ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯುವ ಪ್ರೇಮಿಗಳು, ಪ್ರಜ್ಞಾವಂತರ ವೇದಿಕೆ, ದಸಂಸ, ಬೌದ್ಧ ಮಹಾ ಸಭಾ ಮುಖಂಡರ ನೆರವಿನೊಂದಿಗೆ ಶ್ರೀರಂಗಪಟ್ಟಣದ ಅಂಬೇಡ್ಕರ್ ಪುತ್ಥಳಿ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಸಕಲೇಶಪುರ ತಾಲೂಕಿನ ಯುವ ಪ್ರೇಮಿಗಳು ಅಂತರ್ಜಾತಿ ವಿವಾಹವಾಗಿದ್ದು, ಪೋಷಕರ ಭಯಕ್ಕೆ ಊರು ಬಿಟ್ಟು ಬಂದಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಬಂದು ಸೇರಿದ್ದಾರೆ.
ಸಕಲೇಶಪುರ ಪಟ್ಟಣದ ಕುಶಾಲ್ ನಗರ, ಟಿಎಂಸಿ ಕಾಲೊನಿಯ ಯುವಕ ಪ್ರಜ್ವಲ್ ದಲಿತ ಸಮುದಾಯದವರಾಗಿದ್ದು, ಸೇರಿದ್ದು, ತಾಲೂಕಿನ ಮಾಗಡಿ ಹಲಸುಲಿಗೆ ಗ್ರಾಮದ ಯುವತಿ ಸಂಜನಾ ಒಕ್ಕಲಿಗ ಸಮುದಾಯದವರಾಗಿದ್ದಾರೆ.

ಯುವ ಪ್ರೇಮಿಗಳು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿದ್ದರು. ಆದರೆ, ಮದುವೆಯಾಗಲು ತಮ್ಮ ಊರಿನಲ್ಲಿ ಜಾತಿ ಅಡ್ಡ ಬರುವ ಭಯದಿಂದ ಊರು ಬಿಟ್ಟು ಬಂದು ಕೆಅರ್‌ಎಸ್ ಬಳಿಯ ಅಕ್ಕನ ಮನೆಯಲ್ಲಿದ್ದರು. ಸಂಘಟನೆಗಳ ಸಹಾಯ ಪಡೆದು, ವಯಸ್ಕರರಾಗಿರುವ ಹಿನ್ನಲೆಯಲ್ಲಿ ಸ್ಥಳೀಯ ಮುಖಂಡರೆಲ್ಲರೂ ಸೇರಿ ಇಬ್ಬರಿಗೂ ಮದುವೆ ಮಾಡಿಸಿರುತ್ತಾರೆ. ಕಾನೂನು ಬದ್ದವಾಗಿ ವಿವಾಹ ನೋಂದಣಿಯೂ ಆಗಿದೆ.
ನವ ವಿವಾಹಿತ ಪ್ರಜ್ವಲ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾನು ದಲಿತ ಸಮುದಾಯದವನಾಗಿದ್ದು, ಹುಡುಗಿ ಒಕ್ಕಲಿಗ ಸಮುದಾಯದವರು. ಹಾಗಾಗಿ ಅವರ ಮನೆಯವರು ಸಕಲೇಶಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ನಮಗೆ ಪ್ರಾಣ ಭಯವಿದೆ. ನಮಗೆ ರಕ್ಷಣೆ ಬೇಕು. ನಾವು ಮರಳಿ ಸಕಲೇಶಪುರಕ್ಕೆ ತೆರಳಿ ಜೀವನ ನಡೆಸುತ್ತೇವೆ. ಯಾರಿಂದಲೂ ನಮಗೆ ತೊಂದರೆ ಆಗದಂತೆ ರಕ್ಷಣೆ ಕೊಡಿಸಿ” ಎಂದು ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ನೂಲಿ ಚಂದಯ್ಯ ಜಯಂತಿ ಆಚರಣೆ
ಬೌದ್ಧ ಬಿಕ್ಕು ಬಂತಾಜೆ ಅವರ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ನಡೆದ ಸರಳ ವಿವಾಹದಲ್ಲಿ ದಸಂಸ
ನಂಜುಂಡ ಮೌರ್ಯ, ವಕೀಲ ಸಿ ಎಸ್ ವೆಂಕಟೇಶ್, ಬೌದ್ಧ ಮಹಾಸಭಾ ರಂಗಪ್ಪ, ಬಾಬು ಜಗಜೀವನ್ ರಾಂ
ಸಂಘಟನೆ ಅದ್ಯಕ್ಷ ಸಿದ್ದರಾಜು, ಜನವಾದಿ ಮಹಿಳಾ ಸಂಘಟನೆ ತಾಲೂಕು ಅಧ್ಯಕ್ಷೆ ಜಯಮ್ಮ ಸೇರಿದಂತೆ ಹಲವು ಮುಖಂಡರು ಇದ್ದರು.