ಕಳೆದ ಹಲವು ದಿನದಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರ ಕೆಐಒಸಿಎಲ್ ಜಂಕ್ಷನ್ ಮತ್ತು ಕೂಳೂರು ಕಮಾನು ಸೇತುವೆಯ ನಡುವಿನ ಸಂಪರ್ಕದ ರಸ್ತೆ ಸಂಪೂರ್ಣ ಹಾನಿಯಾಗಿದೆ. ಈ ಸೇತುವೆ ದುರಸ್ತಿಪಡಿಸುವ ಸಲುವಾಗಿ ಜು.21ರ ರಾತ್ರಿ 8 ರಿಂದ 24ರ ಬೆಳಗ್ಗೆ 8 ರವರೆಗೆ ಈ ಸೇತುವೆಯಲ್ಲಿ ವಾಹನಗಳ ಸಂಚಾರವನ್ನು ಪೂರ್ಣವಾಗಿ ಸ್ಥಗಿತಗೊಳಿಸಲು ಎನ್‌ಎಚ್‌ಎಐ ಮುಂದಾಗಿದೆ.
ಇದನ್ನೂ ಓದಿ: ಶಕ್ತಿ ಯೋಜನೆ: ಮಹಿಳಾ ಸಬಲೀಕರಣಕ್ಕೆ ಹೊಸ ದಿಕ್ಕು
ಈ ಸೇತುವೆ ಸಾರ್ವಜನಿಕರ, ವಾಹನ ಸವಾರರ ಓಡಾಟಕ್ಕೆ ತೊಡಕಾಗಿದೆ. ಆಗಾಗ ಸಣ್ಣಪುಟ್ಟ ದುರಸ್ತಿ ಕೈಗೊಳ್ಳಲಾಗಿದ್ದರೂ ನಿರಂತರ ಮಳೆಯಿಂದಾಗಿ ರಸ್ತೆ ಮತ್ತೆ ಮತ್ತೆ ಹಾಳಾಗುತ್ತಿದೆ. ಸದ್ಯ ಡಾಮಾರೀಕರಣ ಅಸಾಧ್ಯವಾದ ಕಾರಣ ಪೇವರ್ ಬ್ಲಾಕ್‌ಗಳನ್ನು ಸರಿಪಡಿಸಲು ಮುಂದಾಗಿದೆ. ಹಾಗಾಗಿ ಸಾರ್ವಜನಿಕರು, ವಾಹನಿಗರು ಸಹಕರಿಸಬೇಕು ಎಂದು ಎನ್‌ಎಚ್‌ಎಐ ಮನವಿ ಮಾಡಿಕೊಂಡಿದೆ.
