ಶೋಷಿತ ಸಮುದಾಯಗಳ ಮೇಲಿನ ಶೋಷಣೆ ವಿರುದ್ಧ, ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ನಿರಂತರವಾದ ದಾಳಿ, ದಬ್ಬಾಳಿಕೆ, ಅನ್ಯಾಯಗಳ ವಿರುದ್ಧ ದಲಿತ ಸೇನೆ ಕಾರ್ಯಕರ್ತರು ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ಮೂಲೆ-ಮೂಲೆಗಳಲ್ಲಿ ಸಂಚರಿಸಿ ಶೋಷಿತ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಎಂದು ಸಂಘಟನೆಯ ಹಣಮಂತ್ ಯಳಸಂಗಿ ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ನಡೆದ ದಲಿತ ಸೇನೆ ತಾಲೂಕು ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. “ದಲಿತರು ಮತ್ತು ರಾಜಕೀಯ ಸ್ಥಿತಿಗತಿಗಳ ಕುರಿತು ಅಹಿಂದ ವರ್ಗ ಸಾಮಾಜಿಕ ಮತ್ತು ರಾಜಕೀಯವಾಗಿ ವಿಚಾರ ಮಾಡಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ದುಷ್ಟ ಶಕ್ತಿಗಳನ್ನು ಮೆಟ್ಟಿ ನಿಂತು ನಮ್ಮವರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ” ಎಂದು ಹೇಳಿದರು.
ಸಭೆಯಲ್ಲಿ ದಲಿತ ಸೇನೆ ರಾಜ್ಯ ಅಧ್ಯಕ್ಷರಾದ ಹಣಮಂತ ಯಳಸಂಗಿ ಸರ್.ದಲಿತ ಸೇನೆ ವಿಧ್ಯಾರ್ಥಿ ಒಕ್ಕೂಟದ ರಾಜ್ಯ ಅಧ್ಯಕ್ಷರಾದ ಶಿವಲಿಂಗ ದೊಡ್ಡಮನಿ,ದಲಿತ ಸೇನೆ ಗುಲ್ಬರ್ಗಾ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ್ ಭಂಢಾರಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಗೋಲಾ,ಉಪಾಧ್ಯಕ್ಷರಾದ ಕಪಿಲ್ ವಾಲಿ,ಯುವ ಘಟಕದ ಜಿಲ್ಲಾ ಅಧ್ಯಕ್ಷರಾದ ಅಶ್ರಫ್ ಅಲಿ,ವಿಧ್ಯಾರ್ಥಿ ಘಟಕದ ಅಧ್ಯಕ್ಷರಾದ ಮೋಹನ್ ಚಿನ್ನ,ಗುಲ್ಬರ್ಗಾ ತಾಲೂಕು ಅಧ್ಯಕ್ಷರಾದ ರಾಜು ಲೇಂಗಟಿ,ಇರ್ಷಾದ್ ಅಲಿ,ಜೇವರ್ಗಿ ತಾಲೂಕು ಅಧ್ಯಕ್ಷರಾದ ಶಿವಶರಣ ಮಂದೇವಾಲ,ಜಗದೀಶ್ ನೆಲೋಗಿ,ಪ್ರಕಾಶ್ ಕಾಂಬಳೆ,ಭಾಗೇಶ್ ಸೊನ್ನ, ಯಡ್ರಮಿ ತಾಲುಕು ಉಪಾಧ್ಯಕ್ಷರಾದ ಚಂದ್ರು ಬಳಬಟ್ಟಿ,ಶರಣು ಇಜೇರಿ,ಮಲ್ಲು ಬಿರಾಳ,ಯುವ ಘಟಕದ ತಾಲೂಕು ಅಧ್ಯಕ್ಷರಾದ ಖಮರ್ ಪೀರಾಸಾಬ್,ರಮೇಶ್ ಬಿರಾಳ,ಅಂಬರೀಶ್ ಬಿರಾಳ,ಮೌನೇಶ್ ಆಃದೋಲಾ,ರಾಜು ಆಂದೋಲಾ,ಭೀಮು ಕಟ್ಟಿಮನಿ,ಮಲ್ಲಪ್ಪ ಜಳಿಂದ್ರ ಆಂದೋಲಾ,,ತಾಲೂಕಿನ ವಿವಿಧ ಗ್ರಾಮದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ | ಸಿಟಿಜನ್ ಜರ್ನಲಿಸ್ಟ್ ಮಿಲಿಂದ್ ಸಾಗರ