ದೇಶದ ಹಲವೆಡೆ ಮಾಕ್ ಡ್ರಿಲ್ ನಡೆಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರದ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಶಿವಮೊಗ್ಗದ ಏರ್ ಪೋರ್ಟ್ ನಲ್ಲಿ ಮಾಕ್ ಡ್ರಿಲ್ ನಡೆಸಲಾಗಿದೆ. ಶಿವಮೊಗ್ಗದ ಸೋಗಾನೆಯಲ್ಲಿರುವ ಏರ್ಪೋಟ್ ನಲ್ಲಿ ಮಾಕ್ ಡ್ರಿಲ್ ಮೂಲಕ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ.
ಯುದ್ಧದ ಸಂದರ್ಭದಲ್ಲಿ ತಮ್ಮ ರಕ್ಷಣೆ ಹಾಗೂ ಸಾರ್ವಜನಿಕರ ರಕ್ಷಣೆಯನ್ನ ಹೇಗೆ ಮಾಡುವುದನ್ನ ನಡೆಸಲಾಗಿದೆ. ಗಾಯಾಳುಗಳ ರಕ್ಷಣೆ ಬಗ್ಗೆ ಮಾಕ್ ಡ್ರಿಲ್ ಮೂಲಕ ತಿಳಿಸಲಾಗಿದೆ. ಗಾಯಾಳುಗಳ ಹೊತ್ತೋಯ್ದು ಮಾಕ್ ಡ್ರಿಲ್ ಗಳ ಮೂಲಕ ರಕ್ಷಣೆಯನ್ನ ಸಿಬ್ಬಂದಿಗಳು ತಿಳಿಸಿದರು. ಏರ್ಪೋರ್ಟ್ ಟರ್ಮಿನಲ್ ಹಾಗೂ ರನ್ ವೇ ಗಳಲ್ಲಿ ಮಾಕ್ ಡ್ರೀಲ್ ನಡೆದಿದೆ. ಮಾಕ್ ಡ್ರೀಲ್ ನಲ್ಲಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.
