ಮೌಲಾನಾ ಆಝಾದ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಬಾಗಲಕೋಟೆ ಜಿಲ್ಲೆಯ ಕೆರೂರಿನ ಡಾ. ಶಬಾನಾ ಖೈಸರ್ ಸೂರಿ ನೇಮಕಗೊಂಡಿದ್ದಾರೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಕೆರೂರದ ಡಾ. ಶಬಾನಾ ಅವರು 2003ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಪದವಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. ನಂತರ ವಿಜಯಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮಹಿಳಾ ಅಧ್ಯಯನ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದು, ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಮುಂದುವರಿದು, ಅದೇ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿಯನ್ನೂ ಪಡೆದಿದ್ದರು.
MANUU ನಲ್ಲಿ ಮೊದಲ ಮಹಿಳಾ MANUUTA (ಶಿಕ್ಷಕರ ಸಂಘ) ಅಧ್ಯಕ್ಷೆಯಾದ ಡಾ. ಶಬಾನಾ ಸೂರಿ ಅವರು FEDCUTA (ಫೆಡರೇಶನ್ ಆಫ್ ಸೆಂಟ್ರಲ್ ಯುನಿವರ್ಸಿಟೀಸ್ ಟೀಚರ್ಸ್ ಅಸೋಸಿಯೇಷನ್) ದ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿಯೂ ಆಯ್ಕೆಯಾಗಿದ್ದಾರೆ.

MANUU ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಅವರ ನೇಮಕಾತಿಯು ಅವರ ಕುಟುಂಬ ಸದಸ್ಯರು ಮಾತ್ರವಲ್ಲ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ವಿಜಯಪುರ ಮಹಿಳಾ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಹೆಮ್ಮೆಯ ಸಂಗತಿಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಇನ್ನೂ ಕಡಿಮೆಯಿರುವ ಈ ಸಂದರ್ಭದಲ್ಲಿ, ಡಾ. ಸೂರಿ ಅವರಂತಹ ವಿದ್ಯಾವಂತ ಮಹಿಳೆಯರು ಶೈಕ್ಷಣಿಕ ಪ್ರಗತಿಗೆ ತಮ್ಮ ಕೊಡುಗೆ ನೀಡಬೇಕೆಂಬ ನಿರೀಕ್ಷೆ ಕೂಡ ವ್ಯಕ್ತವಾಗಿದೆ.
ಇದನ್ನು ಓದಿದ್ದೀರಾ? ಬೆಳಗಾವಿ | ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಬಾಣಂತಿ, ಹಸುಗೂಸನ್ನು ಹೊರ ಹಾಕಿ ಮನೆ ಜಪ್ತಿ ಮಾಡಿದ ಫೈನಾನ್ಸ್ ಕಂಪನಿ!
ಡಾ. ಶಬಾನಾ ಕೇಸರ್ ಸೂರಿ ಅವರ ಸಾಧನೆಗೆ ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಕುಟುಂಬದ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
