ಮಂಗಳೂರು | ಶಾಂತಿ, ಸಮಾನತೆ, ಸೌಹಾರ್ದತೆಯ ಹಬ್ಬ ಈದುಲ್ ಫಿತ್ರ್

Date:

Advertisements

ಕಳೆದ ಒಂದು ತಿಂಗಳಿನಿಂದ ‌ಉಪವಾಸ ವ್ರತ ಆಚರಿಸಿದ ಮುಸ್ಲಿಮರಿಗೆ ಈದುಲ್ ಫಿತರ್ ಹಬ್ಬ ಮತ್ತೊಮ್ಮೆ ಸ್ವಾಗತಿಸಿದೆ. ಈ ಬಾರಿಯ ವಿಶೇಷವೇನೆಂದರೆ ಯುಗಾದಿ ಮತ್ತು ಈದುಲ್ ಫಿತರ್ ಜೊತೆಯಾಗಿ ಬಂದಿದೆ. ಮೂವತ್ತು ವರ್ಷಗಳ ಹಿಂದೆ ಈ ರೀತಿ ಯುಗಾದಿ ಮತ್ತು ಈದುಲ್ ಫಿತರ್ ಹಬ್ಬ ಒಟ್ಟೊಟ್ಟಿಗೆ ಬಂದಿದ್ದವು. ಬೇವು ಬೆಲ್ಲ ಹಂಚಿ ಜೀವನದ ಸಿಹಿ-ಕಹಿಗಳನ್ನು ಮೇಲುಕು ಹಾಕುವ ಮೂಲಕ ಮುಂದಿನ ಹೊಸ ವರ್ಷವನ್ನು ಹೊಸ ಹುರುಪಿನಿಂದ ಹಿಂದೂ ಸಹೋದರರು ಯುಗಾದಿಯನ್ನು ಸ್ವಾಗತಿಸುತ್ತಿದ್ದರೆ ಇನ್ನೊಂದು ಕಡೆ ಮೂವತ್ತು ದಿನಗಳ ಉಪವಾಸ ಆಚರಿಸುವ ಮೂಲಕ ತನ್ನಲ್ಲಿರುವ ಅರಿಷಡ್ವರ್ಗಗಳನ್ನು ( ಕಾಮ, ಕ್ರೋಧ, ಲೋಭ, ಮೋಹ, ಮದ ಮಾತ್ಸರ್ಯ) ನಿಯಂತ್ರಿಸಿ ಮುಂದಿನ ದಿನಗಳು ಹೊಸ ಹುಮ್ಮಸ್ಸಿನಿಂದ ಜೀವನ ಸಾಗಿಸಲು ಈದುಲ್ ಫಿತರ್ ಹಬ್ಬವನ್ನು ಮುಸ್ಲಿಮರು ಸ್ವಾಗತಿಸುತ್ತಾರೆ.

ಸಮಗ್ರ ಮಾನವ ಕೋಟಿಯ ಕಲ್ಯಾಣಕ್ಕಾಗಿ ಪವಿತ್ರ ಕುರಾನ್ ಪ್ರವಾದಿ ಮುಹಮ್ಮದರ(ಸ) ಮುಖಾಂತರ ಜಗತ್ತಿಗೆ ಅವತೀರ್ಣಗೊಂಡದ್ದು, ಪವಿತ್ರ ರಮಝಾನ್ ಮಾಸದ ಉಪವಾಸಾನುಷ್ಠಾನದ ಸಂದರ್ಭದಲ್ಲಿ ಹಸಿವೆ, ನೀರಡಿಕೆಯಿಂದ ತುಂಬಿದ ನಮ್ಮ ಉದರದಿಂದ ಕ್ಷಣ ಕ್ಷಣಕ್ಕೂ ಹೋರಡುವ ಹಸಿವಿನ ಧ್ವನಿಯು, ನಮ್ಮ ಆಸುಪಾಸಿನಲ್ಲಿ ಹಸಿವಿನಿಂದ ಬಳಲುವವರತ್ತ ನಮ್ಮ ಗಮನವನ್ನು ಮತ್ತು ಮಸೀದಿಗಳಲ್ಲಿ ಮಾರ್ದನಿಗೊಳ್ಳುವ ‘ಅಲ್ಲಾಹು ಅಕ್ಬರ್’ (ದೇವನು ಮಹೋನ್ನತನು) ಅಲ್ಲಾಹನ ಸ್ತುತಿ ಹೇಗೋ, ಹಾಗೆಯೇ ಮಾನವೀಯ ಏಕತೆಯ ಸಂದೇಶವೂ ಆಗಿದೆ.

ದೇವನು ಮಹೋನ್ನತನು ಎಂಬ ಧ್ಯೇಯ ವಾಕ್ಯವು, ಏಕತೆ, ಸಮಾನತೆ ಮತ್ತು ಸಹೋದರತೆಯ ಅಮರ ಸಂದೇಶವನ್ನು ಮನುಕುಲಕ್ಕೆ ಸಾರುತ್ತದೆ. ಈದುಲ್ ಫಿತ್ರ‍್ನಂದು ಇಸ್ಲಾಮ್ ಜಾರಿಗೊಳಿಸಿದ ಫಿತ್ರ್ ಝಕಾತ್ ಎಂಬ ನಿರ್ಬಂದ ದಾನವು ಬಡವರೂ ಹಬ್ಬದಲ್ಲಿ ಪಾಲ್ಗೊಡು ಸಂತೋಷ ಪಡಬೇಕೆಂಬ ಸದುದ್ದೇಶದಿಂದ ಕೂಡಿದೆ. ಈದುಲ್ ಫಿತ್ರ್ ಹಬ್ಬವನಾಚರಿಸಲು ಆರ್ಥಿಕ ಸಾಮರ್ಥ್ಯವಿಲ್ಲದ ಬಡವರಿಗೂ, ಅನಾಥರಿಗೂ, ಅಂಗವಿಕಲರಿಗೂ, ವಿಧವೆಯರಿಗೂ ಬಡತನದ ರೇಖೆಯಲ್ಲಿರುವ ನಿಕಟ ಸಂಬಂಧಿಕರಿಗೂ ಈ ನಿರ್ಬಂಧ ದಾನವನ್ನು ನೀಡಬಹುದಾಗಿದೆ.

Advertisements

ಸಮಾಜದ ದುರ್ಬಲ ವರ್ಗಗಳತ್ತ ಸದಾ ಅನುಕಂಪದಿಂದ ಇರಬೇಕೆಂಬ ನೀತಿ ಮಾರ್ಗವನ್ನು ಈ ವಿಶಿಷ್ಟ ದಾನವು ಮನುಕುಲಕ್ಕೆ ಸಾರುತ್ತದೆ.

ಉಪವಾಸವಿದ್ದು ನೀನು ಸುಳ್ಳಾಡುವುದನ್ನು ಬಿಡದಿದ್ದರೆ ನೀನು ಹಸಿವಿನಿಂದ ಇದ್ದು ಏನು ಪ್ರಯೋಜನವಿಲ್ಲ ಎಂದು ಪ್ರವಾದಿ ಮುಹಮ್ಮದ್ (ಸ) ಕಲಿಸಿಕೊಟ್ಟರು, ಉಪವಾಸ ವ್ರತ ಆಚರಿಸುವ ಮೊದಲು ಸುಳ್ಳು, ಮೋಸ, ವಂಚನೆ, ಬಡ್ಡಿ ವ್ಯವಹಾರ, ಕಾಪಟ್ಯ ಇಂತಹ ಎಲ್ಲಾ ಕೆಟ್ಟ ಗುಣಗಳು‌ ನಿನ್ನಲಿದ್ದು ಉಪವಾಸ ವೃತ ಪೂರೈಸುವ ಮೂಲಕ ಈದುಲ್ ಫಿತರ್ ಹಬ್ಬ ಆಚರಿಸಿ, ನಂತರದ ದಿನಗಳಲ್ಲಿಯೂ ಅದೇ ಕೆಟ್ಟ ಗುಣಗಳು ಪುನರಾವರ್ತನೆ ಆಗಿದ್ದು ನಿನ್ನಲ್ಲಿ ಯಾವುದೇ ಬದಲಾವಣೆ ಆಗದಿದ್ದರೆ ಅಂತಹ ಉಪವಾಸದಿಂದ ಗಳಿಸಿದ್ದಾದರು ಏನು? ಅಂತಹ ಉಪವಾಸದಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಪ್ರವಾದಿ ಮುಹಮ್ಮದ್ (ಸ) ಆದೇಶಿಸಿದ್ದಾರೆ. ಉಪವಾಸ ವೃತ ಆಚರಿಸುವುದೇ ನಮ್ಮಲ್ಲಿ ಇರುವ ಕೆಡುಕುಗಳನ್ನು ಅಳಿಸಿ‌ ಒಳಿತಿನೆಡೆಗೆ ಸಾಗುವುದೆಂಬುದು ಸ್ಪಷ್ಟಪಡಿಸುತ್ತದೆ.

ಈದುಲ್ ಫಿತ್ರ್ ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯನ್ನು ಮನುಕುಲಕ್ಕೆ ಬೋಧಿಸಿ, ಬದುಕಿನ ಪಾವಿತ್ರ್ಯತೆಯನ್ನು ಹೆಚ್ಚಿಸುತ್ತದೆ ರಮಝಾನ್ ಮತ್ತು ಈದುಲ್ ಫಿತ್ರ್ ಸಾರುವ ಸತ್ಯ, ಶಾಂತಿ ಸೌಹಾರ್ದತೆಗಳು ಬದುಕಿನಲ್ಲಿ ಭರವಸೆಯನ್ನು, ಸ್ಪೂರ್ತಿಯನ್ನೂ ಮತ್ತು ನವ ಚೈತನ್ಯವನ್ನು ತುಂಬುದಕ್ಕೆ ನಮಗಿಂದು ಅಗತ್ಯವಾಗಿದೆ. ಬದುಕಿನ ಜಂಜಾಟ ಮರೆಯುತ್ತಿರುವ ನೈತಿಕ ಮೌಲ್ಯವನ್ನು ಮತ್ತು ಜಾಗೃತಗೊಳಿಸಿ, ಬದುಕಿಗೆ ಉನ್ನತ ಅರ್ಥವನ್ನು ಕಲ್ಪಿಪಸುವುದೇ ಹಬ್ಬಗಳ ಗುರಿ.

ಈದುಲ್ ಫಿತ್ರ್ ಸಾರುವ ಸಮಾನತೆ ಮತ್ತು ಸಹೋದರತೆಯ ಮನುಷ್ಯನ ದೈನಂದಿನ ಬದುಕನ್ನು ಅರ್ಥಪೂರ್ಣಗೊಳಿಸುತ್ತದೆ ಮನುಷ್ಯನು ಸಂತೋಷಪಡಬೇಕಾದುದು ಕೇವಲ ತನ್ನೊಬ್ಬನ ವೈಯಕ್ತಿಕ ಏಳಿಗೆಯಲ್ಲಿ ಮಾತ್ರವಲ್ಲ ಬದಲಾಗಿ, ಸರ್ವ ಮನುಕುಲದ ಹಿತ ಸಾಧನೆಯಲ್ಲಿ ಸಂತೋಷಪಡಬೇಕು. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಇಸ್ಲಾಮ್ ನೀಡಿದ ಉತ್ಕೃಷ್ಟ ಮೌಲ್ಯಗಳು ಬದುಕನ್ನು ಪಾವನಗೊಳಿಸುತ್ತದೆ.

ಈದುಲ್ ಫಿತ್ರ್ ಎಲ್ಲಾ ರೀತಿಯ ಮಾನವ ಪ್ರಯತ್ನಗಳ ಹೋರತಾಗಿಯೂ ಮತ್ತೂ ಕಾಲಿಡುತ್ತಿರುವ ಅಸಮಾನತೆ, ಜನಾಂಗ, ಭಾಷೆ ಪ್ರದೇಶಗಳ ಹೆಸರಿನಲ್ಲಿ ಹೋರಾಟ ಇನ್ನೊಬ್ಬರ ಹಕ್ಕುಗಳ ದಮನ, ದಿನಗಳಿದಂತೆಲ್ಲಾ ಸಮಾಜಿಕ ಬದುಕಿನಲ್ಲಿ ಕಾಣುವ ನೈತಿಕ ಮೌಲ್ಯಗಳ ಅಪಮೌಲ್ಯ ಇವೆಲ್ಲವುಗಳ ನಿವಾರಣೆಗಾಗಿ ಪ್ರವರ್ತಿಸುವ ಜನಾಂಗವಾಗಿ ಕಾರ್ಯ ಕ್ಷೇತ್ರಕ್ಕಿಳಿಯುವಂತೆ ನಮ್ಮನ್ನು ಒಳಿತಿನ ಕಡೆಗೆ ಆಹ್ವಾನಿಸುವ ಪಾವನ ಹಬ್ಬ.

ಈದುಲ್ ಫಿತ್ರ್ ಬೋಧಿಸುವ ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯನ್ನು ಬದುಕಿನಲ್ಲಿ ರೂಡಿಸಿಕೊಂಡು ಮನುಕುಲದ ಶಾಂತಿಗಾಗಿ, ಸುಭಿಕ್ಷೆಗಾಗಿ, ನೆಮ್ಮದಿಗಾಗಿ ಅಲ್ಲಾಹನಲ್ಲಿ ಐಕ್ಯತೆಯಿಂದ, ಈ ಶುಭದಿನದಂದು ನಾವೆಲ್ಲಾ ಪ್ರಾರ್ಥಿಸೋಣ, ಈದುಲ್ ಫಿತರ್ ನ ಸಂದೇಶವನ್ನು ನೆನಪಿಸಿಕೊಂಡು, ಮುಸ್ಲಿಮರಲ್ಲಿ ಮಾತ್ರವಲ್ಲ, ಮುಸ್ಲಿಮೇತರರಲ್ಲೂ ಸದಾ ಸೌಹಾರ್ದತೆಯಿಂದ ಅನ್ಯೋನ್ಯತೆಯಿಂದ, ಮಾನವೀಯತೆಯಿಂದ ಬದುಕನ್ನು ಸಾರ್ಥಕಗೊಳಿಸೋಣ, ಅರ್ಥಪೂರ್ಣವಾಗಿರಿಸೋಣ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

Download Eedina App Android / iOS

X