ಮಹಾತ್ಮ ಜ್ಯೋತಿಬಾ ಫುಲೆ ಜನ್ಮದಿನಾಚರಣೆ: ಶೋಷಿತರ, ಹೆಣ್ಣುಮಕ್ಕಳ ಶಿಕ್ಷಣದ ರೂವಾರಿಯ ಸ್ಮರಣೆ

Date:

ಸಮಾಜದಲ್ಲಿ ಇಂದಿಗೂ ಜಾತಿ, ಧರ್ಮ, ಲಿಂಗ ತಾರತಮ್ಯಗಳು ಜೀವಂತವಾಗಿವೆ. ಆದರೆ 200 ವರ್ಷಗಳ ಹಿಂದೆಯೇ ಜ್ಯೋತಿಬಾ ಫುಲೆ ಹೆಣ್ಣುಮಕ್ಕಳಿಗೆ, ಶೋಷಿತ ವರ್ಗದವರಿಗೆ ಶಿಕ್ಷಣದ ಬಾಗಿಲು ತೆರೆದರು. ಆ ಕಾಲದ ಪುರುಷಪ್ರಧಾನ ಸಮಾಜದ ವಿರೋಧದ ನಡುವೆಯೂ 1840-50ರ ದಶಕದಲ್ಲಿ ಹೆಣ್ಣುಮಕ್ಕಳಿಗಾಗಿ ಶಾಲೆಗಳನ್ನು ಆರಂಭಿಸಿದರು ಎಂದು ಪ್ರಜ್ಞಾವಂತ ವೇದಿಕೆಯ ಸಂಚಾಲಕ ಸಿ ಎಸ್ ವೆಂಕಟೇಶ್ ಅವರು ಫುಲೆಯವರ ಹೋರಾಟದ ಬದುಕನ್ನು ಸ್ಮರಿಸಿದರು.

- Advertisement -

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪ್ರಜ್ಞಾವಂತ ವೇದಿಕೆ ಹಾಗೂ ಸಮರ್ಪಣಾ ಟ್ರಸ್ಟ್ ಒಗ್ಗೂಡಿ ಏಪ್ರಿಲ್ 11ರ ಶನಿವಾರ ಕ್ರಾಂತಿಕಾರಿ ಸಮಾಜ ಸುಧಾರಕ ಮಹಾತ್ಮ ಜ್ಯೋತಿಬಾ ಫುಲೆಯವರ 200ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಮಾತನಾಡಿರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

“ತಮ್ಮ ಪತ್ನಿ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಮೂಲಕ ವಿದ್ಯಾದಾನ ಮಾಡಿಸಿದರು. ಕೇವಲ ಶಿಕ್ಷಣವಷ್ಟೇ ಅಲ್ಲದೆ, ಸತಿ ಸಹಗಮನ ಪದ್ಧತಿ ವಿರೋಧಿಸಿ, ವಿಧವಾ ವಿವಾಹಕ್ಕೆ ಪ್ರೋತ್ಸಾಹ ನೀಡಿದ ಮಹಾನ್ ಚೇತನ ಅವರು. ಇಂದಿನ ನಮ್ಮ ಶೈಕ್ಷಣಿಕತೆ ಮುನ್ನಡೆಗೆ ಅಂದು ಅವರು ಹಾಕಿಕೊಟ್ಟ ಬುನಾದಿಯೇ ಕಾರಣ. ಇಂತಹ ಮಹನೀಯರನ್ನು ನಾವು ಕೃತಜ್ಞತೆಯಿಂದ ನೆನೆಯಬೇಕು” ಎಂದು ಮನದುಂಬಿ ನೆನೆದರು.

​ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್ ಮಾತನಾಡಿ, “ಮಹಾರಾಷ್ಟ್ರದ ಪುಣೆಯವರಾದ ಜ್ಯೋತಿಬಾ ಫುಲೆ ತಮ್ಮ ಪತ್ನಿಗೆ ಶಿಕ್ಷಣ ನೀಡಿ ದೇಶದ ಮೊದಲ ಮಹಿಳಾ ಶಿಕ್ಷಕಿಯನ್ನಾಗಿ ಮಾಡಿದ ಕೀರ್ತಿಗೆ ಭಾಜನರಾಗಿದ್ದಾರೆ. ಅವರು ಅಸ್ಪೃಶ್ಯತೆ ವಿರುದ್ಧ ಕೇವಲ ದನಿ ಎತ್ತಿದ್ದಲ್ಲದೆ, ತಮ್ಮ ಮನೆಯ ಮುಂದಿನ ಬಾವಿಯ ನೀರನ್ನು ಶೋಷಿತರಿಗೆ ಮುಕ್ತಗೊಳಿಸಿ ದೊಡ್ಡತನ ಮೆರೆದರು. ಅವರ ಇಂತಹ ಜನಪರ ಒಲವು ಕಂಡು ಅಂದಿನ ಜನರೇ ಅವರಿಗೆ ‘ಮಹಾತ್ಮ’ ಎಂಬ ಬಿರುದು ನೀಡಿದರು” ಎಂದು ಇತಿಹಾಸವನ್ನು ತಿಳಿಸಿದರು.

“ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಮೂವರು ಗುರುಗಳಲ್ಲಿ ಜ್ಯೋತಿಬಾ ಫುಲೆ ಅವರನ್ನೂ ಒಬ್ಬರೆಂದು ಒಪ್ಪಿಕೊಂಡಿದ್ದರು ಎನ್ನುವುದು ಅವರ ನಡೆನುಡಿಯ ಎತ್ತರವನ್ನು ತೋರಿಸುತ್ತದೆ. ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ ಇಂತಹ ಮಹನೀಯರ ವಿಚಾರಗಳನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕು” ಎಂದು ಬಣ್ಣಿಸಿದರು.

ಈ ಸುದ್ದಿ ಓದಿದ್ದೀರಾ? ಹಾಸನ | ಕಾಡಾನೆ ದಾಳಿ; ರೈತ ಸಾವು 

​ಈ ಸಮಾರಂಭದಲ್ಲಿ ಪ್ರಜ್ಞಾವಂತ ವೇದಿಕೆಯ ಕಾರ್ಯದರ್ಶಿ ಚಿಕ್ಕತಮ್ಮೇಗೌಡ, ಮುಸ್ಲಿಂ ಸೌಹಾರ್ದ ವೇದಿಕೆಯ ಅಧ್ಯಕ್ಷ ಅಪ್ಸರ್ ಖಾನ್, ಕಾರ್ಯದರ್ಶಿ ಗಂಜಾಂ ಆಯುಬ್, ಕಡತನಾಳು ರಾಕೇಶ್, ಸುಷ್ಮಾ, ಶಿವಮ್ಮ, ಮೀನಾ ಸೇರಿದಂತೆ ಹಲವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲ್ಕತ್ತಾ ದುರ್ಗಾ ಪೂಜೆ ಕಾಲ್ತುಳಿತ ದುರಂತ; ಸಾವಿನ ಸಂಖ್ಯೆ 19ಕ್ಕೆ ಏರಿಕೆ; 7 ಜನರ ಬಂಧನ!

ಉತ್ತರ ಕೋಲ್ಕತ್ತಾದ ಪ್ರಸಿದ್ಧ ಚೋರ್‌ಬಗನ್ ಸಾರ್ವಜನಿಕ ದುರ್ಗೋತ್ಸವ ಸಮಿತಿಯ ಪಂಡಾಲ್‌ನಲ್ಲಿ ಸಂಭವಿಸಿದ...

ವಿಜಯಪುರ | ವೃಕ್ಷಥಾನ್ ಹೆರಿಟೇಜ್ ರನ್ 2026: ತೆರೆಮರೆಯ ಸಾಧಕರಿಗೆ ಗೌರವ

ಕ್ರೀಡೆ, ಪಾರಂಪರಿಕ ಕ್ಷೇತ್ರ, ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಗಮನಾರ್ಹ ಸೇವೆ...

SIR | ಸ್ವಾತಂತ್ರ್ಯ ಹೋರಾಟ ಹಿನ್ನೆಲೆಯುಳ್ಳ BSP ನಾಯಕ ಸುಧೀಂದ್ರ ಭದೋರಿಯಾ ಕುಟುಂಬದ ಹೆಸರುಗಳು ಡಿಲೀಟ್‌

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ ಬಿಎಸ್‌ಪಿ ಹಿರಿಯ ನಾಯಕ, ಮಾಜಿ...

ಕಲಬುರಗಿ ಜಿಲ್ಲೆಗೆ 6 ಟಿಎಂಸಿ ನೀರು ಕಾಯ್ದಿರಿಸಲು ಪ್ರಸ್ತಾವನೆ : ಡಿಸಿ ಇಕ್ರಮ್ ಶರೀಫ್

ಮುಂಬರುವ ಬೇಸಿಗೆ ಅವಧಿಯಲ್ಲಿ ಕಲಬುರಗಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ...