ಮಂಗಳೂರು ನಗರದಲ್ಲಿ ವಿವಿಐಪಿ ಗೆಸ್ಟ್ ಹೌಸ್ ಹಾಗೂ ಮಂಗಳೂರು ತಾಲೂಕು ಕದ್ರಿಪದವು ಹೈಸ್ಕೂಲ್ ಹತ್ತಿರ ಡಾ. ಬಿ. ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಣ ಕಾಮಗಾರಿಗೆ ಶನಿವಾರ (ಮಾ.9) ನಗರದ ಕದ್ರಿ ಸಕ್ಯೂಟ್೯ ಹೌಸ್ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷರಾದ ಯು. ಟಿ. ಖಾದರ್ ಫರೀದ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ್ ಕಾಮತ್, ಮಹಾನಗರ ಪಾಲಿಕೆ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವಾ, ಶಕೀಲ ಕಾವ, ಭಾಸ್ಕರ್ ಮೊಯ್ಲಿ, ಲ್ಯಾನ್ಸಿ ಪಿಂಟೋ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಪಿ ಅಮರನಾಥ್ ಜೈನ್, ಲೋಕಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜು ಆರ್.ಬಿ ಮತ್ತಿತರರು ಉಪಸ್ಥಿತರಿದ್ದರು.
