ಉರಿ ಬಿಸಿಲಿನ ಹವಾಮಾನ ಏರಿಕೆಯಿಂದ ಕಂಗೆಟ್ಟಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಬುಧವಾರ ಸಂಜೆಯ ಬಳಿಕ ಮಳೆಯ ಸಿಂಚನವಾಗಿದ್ದು, ಮುಂಗಾರು ಪೂರ್ವ ಮಳೆಗೆ ಜನ ಸಂತಸಗೊಂಡಿದ್ದಾರೆ.
ಮಂಗಳೂರು ನಗರದಲ್ಲಿ ಬುಧವಾರ ರಾತ್ರಿ 9 ಗಂಟೆಯ ಮಳೆಯ ಸಿಂಚನವಾದರೆ ಪುತ್ತೂರು ತಾಲೂಕಿನ ಸವಣೂರು, ಸುಳ್ಯ ಕಡಬ, ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ನಾನಾ ಕಡೆ ಕೂಡ ಮಳೆ ಸುರಿದಿದೆ.
ಉಪ್ಪಿನಂಗಡಿ ಸೇರಿದಂತೆ ಕೆಲವೆಡೆ ಸಾಧಾರಣ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿರುವುದಾಗಿ ವರದಿಯಾಗಿದೆ. ಕಡಬ ತಾಲೂಕಿನ ಸವಣೂರು, ಚಾರ್ವಾಕದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ ಎಂದು ತಿಳಿದು ಬಂದಿದೆ.
ಉರಿ ಬಿಸಿಲಿನ ತಾಪಮಾನ ಏರಿಕೆಯಿಂದ ಕಂಗೆಟ್ಟಿದ್ದ ದ.ಕ. ಜಿಲ್ಲೆಯ ಬಹುತೇಕ ಕಡೆ ಬುಧವಾರ ಸಂಜೆಯ ಬಳಿಕ ಮಳೆಯ ಸಿಂಚನವಾಗಿದೆ. ಬುಧವಾರ ರಾತ್ರಿ 9ರ ಬಳಿಕ ಮಳೆಯ ಸಿಂಚನವಾದರೆ ಪುತ್ತೂರು ತಾಲೂಕಿನ ಸವಣೂರು, ಸುಳ್ಯ ಕಡಬ, ಉಪ್ಪಿನಂಗಡಿ,ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ನಾನಾ ಕಡೆ ಮಳೆಯಾಗಿದೆ. ಕೆಲವೆಡೆ ಸಾಧಾರಣ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ. pic.twitter.com/nVAvZl4nzK
— Irshad Venur (@irshad_venur) March 13, 2025
ಪುತ್ತೂರು ನಗರದಲ್ಲಿ ಸಾಧಾರಣ ಮಳೆಯಾದರೆ ಇನ್ನಿತರ ಕೆಲವು ಕಡೆ ಉತ್ತಮ ಮಳೆಯಾಗಿದೆ. ಇದರಿಂದ ಈ ಪರಿಸರದಲ್ಲಿ ತಣ್ಣಗಿನ ವಾತಾವರಣ ಕಂಡು ಬಂದಿದೆ.
ಮುಂದಿನ ಇನ್ನೂ ಎರಡು ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಉರಿಬಿಸಿಲಿನ ಮಧ್ಯೆಯೂ
ರಮಝಾನ್ ತಿಂಗಳ ಉಪವಾಸವನ್ನು ಮುಸ್ಲಿಂ ಸಮುದಾಯದ ಮಂದಿ ಆಚರಿಸುತ್ತಿದ್ದು, ಮುಂಗಾರು ಪೂರ್ವ ಮಳೆಯಿಂದಾಗಿ ಕೊಂಚ ಮಟ್ಟಿಗೆ ನಿರಾಳಗೊಂಡಿದ್ದಾರೆ.
