ವಿಟ್ಲದ ಕನ್ಯಾನ ಗ್ರಾಮದ ದೇಲಂತಬೆಟ್ಟು ಶಾಲೆಯ ಸಮಿಪ ರಸ್ತೆ ಬದಿಯಲ್ಲಿ ಹಾಗೂ ಚರ್ಚಿನ ಕೆಳಗಡೆ ರಸ್ತೆಯ ಬದಿಯಲ್ಲಿ ಇರುವ ಧಾರ್ಮಿಕ ಶ್ರದ್ಧಾ ಕೇಂದ್ರದ ಕಾಣಿಕೆ ಡಬ್ಬಿಗಳಿಂದ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ನಿವಾಸಿ ತ್ವಾಹಿದ್ (19), ಉಮ್ಮರ್ ಫಾರೂಕ್ (18) ಮತ್ತು ಮೊಹಮ್ಮದ್ ನಬೀಲ್ (19) ರವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು | ಇಂದು ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ; ಬಂದ್ ಯಶಸ್ವಿಗೊಳಿಸಲು ಸಂಘಟನೆ ಕರೆ
ಧಾರ್ಮಿಕ ಶ್ರದ್ದಾ ಕೇಂದ್ರದ ಅಧ್ಯಕ್ಷರಾಗಿದ್ದ ಡಿ. ನಾರಾಯಣ ರಾವ್ ಅವರು ಸಂಗ್ರಹವಾಗಿರುವ ಕಾಣಿಕೆ ಹಣವನ್ನು ತೆಗೆಯಲು ಜು. 26 ರಂದು ಈ ಸ್ಥಳಗಳಿಗೆ ಹೋದಾಗ ಎರಡೂ ಕಾಣಿಕೆ ಕಟ್ಟೆಗಳ ಬೀಗವನ್ನು ಒಡೆದಿತ್ತು. ಸುಮಾರು ರೂ.12ರಿಂದ 15 ಸಾವಿರ ಕಳವಾಗಿದೆ ಎಂದು ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
