ಪ್ರವಾದಿ ಮುಹಮ್ಮದ್ (ಸ) ರ ಜನ್ಮ ತಿಂಗಳ ಪ್ರಯುಕ್ತ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್(ಎಸ್‌ಐಓ) ದಕ್ಷಿಣ ಕನ್ನಡ ಘಟಕದಿಂದ ‘ಮಾದರಿ ಶಿಕ್ಷಕ ಪೈಗಂಬರ್ ಮುಹಮ್ಮದ್ (ಸ)’ ಅಭಿಯಾನಕ್ಕೆ ಚಾಲನೆ ಮಂಗಳೂರು ನಗರದ ಬಂದರ್‌ನಲ್ಲಿರುವ ಹಿದಾಯತ್ ಸೆಂಟರ್‌ನಲ್ಲಿ ಚಾಲನೆ ನೀಡಲಾಯಿತು.
ಜಮಾಅತೆ ಇಸ್ಲಾಮೀ ಹಿಂದ್, ಮಂಗಳೂರು ಉತ್ತರ ಅಧ್ಯಕ್ಷರಾದ ಸಿಎ ಇಸ್ಹಾಕ್ ಪುತ್ತೂರು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಒಬ್ಬ ಉತ್ತಮ ಶಿಕ್ಷಕನಿಂದ ಒಂದು ಪೀಳಿಗೆ ಆರೋಗ್ಯಕರವಾಗಿ ಬದಲಾವಣೆಯಾಗುತ್ತದೆ. ಒಂದು ಪೀಳಿಗೆ ಬದಲಾವಣೆಯಾದರೆ ಒಂದು ಸಮಾಜ ಹಿತವಾಗುತ್ತದೆ. ಒಂದು ಸಮಾಜ ಹಿತವಾದರೆ ಒಂದು ದೇಶ ಶ್ರೇಷ್ಠವಾಗುತ್ತದೆ. ಪ್ರವಾದಿ ಮುಹಮ್ಮದ್ (ಸ) ಬದುಕಿನ ಎಲ್ಲ ರಂಗಗಳಲ್ಲೂ ಮಾರ್ಗದರ್ಶಕರಾಗಿದ್ದಾರೆ” ಎಂದು ತಿಳಿಸಿದರು.
ಎಸ್‌ಐಓ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿ ಹುನೈನ್ ಹುಸೇನ್ ಮಾತನಾಡುತ್ತಾ, ” ಪ್ರವಾದಿ ಮುಹಮ್ಮದ್ (ಸ) ಶಿಕ್ಷಣ ಸೇರಿದಂತೆ ಬದುಕಿನ ಎಲ್ಲ ರಂಗಗಳಲ್ಲೂ ಮಾರ್ಗದರ್ಶಕರಾಗಿದ್ದಾರೆ. ಈ ನಿಟ್ಟಿನಲ್ಲಿ ಪೈಗಂಬರ್ ಮುಹಮ್ಮದ್ (ಸ) ಜನ್ಮ ತಿಂಗಳ ಪ್ರಯುಕ್ತ ಮಾದರಿ ಶಿಕ್ಷಕ ಪೈಗಂಬರ್ ಮುಹಮ್ಮದ್(ಸ) ಎಂಬ ಅಭಿಯಾನವನ್ನು ಹಮ್ಮಿಕೊಂಡಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಬೆಳ್ತಂಗಡಿ | ಸೆ.7: ಜಮಾಅತೆ ಇಸ್ಲಾಮೀ ಹಿಂದ್‌ನಿಂದ ‘ಧಾರ್ಮಿಕ ಸೌಹಾರ್ದ; ಸವಾಲುಗಳು ಮತ್ತು ಅವಕಾಶ’ ವಿಚಾರಗೋಷ್ಠಿ
ಈ ಸಂದರ್ಭದಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್(ಎಸ್‌ಐಓ) ಕರ್ನಾಟಕ ರಾಜ್ಯ ಸಲಹಾ ಸಮಿತಿ ಸದಸ್ಯ ಝಮೀರ್ ಪಕ್ಕಲಡ್ಕ, ಎಸ್‌ಐಓ ಮಂಗಳೂರು ನಗರ ಅಧ್ಯಕ್ಷರಾದ ಮುಬಶ್ಶಿರ್ ಝಹೂರ್, ಎಸ್‌ಐಓ ಜಿಲ್ಲಾ ಮುಖಂಡರಾದ ಹಸನ್ ಮುಜಾಹಿದ್, ಮುಹಮ್ಮದ್ ಇಸ್ಮಾಯೀಲ್ ಅರ್ಫ್, ಶಯಾನ್ ಹನೀಫ್, ಸಿನಾಫ್ ಬೆಂಗ್ರೆ ಉಪಸ್ಥಿತರಿದ್ದರು.
