ಮಂಡ್ಯದಲ್ಲಿ ಮಾರ್ಚ್ 13ರಂದು ʼಕುವೆಂಪು ಕ್ರಾಂತಿ ಕಹಳೆ 50, ಕವಿ ಆಶಯದ ಮಾದರಿ ಮಂಡ್ಯದೆಡೆಗೆʼ ಎಂಬ ವಿನೂತನ ಕಾರ್ಯಕ್ರಮವನ್ನು ಜಾಗೃತ ಕರ್ನಾಟಕ ಆಯೋಜಿಸಿದೆ.
ಬೆಳಿಗ್ಗೆ 10- 10.45 ಗಂಟೆಗೆ ಸಂಜಯ ವೃತ್ತದಲ್ಲಿರುವ ಕುವೆಂಪು ಪ್ರತಿಮೆಯ ಬಳಿ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜ ಸಹಿತ ಕುವೆಂಪು ಘೋಷದೊಂದಿಗೆ ಮಾನವ ಸರಪಳಿ ನಿರ್ಮಾಣ. ಉದ್ಘಾಟನೆ- ಕೆ ಮಾಯಿಗೌಡ, ಡಾ ಸುಜಯ್ ಕುಮಾರ್ ಮತ್ತು ಜಿಲ್ಲೆಯ ಹಿರಿಯರಿಂದ.
ಸಭಾ ಕಾರ್ಯಕ್ರಮ: ಅಧ್ಯಕ್ಷತೆ -ಗುರು ಪ್ರಸಾದ್ ಕೆರಗೋಡು, ದಸಂಸ ರಾಜ್ಯ ಸಂಚಾಲಕ. ಮುಖ್ಯ ಅತಿಥಿ- ಹಿರಿಯ ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್. ಭಾಷಣಕಾರರು – ಸಾಮಾಜಿಕ ಚಿಂತಕ ಸುಧೀರ್ ಕುಮಾರ್ ಮುರೊಳ್ಳಿ, ಸಾಮಾಜಿಕ ಹೋರಾಟಗಾರ ಎಂ ಜಿ ಹೆಗಡೆ, ಲೇಖಕಿ ಸೌಮ್ಯ ಕೋಡೂರು.
ಪ್ರತಿಸ್ಪಂದನೆ:ಕವಿ ರಾಜೇಂದ್ರ ಪ್ರಸಾದ್ ಕವಿ, ಪೂರ್ಣಿಮಾ(ಮಹಿಳಾ ಮುನ್ನಡೆ), ಸಿ ಕುಮಾರಿ (ಸಿಪಿಐಎಂ), ಲೇಖಕಿ ತೇಜ ಯಾಲಕ್ಕಯ್ಯ ಲೇಖಕಿ.
ಸ್ವಾಗತ- ನಾಗೇಶ್ ʼನುಡಿ ಕರ್ನಾಟಕʼ, ಪ್ರಸ್ತಾವನೆ- ಬಿ ಸಿ ಬಸವರಾಜು, ಸಂಚಾಲಕರು ʼಜಾಗೃತ ಕರ್ನಾಟಕʼ. ನಿರ್ವಹಣೆ- ರಮೇಶ್ ಗೌಡ, ನ್ಯಾಯವಾದಿ. ಸ್ಥಳ- ರೈತ ಸಭಾಂಗಣ, ಮಂಡ್ಯ
