ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ನಡೆಸುತ್ತಿರುವ ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳು ಜುಲೈ 27 ರಿಂದ ಆಗಸ್ಟ್ 2 ರವರೆಗೆ ಮಂಗಳೂರು ನಗರದ ಉರ್ವಸ್ಟೋರ್‌ನ ಹೊಸ ಕ್ರೀಡಾ ಸಂಕಿರ್ಣದಲ್ಲಿ ಜರುಗಲಿದೆ. ಮುಕ್ತ ಹಾಗೂ 19 ವರ್ಷದೊಳಗಿನವರ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ: ಕುಪ್ಪೆಪದವಿನಲ್ಲೊಂದು ಸೌಹಾರ್ದತೆಯ ಸಂಕೇತ; ಧರ್ಮ ಬದಿಗಿಟ್ಟು ಸೋದರತೆ ಸಾರಿದ ಮಸೀದಿ
ಪುರುಷರ ವಿಭಾಗದಲ್ಲಿ ಬೆಂಗಳೂರಿನ ಅಭಿನವ್ ಗರ್ಗ್ ಅಗ್ರ ಶ್ರೇಯಾಂಕ ನೀಡಿದ್ದು ಬೆಂಗಳೂರಿನ ಅಶ್ವತಿ ವರ್ಗೀಸ್ ಅವರಿಗೆ ಮಹಿಳೆಯರ ಮುಕ್ತ ವಿಭಾಗದಲ್ಲಿ ಮೊದಲ ಶ್ರೇಯಾಂಕ ನೀಡಲಾಗಿದೆ. ಮಹಿಳೆಯರ 19 ವರ್ಷದೊಳಗಿನವರ ವಿಭಾಗದಲ್ಲಿ ಅಂತರರಾಷ್ಟ್ರೀಯ ಆಟಗಾರ್ತಿ ದಿವ್ಯಾ ಭೀಮಯ್ಯ ಮೊದಲ ಶ್ರೇಯಾಂಕ ಹೊಂದಿದ್ದಾರೆ.
19 ವರ್ಷದೊಳಗಿನ ಮಹಿಳೆಯರ ವಿಭಾಗದಲ್ಲಿ ಲಕ್ಷ್ಯ ರಾಜೇಶ್ ಮತ್ತು ದಿವ್ಯಾ ಭೀಮಯ್ಯ ಗಮನ ಸೆಳೆಯಲಿದ್ದಾರೆ. ಮುಕ್ತ ಪುರುಷರ ವಿಭಾಗದಲ್ಲಿ ರುದ್ರ ಶಾಹಿ, 19 ವರ್ಷದೊಳಗಿನವರ ವಿಭಾಗದಲ್ಲಿ ಹಾರ್ದಿಕ್ ದಿವ್ಯಾಂಶ್ ಕೂಡ ಸ್ಪರ್ಧೆಯಲ್ಲಿದ್ದಾರೆ.
