ತುಳು ತಿಂಗಳುಗಳ ಹೆಸರಿನೊಂದಿಗೆ ತುಳುನಾಡಿನ ಹಬ್ಬ ಹರಿದಿನಗಳ ಮಾಹಿತಿಯುಳ್ಳ ‘ತುಳು ಕಾಲ ಕೋಂದೆ’ ಎಂಬ ತುಳು ಕ್ಯಾಲೆಂಡರ್ ಅನ್ನು ಶನಿವಾರದಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಮಂಗಳೂರಿನಲ್ಲಿ ಬಿಡುಗಡೆ ಮಾಡಿದರು.
ಮಂಗಳೂರಿನ ಕದ್ರಿಯಲ್ಲಿರುವ ಸರ್ಕ್ಯೂಟ್ ಹೌಸ್‌ನಲ್ಲಿ ಸರಳ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಳ್ವಾರೀಸ್, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್, ಸೋಮೇಶ್ವರ ಪುರಸಭೆ ಸದಸ್ಯ ದೀಪಕ್ ಪಿಲಾರ್ ಉಪಸ್ಥಿತರಿದ್ದರು.
ಹೆಸರಾಯಿತು ಕರ್ನಾಟಕ
— eedina.com ಈ ದಿನ.ಕಾಮ್ (@eedinanews) December 28, 2024
ಕರ್ನಾಟಕವೆಂದು ಹೆಸರಾಗಿ, 50 ವರ್ಷ ತುಂಬಿರುವ ಈ ಹೊತ್ತಲ್ಲಿ – ಇದು ಈದಿನ.ಕಾಮ್ನ ಪ್ರಯತ್ನ..
ಡಿ. 29ರಂದು ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಬಿಡುಗಡೆ ನಿಗದಿಯಾಗಲಿವೆ.
ಇಂದೇ ನಿಮ್ಮ ಪ್ರತಿ ಕಾಯ್ದಿರಿಸಿ. ಮುಂಗಡ ಬುಕ್ಕಿಂಗ್ಗೆ ಶೇ.30ರಷ್ಟು ರಿಯಾಯಿತಿ.
ಸಂಪರ್ಕಿಸಿ: 90350 53818 pic.twitter.com/uFvdjSIuw8
ಇದನ್ನು ಓದಿದ್ದೀರಾ? ಡಿ. 29: ರಾಜ್ಯದ ಹಲವೆಡೆ ಈ ದಿನ.ಕಾಮ್‌ನಿಂದ ‘ನಮ್ಮ ಕರ್ನಾಟಕ, ನಡೆದ 50 ಹೆಜ್ಜೆ-ಮುಂದಿನ ದಿಕ್ಕು’ ವಿಶೇಷ ಸಂಚಿಕೆ ಬಿಡುಗಡೆ
‘ತುಳು ಕಾಲ ಕೋಂದೆ’ ಹೆಸರಿನಲ್ಲಿ ಕಳೆದ 12 ವರ್ಷಗಳಿಂದ ತುಳು ಕ್ಯಾಲೆಂಡರ್ ಪ್ರಕಟಿಸುತ್ತಿರುವ ಪ್ರವೀಣ್ ರಾಜ್ ಎಸ್.ರಾವ್ ಹಾಗೂ ಅವರ ಬಳಗದವರಾದ ಉದಯಾನಂದ ಬರ್ಕೆ, ವಿವೇಕ್ ಆಚಾರ್ಯ ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
