ಮಾಹಿತಿ ಆಯುಕ್ತರ ಜರೂರು ನೇಮಕಕ್ಕೆ ಸಾರ್ವಜನಿಕ ವಲಯದಿಂದ ಆಗ್ರಹ ಕೇಳಿ ಬರುತ್ತಿದೆ. ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠದಲ್ಲಿ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ಖಾಲಿ ಇರುವ ಮಾಹಿತಿ ಆಯುಕ್ತರ ಹುದ್ದೆ ಭರ್ತಿ ಮಾಡಬೇಕು. ಅಲ್ಲಿನ ಪೀಠದಲ್ಲಿದ್ದ ಗೀತಾ ರಾಜೀನಾಮೆ ಬಳಿಕ 2022ರ ಏಪ್ರಿಲ್ನಿಂದ ಆಯುಕ್ತರ ನೇಮಕ ಆಗಿಲ್ಲ. ಅಲ್ಲಿಯ ನಾಗರೀಕರ ಸುಮಾರು 15000ಕ್ಕೂ ಹೆಚ್ಚಿನ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿದೆ.

ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿರುವ ಕಲಬುರಗಿ ಪೀಠದ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶಿಸಬೇಕು. ರಾಜ್ಯ ಸರ್ಕಾರ 2019ರಲ್ಲಿ ಬೆಳಗಾವಿ ಮತ್ತು ಕಲಬುರಗಿಯಲ್ಲಿ ಮಾಹಿತಿ ಆಯೋಗದ ಪೀಠಗಳನ್ನು ರಚನೆ ಮಾಡಿದೆ. ಆದರೆ, ಕಲಬುರಗಿ ಪೀಠ ಇನ್ನೂ ಕಾರ್ಯಾರಂಭ ಮಾಡಿಲ್ಲ. ಈ ಪೀಠಕ್ಕೆ 2022ರ ಏಪ್ರಿಲ್ನಲ್ಲಿ ರವೀಂದ್ರ ಢಾಕಪ್ಪರನ್ನು ಆಯುಕ್ತರನ್ನಾಗಿ ನೇಮಕ ಮಾಡಲಾಯಿತು. ಅವರು ಕಲಬುರಗಿ ಬದಲಿಗೆ ಬೆಂಗಳೂರಿನಲ್ಲೇ ಕಲಾಪ ನಡೆಸುತ್ತಿದ್ದಾರೆ.
ಬೆಂಗಳೂರು ಪೀಠದಲ್ಲಿ ಆರು ಆಯುಕ್ತರ ಹುದ್ದೆಗಳು ಸುಮಾರು ಆರು ತಿಂಗಳಿನಿಂದಲೂ ಖಾಲಿ ಇದೆ. ಸುಮಾರು 40000 ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ಕರ್ನಾಟಕ ಮಾಹಿತಿ ಆಯೋಗದಲ್ಲಿ ಒಂದು ಮುಖ್ಯ ಮಾಹಿತಿ ಆಯುಕ್ತರ ಹುದ್ದೆ ಮತ್ತು ಏಳು ಮಾಹಿತಿ ಆಯುಕ್ತರ ಹುದ್ದೆಗೆ ಸುಮಾರು ಆರು ತಿಂಗಳ ಹಿಂದೆಯೇ ಪ್ರಕಟಣೆಯನ್ನು ಹೊರಡಿಸಲಾಯಿತು.
ಇದನ್ನು ಓದಿದ್ದೀರಾ? ಚಿತ್ರದುರ್ಗ | ಕೇಂದ್ರ ಸರ್ಕಾರದ ಹೊಸ ನಿಯಮಗಳಿಂದ ಮನರೇಗಾ ಕಾರ್ಮಿಕರ ಹಕ್ಕು ದಮನ
ಆಯ್ಕೆ ಸಮಿತಿಯ ಸಭೆಯನ್ನು ಕೂಡ ಸುಮಾರು ನಾಲ್ಕು ತಿಂಗಳ ಹಿಂದೆಯೇ ನಡೆಸಿ ಆಯ್ಕೆ ಪಟ್ಟಿಯನ್ನು ಅಂತಿಮ ಗೊಳಿಸಲಾಯಿತು. ಆದರೆ ಅಂತಿಮ ಪ್ರಕಟಣೆಯನ್ನು ಅನೇಕ ಕಾರಣಗಳಿಂದ ತಡೆ ಹಿಡಿಯಲಾಗಿದೆ. ಆಯುಕ್ತರ ಹುದ್ದೆಯನ್ನು ಸಕಾಲದಲ್ಲಿ ಭರ್ತಿ ಮಾಡದ ಕಾರಣ ನಾಗರೀಕರು ಮಾಹಿತಿ ಹಕ್ಕಿನಡಿ ಮಾಹಿತಿ ಪಡೆಯಲು ವರ್ಷಾನು ಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ.
ರಿಟ್ ಪಿಟಿಷನ್ ಸಂಖ್ಯೆ 436/2018 ರ ಮೂಲಕ ಕಡ್ಡಾಯವಾಗಿ ಮಾಹಿತಿ ಆಯುಕ್ತರನ್ನು ನೇಮಕ ಮಾಡಲೇಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಕೊಟ್ಟಿದ್ದರು ಸಹಿತ ರಾಜ್ಯ ಸರ್ಕಾರ ಬೆಲೆ ಕೊಡುತ್ತಿಲ್ಲ ಅನ್ನುವುದು ದುರಂತವೇ ಸರಿ. ರಾಜ್ಯ ಸರ್ಕಾರದ ಈ ನಡೆ ನ್ಯಾಯಾಂಗ ನಿಂದನೆ ಆಗುವುದಿಲ್ಲವೇ? ಇದು ಪಾರದರ್ಶಕ ಆಡಳಿತದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡಿದೆ. ಆಡಳಿತದಲ್ಲಿ ಭ್ರಷ್ಟಾಚಾರದ ಹೆಚ್ಚಳದ ಮೇಲೆ ಕೂಡ ಪರಿಣಾಮ ಉಂಟು ಮಾಡಿದೆ.
ಇದನ್ನು ನೋಡಿದ್ದೀರಾ? ಮಂಡ್ಯ | ಕನ್ನಂಬಾಡಿ ಕಟ್ಟಿದ ತಮಿಳರ ಎತ್ತಂಗಡಿ?
ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಇಬ್ಬರು ಮಾಹಿತಿ ಆಯುಕ್ತರ ಅವಧಿಯೂ ಇನ್ನು ಐದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಹೊಸ ಆಯುಕ್ತರುಗಳ ನೇಮಕ ಈ ಕೂಡಲೇ ಮಾಡಿದಿದ್ದಲ್ಲಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಸಹಾಯಕವಾಗಲಿದೆ. ಇದರಿಂದ ಹೊಸ ಆಯುಕ್ತರುಗಳು ಸಮರ್ಥವಾಗಿ ಮತ್ತು ನಾಗರೀಕ ಸ್ನೇಹಿಯಾಗಿ ಕಾರ್ಯ ನಿರ್ವಹಿಸುವಲ್ಲಿ ಸಹಾಯಕವಾಗಲಿದೆ.
ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಆಡಳಿತದಲ್ಲಿ ನಾಗರೀಕರ ಭಾಗವಹಿಸುವಿಕೆಯನ್ನು ತರುವ ನಿಟ್ಟಿನಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಅಂದಿನ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದ ಈ ಜನಪರ, ಕಾನೂನನ್ನು ರಕ್ಷಿಸುವ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಜವಾಬ್ದಾರಿ ಈಗಿನ ಕಾಂಗ್ರೆಸ್ ಸರಕಾರ ಮೇಲಿದೆ.
ಈ ವಿಷಯವನ್ನು ಆದ್ಯತೆಯ ಮೇಲೆ ಪರಿಗಣಿಸಿ ತಕ್ಷಣವೇ ಒಬ್ಬರು ಮುಖ್ಯ ಆಯುಕ್ತರ ಮತ್ತು ಏಳು ಮಾಹಿತಿ ಆಯುಕ್ತರ ಹುದ್ದೆಯ ನೇಮಕಕ್ಕೆ ಅನುಮೋದನೆ ನೀಡುವ ಮೂಲಕ ನಾಗರೀಕರ ಹಕ್ಕನ್ನು ಪುನರ್ ಪ್ರತಿಷ್ಠಾಪಿಸ ಬೇಕು ಎಂಬುದು ನಾಗರೀಕರ ಒತ್ತಾಯವಾಗಿದೆ.
ಸಿ ಪಿ ತಿಪ್ಪೇಸ್ವಾಮಿ, ಮಾಹಿತಿ ಬಳಕೆದಾರರು ಈದಿನ.ಕಾಮ್ ಜೊತೆ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ನನ್ನನ್ನು ಸೇರಿದಂತೆ ಬಹಳ ಜನ ಮಾಹಿತಿ ಬಳಕೆದಾರರು ಕರ್ನಾಟಕ ಮಾಹಿತಿ ಆಯೋಗದಲ್ಲಿ ಪೂರ್ಣ ಪೀಠ ಏರ್ಪಡಿಸಿ, ಸಾರ್ವಜನಿಕ ಪ್ರಾಧಿಕಾರ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರ ಇವರಿಗೆ ನೋಟಿಸ್ ತಿಳುವಳಿಕೆ ಪತ್ರ ನೀಡದೆ ಬರಿ ನಮಗೆ ಮಾತ್ರ ತಿಳುವಳಿಕೆ ಪತ್ರ ನೀಡಿ ಹಲವಾರು ಪ್ರಕರಣಗಳನ್ನು ಪೂರ್ಣ ಪೀಠದಲ್ಲಿ ಮುಕ್ತಾಯ ಮಾಡಿರುತ್ತಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ ಎಂದರು.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿ ಪ್ರಜೆ ಕೂಡ ಮಾಹಿತಿ ಕೇಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದರ ಪ್ರಕಾರ ಪ್ರಜೆಗಳು ಮಾಹಿತಿ ಕೇಳುತ್ತಾರೆ. ಆದರೆ ಕರ್ನಾಟಕ ಮಾಹಿತಿ ಆಯೋಗ ಇಲ್ಲಿ ದಿನಾಂಕ 27-02-2024ರಂದು ನನ್ನ ಒಟ್ಟು 343 ಪ್ರಕರಣಗಳನ್ನು ಪೂರ್ಣಪೀಠದಲ್ಲಿ ಮುಕ್ತಾಯ ಮಾಡಿರುತ್ತಾರೆ. ಇದರಲ್ಲಿ ಪ್ರಜೆಗಳ ಹಕ್ಕುಗಳು ಮೊಟಕುಗೊಳಿಸುವ ಕೆಲಸ ಆಗಿದೆ. ಸಾರ್ವಜನಿಕ ಪ್ರಾಧಿಕಾರ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರ ಕುಮ್ಮಕ್ಕು ನೀಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಅರ್ಜಿದಾರರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳದೆ ಸಾರ್ವಜನಿಕ ಸೇವಕರ ಪರ ಬ್ಯಾಟಿಂಗ್ ಮಾಡಿರುವುದು ಮಾಹಿತಿ ಆಯೋಗದ ಘನತೆ, ಗೌರವಕ್ಕೆ ದಕ್ಕೆ ತರುವುದು ಶೋಭೆಯಲ್ಲ. ಅಂಜಲಿ ಭಾರದ್ವಾಜ್ ಆಯುಕ್ತರ ನೇಮಕಾತಿ ವಿಚಾರದಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ. ಅವರಿಗೂ ಸಹ ರಾಜ್ಯದ ಪರವಾಗಿ ಅಭಿನಂದಗಳನ್ನು ಅರ್ಪಿಸುತ್ತೇನೆ ಎಂದರು.
