ಹಲವಾರು ಹೆಣ್ಣುಮಕ್ಕಳ ನಟಿಯಾಗುವ ಕನಸನ್ನು ನನಸಾಗಿಸಲು ಕಿರುತೆರೆಯ ರಿಯಾಲಿಟಿ ಶೋ ʼಮಹಾನಟಿ ಸೀಸನ್ 2ʼಗೆ ಆಡಿಷನ್ ಆರಂಭವಾಗಿದೆ.
ಮಂಗಳೂರಿನ ಪದವಿನಂಗಡಿಯ ಕೆನರಾ ವಿಕಾಸ ಪ್ರೀ ಯೂನಿವರ್ಸಿಟಿ ಕಾಲೇಜಲ್ಲಿ ಏ.19ರಂದು ಬೆಳಗ್ಗೆ 9 ಗಂಟೆಯಿಂದ ಆಡಿಷನ್ ನಡೆಯಲಿದೆ. 18 ರಿಂದ 28 ವರುಷದ ಒಳಗಿನ ಕಲಾಸಕ್ತ ಯುವತಿಯರು ಭಾಗವಹಿಸಬಹುದು. ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಅಡ್ರೆಸ್ ಪ್ರೂಫ್ ಮತ್ತು 2 ನಿಮಿಷಗಳ ಎರಡು ಭಾವನೆಗಳುಳ್ಳ ನಟನೆಯ ತುಣುಕನ್ನು ಅಭ್ಯಾಸ ಮಾಡಿಕೊಂಡು ಬರಬೇಕು. ಇನ್ನು ಜೀ಼ ಕನ್ನಡ ವಾಹಿನಿಯಲ್ಲಿ ಆಡಿಷನ್‌ಗಳಿಗೆ ಯಾವುದೇ ರೀತಿಯ ಶುಲ್ಕ ಕಟ್ಟುವಂತಿಲ್ಲ ಎಂದು ವಾಹಿನಿ ತಿಳಿಸಿದೆ.
ಮಹಾನಟಿ ಸೀಸನ್ 1 ಈಗಾಗಲೇ ಯಶಸ್ವಿಯಾಗಿದ್ದು, ವಿಜೇತೆ ಪ್ರಿಯಾಂಕಾ ಆಚಾರ್ ಬೆಳ್ಳಿತೆರೆಯಲ್ಲಿ ತಮ್ಮ ಚೊಚ್ಚಲ ನಟನೆಯನ್ನು ಆರಂಭಿಸಿದ್ದಾರೆ.