ದೇಶದ ಪ್ರಧಾನಿಗಳಿಗೆ ಗೌರವಿಸಿ ಮಾತನಾಡಬೇಕೆನ್ನುವ ಕನಿಷ್ಠ ಸಂಸ್ಕಾರವಿಲ್ಲದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿಯವರು, ಪ್ರಧಾನಿಗಳ ಬಗ್ಗೆ ತುಚ್ಚ ಪದ ಬಳಸಿ ಯುವಕರಿಗೆ ಕರೆಕೊಟ್ಟಿರುವುದು ಖಂಡನಾರ್ಹ, ಇದು ಅವರ ಸಂಸ್ಕೃತಿ ಎತ್ತಿ ತೊರಿಸುತ್ತದೆ ಎಂದು ಕೇಂದ್ರ ಸಚಿವ ಖೂಬಾ
ಖಂಡಿಸಿದ್ದಾರೆ.
ಕಾರಟಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ “ಯುವಕರು. ವಿದ್ಯಾರ್ಥಿಗಳು ಮೋದಿ ಮೋದಿ ಎನ್ನುತ್ತಾರೆ, ಅಂತವರ ಕಪಾಳಕ್ಕೆ ಹೊಡೆಯಬೇಕು” ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಂಸದ ಖೂಬಾ ಅವರು, “ಪ್ರಧಾನಿ ಮೋದಿಜಿಯವರು ದೇಶದ ಅಭಿವೃದ್ದಿಗಾಗಿ ಹಾಕುತ್ತಿರುವ ಶ್ರಮ, ಇಡಿ ವಿಶ್ವಕ್ಕೆ ಗೊತ್ತು, ಅಂತರಾಷ್ಟ್ರೀಯ ಮಟ್ಟದಲ್ಲಿ ಜಗತ್ತಿನ ಎಲ್ಲಾ ದೇಶಗಳು ಇಂದು ನರೇಂದ್ರ ಮೋದಿಯವರ ಸಲಹೆ ಸೂಚನೆಗಳಿಗಾಗಿ ಕಾಯುತ್ತವೆ, ಇಂತಹ ಪ್ರಧಾನಿಗಳನ್ನು ಪಡೆದ ಭಾರತಿಯರು ಧನ್ಯರು” ಎಂದು ಸಚಿವ ಖೂಬಾ ತಿಳಿಸಿದ್ದಾರೆ.
“ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ, ಇಂತಹ ಪದಗಳು ಬಳಸುವುದು ಬಿಟ್ಟು, ತಮಗೆ ವಹಿಸಿದ ಸಚಿವಾಲಯದ ಕೆಲಸದ ಕಡೆ ಗಮನಹರಿಸಲಿ, ಇಂತಹ ಸಚಿವರ ಹೇಳಿಕೆಗಳಿಂದ ಇಂದು ಈ ರಾಜ್ಯದ ಜನರು ತಲೆ ತಗ್ಗಿಸುವಂತಾಗಿದೆ, ಇಂತವರನ್ನು ಬೆಳೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಬರುವ ಚುನಾವಣೆಯಲ್ಲಿ ಜನರೇ ಬುದ್ದಿ ಕಲಿಸುತ್ತಾರೆ” ಎಂದು ಕೇಂದ್ರ ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದರು.
ಕೂಡಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವರ ಪರವಾಗಿ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಸಚಿವ ಶೀವರಾಜ ತಂಗಡಗಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಸಚಿವ
ಖೂಬಾ ಆಗ್ರಹಿಸಿದರು.
ಬಂಜಾರಾ ಸಮಾಜದವರೊಂದಿಗೆ ಹೋಳಿ ಆಚರಣೆ :
ಹೊಳಿ ಹಬ್ಬದ ನಿಮಿತ್ಯ, ಸಂಸದ ಭಗವಂತ ಖೂಬಾರವರ ಮನೆಗೆ ಜಿಲ್ಲೆಯ ಬಂಜಾರಾ ಸಮಾಜದ ತಾಯಂದಿರು, ಸಹೊದರಿಯವರು ಆಗಮಿಸಿ, ಹಾಡು ಹಾಡಿ, ಆಶೀರ್ವದಿಸಿದರು.
ಜೊತೆಗೆ ಸಂಸದರು ಸಹ ಅವರೊಂದಿಗೆ ಅವರ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಈ ಸುದ್ದಿ ಓದಿದ್ದೀರಾ? ಸುರಪುರ ವಿಧಾನಸಭಾ ಉಪ ಚುನಾವಣೆ: ʼಕೈʼ ಹಿಡಿಯುವುದೇ ಅನುಕಂಪದ ಅಲೆ
ಈ ವೇಳೆ ಪಕ್ಷದ ಮುಖಂಡರು, ವಿವಿಧ ಸಂಘಟನೆಯ, ಸಮಾಜದ ಮುಖಂಡರುಗಳು, ಕಟುಂಬದವರು
ಸಚಿವರಿಗೆ ಬಣ್ಣ ಹಚ್ಚಿ, ಮೂರನೆ ಬಾರಿಗೆ ಆಯ್ಕೆಯಾಗಿ ಎಂದು ಶುಭ ಹಾರೈಸಿದರು.