ಹಳ್ಳಿಕಾರ್ ತಳಿಯ ಒಂಟಿ ಎತ್ತು ಬರೋಬ್ಬರಿ 9.20 ಲಕ್ಷ ರೂಪಾಯಿಗೆ ಮಾರಾಟವಾಗಿದ್ದು, ಎತ್ತನ್ನು ಸಾಕಿದ್ದ ಶ್ರೀರಂಗಪಟ್ಟಣದ ರೈತ ನವೀನ್ ಕುಟುಂಬ ಹರ್ಷ ವ್ಯಕ್ತಪಡಿಸಿದೆ.
ಶ್ರೀರಂಗಪಟ್ಟಣ ಶ್ರೀನಿವಾಸ ಅಗ್ರಹಾರ ನಿವಾಸಿ ನವೀನ್ ಅವರು ಸಾಕಿದ್ದ ಹಳ್ಳಿಕಾರ್ ತಳಿಯ ಎತ್ತು ಸಾಕಿದ್ದರು. ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದ ಆ ಎತ್ತಿಗೆ ‘ಜಾಗ್ವರ್’ ಎಂಬ ಹೆಸರನ್ನೂ ಇಟ್ಟಿದ್ದರು.
ಹಲವಾರು ಎತ್ತಿನಗಾಡಿ ಓಟ ಸ್ಪರ್ಧೆಯಲ್ಲಿ ಭಾಗವಹಿಸಿ, ಹತ್ತಾರು ಪ್ರಶಸ್ತಿಗಳನ್ನು ಎತ್ತು ಗಳಿಸಿತ್ತು. ಇದೀಗ, ಆ ಎತ್ತನ್ನ ತಮಿಳುನಾಡಿನ ವ್ಯಕ್ತಿಯೊಬ್ಬರು ಬರೋಬ್ಬರಿ 9.20 ಲಕ್ಷ ರೂ. ಕೊಟ್ಟು ಖರೀದಿ ಮಾಡಿದ್ದಾರೆ.
ಮೂರ್ನಾಲ್ಕು ವರ್ಷಗಳ ಹಿಂದೆ ಇಂಡವಾಳು ಗ್ರಾಮದಿಂದ ನವೀನ್ ಅವರು ಆ ಎತ್ತನ್ನು 1.20 ಲಕ್ಷ ರೂ.ಗೆ ಖರೀದಿಸಿದ್ದರು. ಚೆನ್ನಾಗಿ ಸಾಕಿದ್ದರು. ಈ ಆ ಎತ್ತು 8 ಲಕ್ಷ ಲಾಭದೊಂದಿಗೆ ಮಾರಾಟವಾಗಿದೆ.