2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರಿನ ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯಲ್ಲಿರುವ ಹಿರಾ ಮಹಿಳಾ ಸಂಯುಕ್ತ ಪದವಿ ಪೂರ್ವ ಕಾಲೇಜು ಶೇ 92.2.%ರಷ್ಟು ಫಲಿತಾಂಶ ದಾಖಲಿಸಿದೆ.
16 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಆಯಿಷ ಫಲಕ್ (563), ನಫೀಸತುಲ್ ಶಮ್ಯಾ (557) ಆಯಿಶತುಲ್ ವಫ(551), ಹಮ (543) ಹಾಗೂ ವಾಣಿಜ್ಯ ವಿಭಾಗದಲ್ಲಿ ಹಲೀಮಾ ರಿಫ(578), ಫಾತಿಮಾ ರಾಹಿಲ (554), ಫಾತಿಮತ್ ಹಾಲಾ ಅಹಮದ್ (551), ಅದೀಬ (550), ಫಾತಿಮತ್ ಶಹನ(532) ಅಯಿಷ ತನಿಷ (522), ಸಲ್ವ ಶಿರೀನ್(520) ಫಾತಿಮ ಶಿಬ(516) ಅಂಕ ಗಳಿಸಿದ್ದಾರೆ.

ಇನ್ನುಳಿದಂತೆ ವಿಜ್ಞಾನ ವಿಭಾಗದಲ್ಲಿ ಮಿನ್ಹಾ (560), ರಶೀದಾ ಬೇಗಮ್ (560), ಹಲೀಮ ವಫ (551), ಸಮಹ್ ಮರಿಯಂ (546) ಅಂಕ ಗಳಿಸಿಕೊಂಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ | ಕುವೆಂಪು ತವರೂರಿನ ಮಗಳು ರಾಜ್ಯಕ್ಕೆ ಪ್ರಥಮ
ಪರೀಕ್ಷೆಗೆ ಹಾಜರಾಗಿದ್ದ 90 ವಿದ್ಯಾರ್ಥಿನಿಯರಲ್ಲಿ ಅತ್ಯುತ್ತಮ ಶ್ರೇಣಿ 16, ಪ್ರಥಮ ಶ್ರೇಣಿ 56, ದ್ವಿತೀಯ ಶ್ರೇಣಿ 09 ಹಾಗೂ ಇಬ್ಬರು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಉತ್ತಮ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿನಿಯರು ಮತ್ತು ಅಧ್ಯಾಪಕ ವೃಂದದವರಿಗೆ ಅಭಿನಂದನೆ ಸಲ್ಲಿಸುವುದಾಗಿ ಶಾಂತಿ ಎಜುಕೇಶನಲ್ ಟ್ರಸ್ಟ್ ಪ್ರಕಟಣೆಯ ಮೂಲಕ ತಿಳಿಸಿದೆ.

