ಮನೆಯಿಂದಲೇ ಪಾರ್ಟ್‌ಟೈಮ್ ಕೆಲಸ ಮಾಡಿ ಹಣಗಳಿಸಬಹುದು ಎನ್ನುವ ಜಾಹೀರಾತನ್ನು ನಂಬಿ ₹6.50 ಲಕ್ಷ ಕಳೆದುಕೊಂಡಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಿಗೆ ಜೂ. 25ರಂದು ವಾಟ್ಸ್ಆ್ಯಪ್ ಮೂಲಕ ಪಾರ್ಟ್‌ಟೈಮ್ ಕೆಲಸದ ಬಗ್ಗೆ ಸಂದೇಶ ಬಂದಿತ್ತು. ಅದರಲ್ಲಿದ್ದ ಲಿಂಕ್ ಕ್ಲಿಕ್ ಓಪನ್ ಮಾಡಿದ ಬಳಿಕ ಟೆಲಿಗ್ರಾಂ ಆ್ಯಪ್ ಡೌನ್ಲೋಡ್ ಮಾಡುವಂತೆ ಸೂಚಿಸಲಾಗಿದೆ. ಅನಂತರ ಅದರ ಜತೆ ಮತ್ತೆರಡು ಲಿಂಕ್ ಕಳುಹಿಸಿ 20 ವರ್ಕ್ ಟಾಸ್ಕ್‌ಗಳನ್ನು ಪೂರ್ಣಗೊಳಿಸುವಂತೆ ತಿಳಿಸಿದ್ದರು. ಅದಕ್ಕೂ ಮೊದಲು ವರ್ಕಿಂಗ್ ಐಡಿ ನಂಬರ್ ಕೊಟ್ಟಿದ್ದು, ಅಕೌಂಟ್ ವಿವರಗಳನ್ನು ಪಡೆದಿದ್ದರು.
ಇದನ್ನೂ ಓದಿ: ಮಂಗಳೂರು | ʼಸಿಂಧೂರ ವಿಜಯʼ ಉದ್ಯಾನವನ ಉದ್ಘಾಟನೆ
ಮೊದಲ ಟಾಸ್ಕ್ ಪೂರ್ಣಗೊಳಿಸಿದ ಬಳಿಕೆ ಖಾತೆಗೆ ₹180, ಬಳಿಕ ₹200 ಪಾವತಿಯಾಗಿದೆ. ಜೂ. 26ರಂದು ಟ್ರೇಡ್ ಟಾಸ್ಕ್ ನೀಡಿದ್ದು, ಈ ಟಾಸ್ಕ್‌ಗೆ ₹800 ಪಾವತಿಸುವಂತೆ ಸೂಚನೆ ನೀಡಿದ್ದಾರೆ. ಅದರಂತೆ ದೂರುದಾರರು ಹಣ ಪಾವತಿಸಿದ್ದರು. ಬಳಿಕ ಅದೇ ರೀತಿ ಜೂ.28ರ ವರೆಗೆ ಹಂತ ಹಂತವಾಗಿ ಒಟ್ಟು ₹6,50,801 ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಹಣವನ್ನು ವಾಪಸ್ ಕೇಳಿದಾಗ ಹಣವನ್ನು ನೀಡದೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.