ಫೆ.10ರಂದು ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯುವ ಕಾಯಕ ಶರಣರ ಜಯಂತಿಯನ್ನು ಅದ್ದೂರಿಯಾಗಿ ನೆರವೇರಿಸಲು ಸಮಸ್ತ ಸಮಗಾರ ಬಾಂಧವರು ಸಹಕರಿಸುವುದಾಗಿ ಜಿಲ್ಲಾ ಸಮಗಾರರ ಹಿತರಕ್ಷಣಾ ವೇದಿಕೆ ನಿರ್ಧರಿಸಿದೆ.
ಶಿವಮೊಗ್ಗ ನಗರದ ಆರ್‌ಟಿಒ ರಸ್ತೆಯ ಸರ್ಕಾರಿ ನೌಕರರ ಎಸ್ಸಿ/ಎಸ್ಟಿ ಭವನದಲ್ಲಿ ಶನಿವಾರ ವೇದಿಕೆಯ ಸಭೆ ನಡೆಯಿತು. ಜಯಂತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಆಸಕ್ತರು ತಮ್ಮ ಹೆಸರುಗಳನ್ನು ನೋಂದಾಯಿಸಲು ಸೂಚಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ ವಹಿಸಿದ್ದರು. ಜಿಲ್ಲೆಯ ಸಮಸ್ತ ಸಮಗಾರರ ಅಭಿವೃದ್ಧಿಯ ಬಗ್ಗೆ, ವೇದಿಕೆಯ ಎಲ್ಲ ತಾಲೂಕು ಅಧ್ಯಕ್ಷರು, ಗ್ರಾಮ ಅಧ್ಯಕ್ಷರು ಮತ್ತು ಜಿಲ್ಲಾ ಮಟ್ಟದ ನೂತನ ಪದಾಧಿಕಾರಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಯಿತು.
ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ದೇಶದ ಶೇ. 80ರಷ್ಟು ಸಂಪತ್ತು ಮೇಲ್ವರ್ಗಗಳ ಕೈಯಲ್ಲಿದೆ: ಎಸ್ ಮೂರ್ತಿ
ಈ ವೇಳೆ ವೇದಿಕೆಯ ಕಾರ್ಯದರ್ಶಿ ಗೋವಿಂದ ನಾಯ್ಕ, ಖಜಾಂಚಿ ಗೋಪಾಲ ಕದಂ, ಶಿವಮೊಗ್ಗ ಜಿಲ್ಲಾ ಸಮಗಾರ ಸಂಘದ ಅಧ್ಯಕ್ಷ ವೆಂಕಟರಮಣ ಹೊನ್ನಾವರ್ಕರ್, ಕಾರ್ಯದರ್ಶಿ ಅಶೋಕ್ ಕುಮಾರ್ ಎಜೆ, ಸಹ ಕಾರ್ಯದರ್ಶಿ ಶಿವಾನಂದ, ಗೌರವ ಅಧ್ಯಕ್ಷ ನಾಗೇಂದ್ರ ಶಿರೂರ್ಕರ್, ಸದಸ್ಯರಾದ ಕೆ.ಗಣೇಶ್, ಕಲ್ಲೇಶ್ ಪಿ ಖಾನಪೇಟ್, ಜಯಂತ್ ಹಾಗೂ ಇತರರು ಇದ್ದರು.