ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ ಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಾಕಿ ಮಾಂತ್ರಿಕ ದ್ಯಾನ್ ಚಂದ್ ಅವರ 119ನೇ ಜನ್ಮದಿನದ ಆಚರಿಸಿದರು.
ಡಾ. ಕೆ ವೈ ಶ್ರೀನಿವಾಸ್ ಮಾತನಾಡಿ “ಮಕ್ಕಳೇ ನಿಮಗೆ ಇವತ್ತು ಯಾವ ದಿನವೆಂದು ಗೊತ್ತಿಲ್ಲ. ಆಗಸ್ಟ್ 29ರ ವಿಶೇಷತೆಯ ಕುರಿತು ಯಾವ ಪತ್ರಿಕೆಯಲ್ಲೂ ಒಂದು ಸುದ್ದಿ ಇಲ್ಲ. ನಮ್ಮ ಒಕ್ಕೂಟದ ಸ್ಥಿತಿ ಈ ಮಟ್ಟಿಗಿದೆ. ಒಲಂಪಿಕ್ಸ್‌ನಲ್ಲಿ ನಮಗೆ ಸಿಕ್ಕ ಪದಕಗಳ ಸಂಖ್ಯೆಯೇ ಕ್ರೀಡೆಯ ಬಗ್ಗೆ ನಮಗಿರುವ ಉದಾಸಿನತೆಯ ಮನಸ್ಥಿತಿಯನ್ನು ತಿಳಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
“ಆಗಸ್ಟ್ 29ರಂದು ದ್ಯಾನ್ ಚಂದ್ ಅವರ ಹುಟ್ಟುಹಬ್ಬ. ಈ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಧ್ಯಾನ್ ಚಂದ್ ಅವರು ಮಿಲಿಟರಿಯಲ್ಲಿ ಸೈನಿಕರಾಗಿದ್ದರು. ಹಗಲಿನಲ್ಲಿ ಕೆಲಸ ಮಾಡುತ್ತ ರಾತ್ರಿ ಬೆಳದಿಂಗಳ ಬೆಳಕಿನಲ್ಲಿ ಹಾಕಿ ಅಭ್ಯಾಸ ಮಾಡುತ್ತಿದ್ದರು. ಆದ್ದರಿಂದ ʼಧ್ಯಾನ್‌ಚಂದ್ʼ ಎಂಬ ಹೆಸರು ಬಂತು” ಎಂದು ಮಕ್ಕಳಿಗೆ ತಿಳಿಸಿದರು.
ವಕೀಲ ಸಿ ಎಸ್ ವೆಂಕಟೇಶ್ ಮಾತನಾಡಿ, “ಹೆಣ್ಣುಮಕ್ಕಳಿಗೆ ಕ್ರೀಡೆ ಎಂದರೆ ಇಷ್ಟ ಇಲ್ವಾ. ನಿಮ್ಮ ಸುತ್ತಮುತ್ತ ವಾತಾವರಣ ಕ್ರೀಡೆಗೆ ಪೂರಕವಾಗಿ ಇಲ್ವಾ. ತಂದೆ-ತಾಯಿ ಶಿಕ್ಷಕರು ನಿಮ್ಮ ಕ್ರೀಡಾ ಬೆಳವಣಿಗೆಗೆ ಸಹಾಯ ಮಾಡುತ್ತಲ್ವಾ ಅಥವಾ ನಿಮಗೇ ಆಸಕ್ತಿ ಇಲ್ವಾ. ಮನೆಗಳಲ್ಲಿ ಓದು ಬರಹಕ್ಕೆ ಮಾತ್ರ ಒತ್ತು ಕೊಟ್ಟಾಗ ಕ್ರೀಡೆಯ ಆಸಕ್ತಿ ಕಡಿಮೆಯಾಗುತ್ತದೆ. ವಿನೇಶ್ ಫೋಗಟ್ ಎಷ್ಟೇ ಕಷ್ಟ, ಅಡೆತಡೆ ಬಂದರೂ ಒಲಂಪಿಕ್ಸ್‌ನಲ್ಲಿ ಗೆದ್ದು ಬಂದರು. ನೀವೂ ಕೂಡಾ ಅದೇ ರೀತಿ ಕ್ರೀಡೆಯಲ್ಲಿ ಸಾಧನೆ ಮಾಡಬೇಕು” ಎಂದು ಹೆಣ್ಣುಮಕ್ಕಳಿಗೆ ಸಲಹೆ ನೀಡಿದರು.
ಶೆಟ್ಟಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಅಪ್ಪಾಜಿ ಕೆ ಮಾತನಾಡಿ, “ನಮ್ಮ ಪಂಚಾಯಿತಿಗೆ ಶುಭರಾಣಿ ಎಂಬ ಪಿಡಿಒ ಬಂದಿದ್ದಾರೆ. ಪ್ರಧಾನಮಂತ್ರಿಗಳು ಮನದಮಾತಿನಲ್ಲಿ ಇವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಅಂದರೆ ಅವರ ಸಾಧನೆ ಏನೆಂಬುದನ್ನು ತಾವುಗಳು ಯೋಚನೆ ಮಾಡಬೇಕು. ಗ್ರಾಮ ಪಂಚಾಯಿತಿಯ ಸಮಗ್ರ ಏಳಿಗೆಗೆ ಮಾಡಿದ ಕೆಲಸವನ್ನು ಗುರುತಿಸಿ, ಇವರ ಹೆಸರನ್ನು ಮನದಮಾತಿನಲ್ಲಿ ಪ್ರಸ್ತಾಪ ಮಾಡಿದ್ದಾರೆ. ಇವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ಬಂತು. ನೀವೂ ಕೂಡ ಪಿಡಿಒರಂತೆ ಸಾಧನೆ ಮಾಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಮುಖ್ಯ ಶಿಕ್ಷಕರಾದ ಮಂಚೇಗೌಡ, ಕೆ ಎಸ್ ಜಯಶಂಕರ್, ಶ್ರೀರಂಗಪಟ್ಟಣ ಸಮರ್ಪಣಾ ಟ್ರಸ್ಟ್(ರಿ) ಅಧ್ಯಕ್ಷ ಹರೀಶ್, ವಿಶ್ವಜ್ಞಾನಿ ಅಂಬೇಡ್ಕರ್ ಸಂಘದ ಅಧ್ಯಕ್ಷ ಮಾದೇಶ್ ಕೆ ಸಿ, ಸುಚಿತ್ರ, ಜೋಶಿ, ಪ್ರದೀಪ್, ಪ್ರಕಾಶ್, ಸ್ಮಿತಾ, ಪದ್ಮ ಇದ್ದರು.
Good message for the public