ಮಂಡ್ಯ | ಪತ್ರಕರ್ತರು ಸಂವೇದನಾಶೀಲತೆ, ಸಮಚಿತ್ತದಿಂದ ಕಾರ್ಯ ನಿರ್ವಹಿಸಬೇಕು: ಶಾಸಕ ಉದಯ್ ಗೌಡ

Date:

Advertisements

ಮಾಧ್ಯಮ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಪತ್ರಕರ್ತರಿಗೆ ಸಮಾಜದಲ್ಲಿ ಗೌರವ ಸಲ್ಲಬೇಕು ಎಂದು ಮದ್ದೂರು ಕ್ಷೇತ್ರದ ಶಾಸಕ ಉದಯ್ ಗೌಡ ತಿಳಿಸಿದರು.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಪತ್ರಿಕಾ ವೃತ್ತಿ ಸವಾಲಿನದು. ಮೇಲ್ನೊಟಕ್ಕೆ ಸುಖಕರವಾಗಿ ಕಂಡರೂ ವಾಸ್ತವ ಸಂಗತಿ ಬೇರೆಯೆ ಇದ್ದು, ನೆರೆ, ಬರ, ಕಷ್ಟ-ನಷ್ಟಗಳ ಸಂದರ್ಭದಲ್ಲಿ ಮೊದಲಿಗೆ ಧಾವಿಸಿ ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಾರೆ. ಇಂತಹ ಪತ್ರಕರ್ತರಿಗೆ ಗೌರವ ಸಲ್ಲಬೇಕು. ಪತ್ರಕರ್ತರು ತಮ್ಮ ವೃತ್ತಿ ಧರ್ಮಕ್ಕೆ ಚ್ಯುತಿ ಬರದಂತೆ ಕಾರ್ಯ ನಿರ್ವಹಿಸಬೇಕು. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದಂತೆ ಪತ್ರಿಕಾರಂಗಕ್ಕೂ ತನ್ನದೇ ಆದ ಜವಬ್ದಾರಿಗಳಿವೆ. ಇದನ್ನರಿತು ಕಾರ್ಯ ನಿರ್ವಹಿಸಬೇಕು” ಎಂದರು.

“ಪತ್ರಕರ್ತರು ಸಂವೇದಾನಶೀಲತೆಯೊಂದಿಗೆ ಸಮಚಿತ್ತದಿಂದ ಕಾರ್ಯನಿರ್ವಹಿಸುತ್ತ ಸತ್ಯಪರತೆಯೊಂದಿಗೆ ಕಾರ್ಯನಿರ್ವಹಿಸಬೇಕು. ಸಮಾಜದ ಎಲ್ಲ ವರ್ಗದ ಜನರ ಹಿತಕ್ಕಾಗಿ ಶ್ರಮಿಸುತ್ತಿರುವಂತೆಯೇ ಪತ್ರಕರ್ತರ ಹಿತವೂ ನನಗೆ ಮುಖ್ಯವಾಗಿದೆ. ಅದಕ್ಕಾಗಿ
ಪತ್ರಕರ್ತರ ಸಂಘಕ್ಕೆ ಅಗತ್ಯವಾದ ನಿವೇಶನ ಮತ್ತು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿ ಅದರ ಯಶಸ್ಸಿನೊಟ್ಟಿಗೆ ಇರುತ್ತೇನೆ. ಮದ್ದೂರಿನ ಪತ್ರಕರ್ತರ ಸಂಘ ರಾಜ್ಯಕ್ಕೆ, ರಾಷ್ಟ್ರಕ್ಕೆ ಮಾದರಿಯಾಗುವಂತೆ ಕಾರ್ಯ ನಿರ್ವಹಿಸಬೇಕು” ಎಂದರು.

Advertisements

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಮತ್ತಿಕೆರೆ ಜಯರಾಮ್‌ ಮಾತನಾಡಿ, “ಪತ್ರಕರ್ತರು ಸತ್ಯಪ್ರತಿಪಾದನೆ ಮಾಡುತ್ತ ನ್ಯಾಯಪರತೆಯೊಂದಿಗೆ ಕಾರ್ಯ ನಿರ್ವಹಿಸಬೇಕು. ಹಿಂದೆ ಮಾಧ್ಯಮದ ವರದಿಗೆ ಅಧಿಕಾರಿ ವರ್ಗ ಸ್ಪಂದಿಸುತ್ತಿತ್ತು. ಆದರೆ ಇಂದಿನ ದಪ್ಪನೆಯ ಚರ್ಮದ ಅಧಿಕಾರಿಗಳು, ರಾಜಕಾರಣಿಗಳು ಮಾಧ್ಯಮದ ವರದಿಗೆ ಸ್ಪಂದಿಸದಿರುವುದು ವಿಷಾದದ ಸಂಗತಿ. ಇದಕ್ಕೆ ಉದಾಹರಣೆಯಾಗಿ ಮದ್ದೂರು ಚನ್ನಪಟ್ಟಣದ ನಡುವೆ ಷಟಲ್‌ ಬಸ್‌ಗಳ ವ್ಯವಸ್ಥೆ ಇಲ್ಲದ ಬಗ್ಗೆ ನಿರಂತರ ವರದಿ ಮಾಡುತ್ತಿದ್ದರು. ಈ ಭಾಗದವರೇ ಸಾರಿಗೆ ಮಂತ್ರಿಗಳು ಇದ್ದ ಸಂದರ್ಭಕ್ಕೂ ಬಸ್ ವ್ಯವಸ್ಥೆ ಆಗಲೇ ಇಲ್ಲ. ಇಂದಿಗೂ ಅದೆ ಸಮಸ್ಯೆ ಮುಂದುವರೆದಿದೆ” ಎಂದರು.

ಪ್ರಾಸ್ತವಿಕ ನುಡಿಗಳನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಶಿವನಂಜಪ್ಪ ಮಾತನಾಡಿ, “ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಅಭಿಮಾನದ ಸಂಗತಿ. ಮತ್ತಿಕೆರೆ ಜಯರಾಮ್ ಅವರು ಪತ್ರಕರ್ತರ ಸಂಘದಲ್ಲಿ ಇಡುಗಂಟು ಇಡುವ ಮೂಲಕ ಪತ್ರಕರ್ತರರ ಸಂಕಷ್ಟದ ಸಮಯಕ್ಕೆ ನೆರವಾಗುವ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ನೆರವು ನೀಡುವ ಮೂಲಕ ಸಂಘಟಿತ ಪ್ರಯತ್ನ ಮಾಡಲಾಗುತ್ತಿದೆ” ಎಂದರು.

“ಮದ್ದೂರಿನ ಪತ್ರಕರ್ತರ ಸಂಘಕ್ಕೆ ನಿವೇಶನ ಹೊಂದುವ ಕನಸು ಈಡೇರಿಲ್ಲ. ಮದ್ದೂರಿನ ಶಾಸಕರು ಈ ನಿಟ್ಟಿನಲ್ಲಿ ಸಹಕರಿಸಿ ನಿವೇಶನ ಒದಗಿಸಬೇಕು” ಎಂದರು.

ಪ್ರಧಾನ ಕಾರ್ಯದರ್ಶಿ ಪಿ ನಂದೀಶ್ ವಾರ್ಷಿಕ ವರದಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕ ಪ್ರಭು ವೈದ್ಯನಾಥಪುರ, ನಗರಕೆರೆ ಪ್ರಮೊದ್ ಪ್ರತಿಭಾನ್ವಿತ ವಿಧ್ಯಾರ್ಥಿಗಳಾದ ವರ್ಷಿಣಿ ಹಾಗೂ ಪಂಚಮಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ಪುಟ್ಟಸ್ವಾಮಿ ಅವರು ಪತ್ರಿಕಾ ದಿನಾಚರಣೆಯ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿ ಮುಂದಿನ ದಿನದಲ್ಲಿಯೂ ಹೀಗೆ ಸಹಕಾರ ಇರಲಿ ಎಂದರು.

ಈ ಸುದ್ದಿ ಓದಿದ್ದೀರಾ? ಗುಬ್ಬಿ | ಬಗರ್‌ಹುಕುಂ ಸಾಗುವಳಿ ಸಕ್ರಮಗೊಳಿಸಲು ಪ್ರತಿಭಟನೆ : ಪತ್ರ ಚಳುವಳಿ ನಡೆಸಿ ಪ್ರಾಂತ ರೈತ ಸಂಘದಿಂದ ಹಕ್ಕೊತ್ತಾಯ

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ ಪಿ ಪ್ರಕಾಶ್ ಕಾರ್ಯದರ್ಶಿ ಸೊಮಶೇಖರ್, ಕೆರೆಗೋಡು ರಾಷ್ಟ್ರ ಸಮಿತಿ ಸದಸ್ಯ ಸಿ ಎನ್ ಮಂಜುನಾಥ್, ರಾಷ್ಟ್ರ ಸಮಿತಿ ಸದಸ್ಯ ಜೆ ಎಂ ಬಾಲಕೃಷ್ಣ, ಮಂಜುಳಾ ಕಿರುಗಾವಲು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರವಿ ಸಾವಂದಿಪುರ, ಕೆ ಎನ್ ನವೀನ್ ಕುಮಾರ್, ಖಜಾಂಚಿ ಆರ್ ಎನ್ ನಂಜುಂಡ ಸ್ವಾಮಿ, ಕಾರ್ಯದರ್ಶಿ ಬಿ ಎಸ್ ಜಯರಾಮು ಚಿನಕುರುಳಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷ ಕೆ ಸಿ ಮಂಜುನಾಥ್, ನಿರ್ದೆಶಕ ಅಣ್ಣೂರು ಸತೀಶ್, ಪತ್ರಕರ್ತರ ಸಂಘದ ಉಪಾಧ್ಯಕ್ಷ ಚಕ್ರಪಾಣಿ ಎಂ ಆರ್, ಆಶೊಕ್ ಕುಮಾರ್, ಚಾಮನಹಳ್ಳಿ ಮಂಜು, ಖಜಾಂಚಿ ವಿ ಎಸ್ ಪ್ರಭು, ಎಸ್ ಕೆ ಸುಂದರ್ ರಾಜ್, ಹೆಚ್ ಜಿ ರವಿಕುಮಾರ್, ಎಂ ಪಿ ವೆಂಕಟೇಶ್, ಸಿ ಹರೀಶ್, ಎಲ್ ಡಿ ನಾಗರಾಜ್, ಅಂಬರಹಳ್ಳಿ ಸ್ವಾಮಿ ಯು ಎಸ್, ಶಿವಕುಮಾರ್ ಕೃಷ್ಣ ಸಾವಂದಿಪುರ, ಕೆ ಎಸ್ ಮಧು, ಮಹದೇವು, ನಾಗಮ್ಮ ಆರ್, ಸುನಿಲ್ ಕುಮಾರ್ ಎ ಆರ್, ಆನಂದ ಇದ್ದರು.

ವರದಿ- ನ.ಲಿ.ಕೃಷ್ಣ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X