ಮಸಣ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಸಣ ಕಾರ್ಮಿಕರ ಸಂಘದ ಕಾರ್ಮಿಕರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆಯುವ ಮೂಲಕ ಸೋಮವಾರ ಪತ್ರ ಚಳವಳಿ ನಡೆಸಿದರು.
ಬಾಗೇಪಲ್ಲಿ ಪಟ್ಟಣದಲ್ಲಿ ಪತ್ರ ಚಳವಳಿಯಲ್ಲಿ ಭಾಗವಹಿಸಿ ಮಾತನಾಡಿದ ಮಸಣ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಕೆ.ಮುನಿಯಪ್ಪ, ನೂರಾರು ವರ್ಷಗಳಿಂದ ಸ್ಮಶಾನಗಳಲ್ಲಿ ಶವ ಹೂಳುವ, ಸುಡುವ, ಹಲಗೆ ಬಾರಿಸುವ ಮತ್ತು ಸ್ಮಶಾನಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಉಚಿತವಾಗಿ ಮಾಡುತ್ತಾ ಬಂದಿದ್ದಾರೆ. ಇದರಿಂದಾಗಿ ನೂರಾರು ಕುಟುಂಬಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿವೆ. ಇದನ್ನು ಸಾರ್ವಜನಿಕರ ಸೇವೆಯೆಂದು ಇದುವರೆಗೂ ಯಾರೂ ಗುರುತಿಸಿಲ್ಲ. ಆದ್ದರಿಂದ ಉಚಿತ ಕೆಲಸದಿಂದ ಮುಕ್ತಿಗೊಳಿಸಿ ವೇತನ ನೀಡುವಂತೆ ಆಗ್ರಹಿಸಿದರು.
ಮಸಣ ಕಾರ್ಮಿಕರೆಂದು ಸರ್ಕಾರಿದಂದ ಅಧಿಕೃತವಾಗಿ ಗುರುತಿಸಬೇಕು. ಕೂಡಲೇ ಗಣತಿ ಮಾಡಬೇಕು, 45 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಮಾಸಾಶನ ನೀಡಬೇಕು. ಶವಸಂಸ್ಕಾರಕ್ಕೆ ಕುಣಿ ಅಗೆಯುವ ಕೆಲಸ ನರೇಗಾ ಕೆಲಸವನ್ನಾಗಿಸಿ ಪರಿಕರಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಸಿರಿಧಾನ್ಯ ಬೆಳೆಗಳಿಂದ ಆರ್ಥಿಕ ಸಿರಿ : ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ
ಈ ಸಂದರ್ಭದಲ್ಲಿ ಸುಬ್ಬರಾಯಪ್ಪ, ಮೆಹಬೂಬ್, ನರಸಿಂಹಪ್ಪ, ಪರಗೊಡು ಪಂಚಾಯಿತಿ, ನರಸಿಂಹಪ್ಪ, ಬಾಬು, ಮುನಿಯಪ್ಪ, ನರಸಮ್ಮ, ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರ ಪಂಚಾಯಿತಿ ಆದಿನಾರಾಯಣಪ್ಪ, ಶ್ರೀರಾಮಪ್ಪ, ದಪರ್ತಿ, ಪಂಚಾಯಿತಿ ಕೃಷ್ಣಪ್ಪ, ವೆಂಕಟೇಶ್ ಮೂರ್ತಿ, ನಾರಾಯಣ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಮಸಣ ಕಾರ್ಮಿಕರು ಹಾಗೂ ತಮಟೆ ಕಲಾವಿದರು ಭಾಗವಹಿಸಿದ್ದರು.