ಮಂಗಳೂರಿನ ಪ್ರಖ್ಯಾತ ಪ್ರವಾಸಿ ಬೀಚ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಪಣಂಬೂರ್ ಬೀಚ್‌ನಲ್ಲಿ ನೀರಿಗಿಳಿದ ಮೂವರು ನೀರುಪಾಲಾಗಿರುವ ಘಟನೆ ಭಾನುವಾರ(ಮಾ.3)ದಂದು ನಡೆದಿದೆ.
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, “ಇಂದು ಸಂಜೆ 6ರ ಸುಮಾರಿಗೆ ನೀರಿಗಿಳಿದಿದ್ದ ಮೂವರು ಯುವಕರು ನೀರುಪಾಲಾಗಿದ್ದಾರೆ. ಆ ಮೂವರನ್ನು ಮಿಲನ್(20), ಲಿಖಿತ್(18), ನಾಗರಾಜ್(24) ಎಂದು ಗುರುತಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
” ಮೃತ ಯುವಕ ಪೈಕಿ ಮಿಲನ್ ಅವರು ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದರು. ಲಿಖಿತ್ ಅವರು ಕೈಕಂಬದ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿಯಾಗಿದ್ದರೆ, ನಾಗರಾಜ್ ಅವರು ಬೈಕಂಪಾಡಿಯ ಮುಂಗಾರು ಜಂಕ್ಷನ್‌ನಲ್ಲಿರುವ ಎಂಎಂಆರ್ ಎಂಬ ಖಾಸಗಿ ಕಂಪನಿಯಲ್ಲಿ ಸೂಪರ್‌ವೈಸರ್ ಆಗಿದ್ದರು. ಮೀನುಗಾರರು ಹಾಗೂ ಜೀವರಕ್ಷಕ ದಳದಿಂದ ಶೋಧ ಕಾರ್ಯ ನಡೆಯುತ್ತಿದ್ದು, ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.
