಆರ್‌ಎಸ್ ಅಣೆಕಟ್ಟೆಯ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಬಸವರಾಜೇಗೌಡ, ಜೈನ್ ಡ್ರಿಪ್ ಇರಿಗೇಷನ್‌ನ ವ್ಯವಸ್ಥಾಪಕ ವೃಷಭೇಂದರ್, ಸಾವಯವ ಕೃಷಿಕರಾದ ಪ್ರವೀಣ್, ಬಾದಾಮಿ ಚಿಕ್ಕಣ್ಣ, ವಡ್ಡರಹಳ್ಳಿ ಶಿವಕುಮಾರ್, ಜೆಸಿಬಿ ಶಿವು, ಹಂಚಿಪುರ ನಾಗರಾಜು, ಶಾಂತಕೃಷ್ಣ, ತನುಜಾ, ಸುವರ್ಣ, ಸಿಂಧು, ಡಾ. ಕಬಿನಿಗೌಡ, ವೀರಭದ್ರು ಸೇರಿದಂತೆ ನೂರಾರು ಮಂದಿ ಸಾವಯವ ಕೃಷಿಕರು ಇದ್ದರು.