ಮೈಸೂರು-ನಿಡಘಟ್ಟ ನಡುವಿನ ಟೋಲ್ ಸಂಗ್ರಹ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಮತ್ತು ರೈತ ಸಂಘಟನೆ ಕಾರ್ಯಕರ್ತರು ಶ್ರೀರಂಗಪಟ್ಟಣ ಬಳಿಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಗಣಂಗೂರು ಟೋಲ್ ಪ್ಲಾಜಾ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.
ಇ-ವೇ ಕಾಮಗಾರಿ ಪೂರ್ಣಗೊಳ್ಳದಿದ್ದರೂ ವಾಹನ ಚಾಲಕರ ಮೇಲೆ ಟೋಲ್ ವಿಧಿಸಿರುವ ಬಗ್ಗೆ ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಮತ್ತು ಎನ್ಎಚ್ಎಐ ವಿರುದ್ಧ ಘೋಷಣೆ ಕೂಗಿದ್ದು, ಟೋಲ್ ಪ್ಲಾಜಾದಲ್ಲಿ ಸ್ಥಳೀಯ ನಿವಾಸಿಗಳಿಗೆ ಉದ್ಯೋಗ ನೀಡುವುದನ್ನು ಬಿಟ್ಟು ಹೊರಗಿನವರಿಗೆ ಉದ್ಯೋಗ ನೀಡಿರುವುದನ್ನು ಖಂಡಿಸಿದರು.
ಮೈಸೂರಿನಿಂದ ಮಂಡ್ಯಕ್ಕೆ ಮತ್ತು ಶ್ರೀರಂಗಪಟ್ಟಣದಿಂದ ಮಂಡ್ಯಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಮೈಸೂರು ಮತ್ತು ನಿಡಘಟ್ಟ ನಡುವೆ ನಿಗದಿಪಡಿಸಿದ ದರದಂತೆ ಫಾಸ್ಟ್‌ಟ್ಯಾಗ್ ಇಲ್ಲದಿದ್ದರೂ ದುಪ್ಪಟ್ಟು (₹155) ಟೋಲ್ ಮೊತ್ತ ಸಂಗ್ರಹಿಸಿರುವ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜುಲೈ 15ರವರೆಗೆ ಹೆಬ್ಬಾಳ ಮೇಲ್ಸೇತುವೆ ಬಳಿ ಸಂಚಾರ ದಟ್ಟಣೆ ಬಿಸಿ
“ಬೆಂಗಳೂರು ಮತ್ತು ಮೈಸೂರು ನಡುವೆ ₹320 ಟೋಲ್ ಶುಲ್ಕ ನಿಗದಿಸಿರುವುದು ವಿಪರೀತವಾಗಿದೆ” ಎಂದು ಆರೋಪಿಸಿದರು.