ಉಡುಪಿ ನಗರದ ಮಣಿಪಾಲದ ಈಶ್ವರ ನಗರದ ರಸ್ತೆಯಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಪಕ್ಕದ ಮೋರಿಗೆ ಬಿದ್ದ ಘಟನೆ ಇಂದು ಮುಂಜಾನೆ ನಡೆದಿದೆ.
ಪ್ರಯಾಣಿಕರು ಉಡುಪಿಯಿಂದ ಕುದುರೆಮುಖಕ್ಕೆ ಪ್ರವಾಸಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದ್ದು ಕಾರು ಜಖಮ್ ಗೊಂಡಿದೆ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಇಲ್ಲಿ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕವಾಗಿ ಅಡ್ಡವಾಗಿ ರಸ್ತೆ ಆಗೆದಿದ್ದು ಮತ್ತು ಅಲ್ಲಲ್ಲಿ ಹೊಂಡ ಬಿದ್ದಿದೆ, ರಸ್ತೆಯ ಸುತ್ತಮುತ್ತ ಹೊಂಡ ಇರುವುದರಿಂದ ವಾಹನ ಚಾಲಕರ ನಿಯಂತ್ರಣತಪ್ಪಿ ಅಪಘಾತವು ದಿನನಿತ್ಯ ಸಂಭವಿಸುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

