ತುರುವೇಕೆರೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ಮಾಯಸಂದ್ರ ಹೋಬಳಿಯ ಗುಡ್ಡೇನಹಳ್ಳಿ ಕ್ಷೇತ್ರದ ಸದಸ್ಯೆ ಮಂಜುಳ ಕೆಂಚಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಉಪಾಧ್ಯಕ್ಷರಾಗಿದ್ದ ನದೀಂ ಅಹಮದ್ ರಾಜೀನಾಮೆ ನೀಡಿದ್ದರಿಂದ ಉಪಾಧ್ಯಕ್ಷ ಸ್ಥಾನ ತೆರವಾಗಿತ್ತು. ಸೋಮವಾರ ನಡೆದ ಚುನಾವಣೆಯಲ್ಲಿ ಮಂಜುಳ ಕೆಂಚಯ್ಯ ಒಬ್ಬರೇ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಕರ್ತವ್ಯ ನಿರ್ವಹಿಸಿದ ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಅವರು ಮಂಜುಳಾ ಕೆಂಚಯ್ಯನವರು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ನೂತನ ಉಪಾಧ್ಯಕ್ಷರಾದ ಮಂಜುಳ ಕೆಂಚಯ್ಯನವರ ಬೆಂಬಲಿಗರು ಹೂಮಾಲೆ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದರು.
ಇದೇ ವೇಳೆ ಅಧ್ಯಕ್ಷರಾದ ಉದಯ ಕುಮಾರ್, ನಿರ್ದೇಶಕರಾದ ಗೋಣಿತುಮಕೂರು ಲಕ್ಷ್ಮೀಕಾಂತ್, ಕೆ.ಚಂದ್ರಯ್ಯ, ಡಿ.ಪಿ.ರಾಜು, ದೇವರಾಜು, ಎನ್.ಗೋವಿಂದಯ್ಯ, ಎಚ್.ಕೆ.ಜಯರಾಮ್, ಸುನಿಲ್, ಎ.ಟಿ.ಮಂಜುಳ, ಎಂ.ಟಿ.ಚಂದ್ರಶೇಖರ್, ನಿಮಿನಿ ನಿರ್ದೇಶಕರಾದ ಕೆಂಚಯ್ಯ, ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಸಿದ್ದಲಿಂಗಪ್ಪ, ಪದನಿಮ್ಮಿತ್ತ ನಿರ್ದೇಶಕರಾದ ಕೆ.ಎಸ್.ಹರೀಶ್ ಕುಮಾರ್, ಕಾರ್ಯದರ್ಶಿ ಕೆ.ಲೋಕೇಶ್, ಸಿಬ್ಬಂದಿಗಳಾದ ರಾಮೇಗೌಡ, ಲಾವಣ್ಯ, ಎ.ವೈ.ವಿನಯ್, ಮುಖಂಡರಾದ ಗುಡ್ಡೇನಹಳ್ಳಿ ಜಯ್ಯಣ್ಣ, ಕಣಕೂರು ಶ್ರೀನಿವಾಸ್ ಸೇರಿದಂತೆ ಹಲವರು ನೂತನ ಉಪಾಧ್ಯಕ್ಷರನ್ನು ಅಭಿನಂಧಿಸಿದರು.