ಕರಾವಳಿ, ಮಲೆನಾಡು ಭಾಗದ ಜನರಿಗೆ ತ್ವರಿತ ನ್ಯಾಯ ಸಿಗಲು ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕೆಂದು ವಕೀಲರ ಸಂಘ ಹಕ್ಕೊತ್ತಾಯ ಮಾಡಿದೆ.
ಮಂಗಳೂರಿನ ವಕೀಲರ ಸಂಘದ ಕಚೇರಿಯಲ್ಲಿ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಚ್.ವಿ.ರಾಘವೇಂದ್ರ ಈ ಬಗ್ಗೆ ಮಾಹಿತಿ ನೀಡಿ, “ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು. ಪೀಠ ಸ್ಥಾಪನೆಯಾದಲ್ಲಿ ದಕ್ಷಿಣ ಕನ್ನಡ ಸೇರಿದಂತೆ ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಉಪಯೋಗವಾಗಲಿದೆ” ಎಂದು ತಿಳಿಸಿದರು.
“ಇಲ್ಲಿನ 30 ಶೇ. ಪ್ರಕರಣಗಳು ಬೆಂಗಳೂರು ಹೈಕೋರ್ಟ್‌ನಲ್ಲಿ ಬಾಕಿಯಿದೆ. ಸಾಧಾರಣ 300 ಕಿ.ಮೀ. ಅಂತರವಿದ್ದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅವಕಾಶವಿದೆ. ಈಗಾಗಲೇ ಹೈಕೋರ್ಟ್ ಸ್ಥಾಪನೆಗೆ ನಾವು ಸ್ಥಳವನ್ನು ಗುರುತಿಸಿದ್ದೇವೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಗದಗ | ಅಧಿಕಾರಿಗಳ ನಿರ್ಲಕ್ಷ್ಯ: ಉಳ್ಳಾಗಡ್ಡಿ ಕಣವಾಗಿ ಮಾರ್ಪಟ್ಟ ಇಟಗಿ ಬಸ್ ನಿಲ್ದಾಣ!
ಹೈಕೋರ್ಟ್ ಸ್ಥಾಪನೆಗೆ ಸರಕಾರ ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ಅನುದಾನ ಸಿಕ್ಕ ತಕ್ಷಣ ನಾವು ಗವರ್ನರ್, ಹೈಕೋರ್ಟ್ ನ್ಯಾಯಮೂರ್ತಿಗಳು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನು ಒತ್ತಾಯಿಸಿ ಹೈಕೋರ್ಟ್ ಪೀಠ ಸ್ಥಾಪನೆ ಸುಲಭವಾಗುತ್ತದೆ ಎಂದರು.
