ಚಿಂತಾಮಣಿ | ಸರ್ವರಿಗೂ ಸಂವಿಧಾನ ಅಭಿಯಾನಕ್ಕೆ ಮಂಗ್ಳೂರು ವಿಜಯ ಚಾಲನೆ

Date:

Advertisements

ನಗರದ ವಿಜಯ ಕಾಲೇಜಿನಲ್ಲಿ ಜನಪರ ಪೌಂಡೇಷನ್ ಮತ್ತು ಕರ್ನಾಟಕ ಸಮಾಜವಾದಿ ವೇದಿಕೆ ಹಾಗೂ ವಿವಿಧ ಸಂಘ – ಸಂಸ್ಥೆಗಳು ಸಹಯೋಗದಲ್ಲಿ ಮೂರು ತಿಂಗಳ ಕಾಲ ಹಮ್ಮಿಕೊಂಡಿರುವ ಸರ್ವರಿಗೂ ಸಂವಿಧಾನ ಯುವಜನರಿಗಾಗಿ ಕಾನೂನು ಅರಿವಿನ ಅಭಿಯಾನಕ್ಕೆ ಚಿಂತಕ ಮಂಗ್ಳೂರು ವಿಜಯ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಮಂಗ್ಳೂರು ವಿಜಯ ಅವರು, ಕಾಲೇಜು ಯುವಜನರು ಪಠ್ಯಪುಸ್ತಕಗಳಲ್ಲಿ ಇರುವ ಎಲ್ಲವನ್ನೂ ಅಧ್ಯಯನ ಮಾಡುತ್ತಾರೆ. ಅದರ ಜೊತೆಗೆ ಸಂವಿಧಾನವನ್ನು ಓದುವುದು, ತಿಳಿದುಕೊಳ್ಳುವುದು, ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಬದುಕುವುದು ಸಹ ಕಲಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ವರಿಗೂ ಸಂವಿಧಾನ ಅಭಿಯಾನವನ್ನು ಎಲ್ಲೆಡೆ ನಡೆಸಲು ಮುಂದಾಗಿದ್ದೇವೆ ಎಂದು ಹೇಳಿದರು.

ಭಾರತವು ಸ್ವಾತಂತ್ರ‍್ಯ ಪಡೆದು 78 ವರ್ಷಗಳು ಕಳೆಯುತ್ತಿದ್ದರೂ, ಇಂದಿಗೂ ಸಂಪೂರ್ಣವಾಗಿ ಸಂವಿಧಾನದ ಆಶಯಗಳು ಜಾರಿಯಾಗಿಲ್ಲ. ಹೀಗಾಗಿ, ಸರ್ವರಿಗೂ ಸಂವಿಧಾನ ಅಭಿಯಾನವು ಮೂರು ತಿಂಗಳ ಕಾಲ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಸಂಘಟಿಸಿ, ಯುವಜನರಿಗೆ ಕಾನೂನು ಅರಿವು ಮೂಡಿಸಲಾಗುತ್ತದೆ. ಅನಂತರ ನವೆಂಬರ್ 26ಕ್ಕೆ ಸಂವಿಧಾನ ಅಂಗೀಕರಿಸಿದ ದಿನದಂದು ಈ ಕಾರ್ಯಕ್ರಮವನ್ನು ಮುಕ್ತಾಯ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

Advertisements

ಪ್ರಜಾಪ್ರಭುತ್ವದ ಅಡಿಪಾಯದ ಮೇಲೆ ನಿಂತಿರುವ ಭಾರತ ದೇಶವು ನಡೆಯುತ್ತಿರುವುದು ಸಂವಿಧಾನದ ಆಶಯದ ಮೇಲೆ. ಸಂವಿಧಾನದಲ್ಲಿ ಸರ್ವರ ಹಿತವೂ ಅಡಗಿದೆ. ಸಂವಿಧಾನದ ಆಶಯದಂತೆ ಯಾರೂ ಮೇಲೂ ಅಲ್ಲ, ಕೀಳೂ ಅಲ್ಲ, ಎಲ್ಲರೂ ಸಮಾನರು. ಸಮಾನತೆ, ಸರ್ವಭೌಮ, ಸಮಾಜವಾದಿ, ಜಾತ್ಯಾತೀತ ಆಶಯಗಳನ್ನು ಯುವಜನರಿಗೆ ತಲುಪಿಸುವ ಅಗತ್ಯವಿದೆ ಎಂದರು.

ಕೇವಲ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತರಲಾಗುತ್ತದೆ. ದೇಶ ಎಂದರೆ ಮಣ್ಣು, ಭೂ ಗಡಿ, ಭೂಪಟ, ಭಾರತಾಂಬೆ, ಚಿತ್ರಗಳಲ್ಲ. ದೇಶದವೆಂದರೆ ಇಲ್ಲಿ ವಾಸಿಸುವ ಜನರು. ಸಂವಿಧಾನದ ಪ್ರಕಾರ ಎಲ್ಲ ವಿಚಾರಗಳಿಗಿಂತ, ಎಲ್ಲ ವ್ಯಕ್ತಿಗಳಿಂದ ಮಹತ್ವವಾಗಿರುವುದು ದೇಶದ ಜನರು. ಸಂವಿಧಾನದ ಪೀಠಿಕೆಯಲ್ಲಿಯಲ್ಲಿಯೇ “ಭಾರತದ ಪ್ರಜೆಗಳಾದ ನಾವು” ಎಂಬುದರಿಂದ ಆರಂಭವಾಗುತ್ತದೆ ಎಂದು ಹೇಳಿದರು.

ತಾರತಮ್ಯವಿಲ್ಲದೇ, ಪ್ರಜಾಪ್ರಭುತ್ವದ ತಳಪಾಯದ ಮೇಲೆ, ಎಲ್ಲರಿಗೂ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ದೇಶವನ್ನು ಕಟ್ಟುತ್ತೇವೆ ಎಂಬುದು ಸಂವಿಧಾನದ ಆಶಯವಾಗಿದೆ. ಭಾರತವು ಬಹುತ್ವದ ದೇಶ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಹೀಗೆ ಹಲವು ಮತ, ಧರ್ಮಗಳ ಜನರು ವಾಸಿಸುತ್ತಿದ್ದಾರೆ. ಹಲವು ಜಾತಿಗಳ, ಬಹು ನೆಲೆಯ ಆಯಾಮಗಳ ಜನರಿದ್ದಾರೆ. ಹೀಗಾಗಿ, ಎಲ್ಲರನ್ನೂ ಒಂದುಗೂಡಿಸಿಕೊಂಡು ಮುಂದಕ್ಕೆ ಸಾಗಬೇಕು ಎಂದು ಅವರು ಪ್ರತಿಪಾದಿಸಿದರು.

ಭಾರತೀಯ ಪ್ರಜೆಗಳಿಗೆ ಸಂವಿಧಾನವು ಹಕ್ಕು ಮತ್ತು ಅಧಿಕಾರಗಳನ್ನು, ಹಲವಾರು ಕರ್ತವ್ಯಗಳನ್ನು ನೀಡಿದೆ. ಅವುಗಳನ್ನು ಒಳ್ಳೆಯದಕ್ಕೆ ಬಳಕೆ ಮಾಡಿಕೊಳ್ಳುವುದು ರೂಢಿಸಿಕೊಳ್ಳಬೇಕು. ಶಾಸಕಾಂಗ ಮತ್ತು ಕಾರ್ಯಾಂಗವು ಉತ್ತಮವಾಗಿ ಮುನ್ನಡೆಯಲು ಯುವ ಸಮುದಾಯದ ಪಾತ್ರ ಬಹಳಷ್ಟಿದೆ. ಕಾರ್ಯಾಂಗವು ಈ ಎರಡು ಅಂಗಗಳನ್ನು ಸಮಗ್ರವಾಗಿ ನಡೆಯಲು ಪೂರಕವಾಗಿ ಕಾರ್ಯ ನಿರ್ವಹಿಸುವಂತಾಗಬೇಕು ಎಂದು ನುಡಿದರು.

ಸಾವಿರಾರು ಜಾತಿ, ಉಪ ಜಾತಿಗಳಿವೆ. ನೂರಾರು ಭಾಷೆ ಮತ್ತು ಧರ್ಮಗಳ ಈ ದೇಶಕ್ಕೆ ಸರ್ವಜನ ಸಮಭಾವದ ಸಂವಿಧಾನವೇ ರಕ್ಷಣೆಯಾಗಿದೆ. ಹೃದಯ ವೈಶಾಲ್ಯತೆ ಹೊಂದಿದ್ದ ಅಂಬೇಡ್ಕರ್ ಅವರು, ಇಡೀ ದೇಶದ ಸಕಲ ಶ್ರೇಯೋಭಿವೃದ್ಧಿಯನ್ನು ಬಯಸಿದರು ಎಂದು ಮಂಗ್ಳೂರು ವಿಜಯ ಹೇಳಿದರು.

ವಿಜಯ ಕಾಲೇಜಿನ ಪ್ರಾಂಶುಪಾಲ ಶ್ರೀರಾಮರೆಡ್ಡಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಯುವಜನರಿಗೆ ಸಂವಿಧಾನದ ಆಶಯಗಳು, ಮೌಲ್ಯಗಳು ಹಾಗೂ ಸಂವಿಧಾನದಲ್ಲಿರುವ ಹಕ್ಕು ಮತ್ತು ಅಧಿಕಾರಗಳನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ವಿದ್ಯಾರ್ಥಿಗಳು ಇಂತಹ ಅಭಿಯಾನಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಾವೆಲ್ಲರೂ ಆ ಆಶಯಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಬೇರು ಬೆವರು ಕಲಾ ಬಳಗದ ಸೋರಪ್ಪಲ್ಲಿ ಚಂದ್ರಶೇಖರ್, ನಾರವಮಾಕಲಹಳ್ಳಿ ಚಲಪತಿ ಸಂವಿಧಾನದ ಆಶಯ ಗೀತೆಗಳನ್ನು ಪ್ರಸ್ತುತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಈದಿನ ಸಹಾಯವಾಣಿ ಬಿಡುಗಡೆಗೊಳಿಸಿದ ಸಚಿವ ಎಂ.ಸಿ.ಸುಧಾಕರ್

ಕಾರ್ಯಕ್ರಮದಲ್ಲಿ ಕವಿ ಹಾಗೂ ಸಾಮಾಜಿಕ ಕಾರ್ಯಕರ್ತ ಶಶಿರಾಜ್ ಹರತಲೆ, ಉಪನ್ಯಾಸಕ ವೆಂಕಟಸ್ವಾಮಿ, ಜನಪರ ಫೌಂಡೇಷನ್‌ನ ಬಾಬುರೆಡ್ಡಿ, ಸಿರಿಕುಮಾರ್, ಯುವಯಾನ ಬಳಗದ ಸಂಜಯ್, ಸರ್ವಮಂಗಳ, ತೇಜಸ್ವಿನಿ ಹಾಗೂ ಇತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X