ಕರಾವಳಿ ಉತ್ಸವದ ಅಂಗವಾಗಿ ಮಂಗಳೂರಿನ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ರೋಹನ್ ಕಾರ್ಪೋರೇಶನ್ ಸಹಯೋಗದಲ್ಲಿ ನಡೆದ ಎರಡು ದಿನಗಳ ಬೀಚ್ ಉತ್ಸವ ಭಾನುವಾರ ಸಮಾರೋಪಗೊಂಡಿತು.
ಮಂಗಳೂರು ಉತ್ತರ. ಶಾಸಕ ಭರತ್ ಶೆಟ್ಟಿ ಅವರು ಸಮಾರೋಪದಲ್ಲಿ ಮಾತನಾಡಿ, ಬೀಚ್ ಉತ್ಸವದಿಂದ ಪ್ರವಾಸೋದ್ಯಮಕ್ಕೆ ಹೆಚ್ಚು ಉತ್ತೇಜನ ದೊರಕಲಿದೆ. ಕರಾವಳಿಯ ಸೊಬಗನ್ನು ಹೆಚ್ಚಿಸಲು ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದು ಹೇಳಿದರು.

ಸಮಾರಂಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾ, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಉದ್ಯಮಿ ರೋಹನ್ ಮೊಂತೇರೋ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ನೂರ್ ಜಹರಾ ಖಾನಂ , ಪಿಲಿಕುಲ ನಿಸರ್ಗಧಾಮದ ಆಯುಕ್ತ ಡಾ. ಅರುಣ್ ಶೆಟ್ಟಿ, ಆರ್ ಟಿ ಓ ಶ್ರೀಧರ್ ಮಲ್ನಾಡ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಕೇರಳ | ಹೃದಯ ವಿದ್ರಾವಕ ಘಟನೆ: ಪಿಸ್ತಾದ ಸಿಪ್ಪೆ ಶ್ವಾಸಕೋಶದಲ್ಲಿ ಸಿಲುಕಿ ಎರಡು ವರ್ಷದ ಮಗು ಮೃತ್ಯು
ರವಿವಾರ ಕಡಲ ಕಿನಾರೆಯಲ್ಲಿ ಯೋಗ ಕಾರ್ಯಕ್ರಮ, ಉದಯ ರಾಗ, ಜಲಕ್ರೀಡೆ, ಮರಳು ಶಿಲ್ಪ ಸ್ಪರ್ಧೆ ನಡೆಯಿತು. ಸಮಾರೋಪದ ಬಳಿಕ ನೃತ್ಯೋತ್ಸವ ಹಾಗೂ ಖ್ಯಾತ ಗಾಯಕ ರಘು ದೀಕ್ಷಿತ್ ಅವರ ಲೈವ್ ಕಾರ್ಯಕ್ರಮ ನಡೆಯಿತು.
