ವಿಕಲಚೇತನರಿಗಿಂತ ಹೆಚ್ಚಾಗಿ ಸಭ್ಯ ಸಮಾಜಕ್ಕೆ ಆಕ್ಸೆಸಿಬಿಲಿಟಿ ಕುರಿತು ತಿಳಿ ಹೇಳಬೇಕಾದ ಅಗತ್ಯತೆ ಅಧಿಕವಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್ ದ್ವಾರಕಾನಾಥ್ ತಿಳಿಸಿದರು.
ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಕಾರ್ಯಕರ್ತರು ಬೆಂಗಳೂರಿನಲ್ಲಿ ಜುಲೈ 13ರಿಂದ 15ರವರೆಗೆ ಆಯೋಜಿಸಲಾಗಿದ್ದ ಮೂರು ದಿನಗಳ ರಾಜ್ಯಮಟ್ಟದ ಆಕ್ಸೆಸಿಬಿಲಿಟಿ(ಸುಲಭ ಲಭ್ಯತೆ) ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವೇಳೆ ರಾಜ್ಯ ವಿಕಲಚೇತನರ ಆಯೋಗದ ಆಯುಕ್ತೆ ಲತಾ ಕುಮಾರಿ ಎಸ್ ಅವರು ವಿಕಲಚೇತನರ ಕುರಿತು ಸಮಾಜದಲ್ಲಿರುವ ತಿರಸ್ಕಾರ ಭಾವದ ಬಗ್ಗೆ ಬೇಸರ ವ್ಯಕ್ತಪಡಿಸಿದರು ಹಾಗೂ ವಿಕಲಚೇತನರು ಆರ್ಥಿಕವಾಗಿ ಸಶಕ್ತರಾಗಿ ನಿಲ್ಲಬೇಕೆಂದು ಕರೆ ನೀಡಿದರು.
ಮುನಿರಾಜು ನೂತನ ರಾಜ್ಯಾಧ್ಯಕ್ಷ
ಕರ್ನಾಟಕ ಆಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್‌ನ ನೂತನ ರಾಜ್ಯಾಧ್ಯಕ್ಷರಾಗಿ ಚಿಕ್ಕಬಳ್ಳಾಪುರದ ಮುನಿರಾಜು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಾಯಚೂರಿನ ಸುರೇಶ್ ಭಂಡಾರಿ ಆಯ್ಕೆಯಾದರು. ಉಪಾಧ್ಯಕ್ಷ ಯಶೋಧಾ ಇಳಕಲ್, ಖಜಾಂಜಿ ಬಳ್ಳಾರಿಯ ಉಮಾಪತಿಗೌಡ ಮತ್ತು ಗೌರವಾಧ್ಯಕ್ಷರಾಗಿ ಬಿಜಾಪುರದ ಸಬೀಹಾ ಬೇಗಂ ಆಯ್ಕೆಯಾದರು.
ಆಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್‌ನ ಜಿಲ್ಲಾವಾರು ಅಧ್ಯಕ್ಷರ ನೇಮಕ
ಕೆ ಪಿ ರವಿ- ಚಿಕ್ಕಬಳ್ಳಾಪುರ ಜಿಲ್ಲೆ, ಎಲ್ಲಮ್ಮ ಮಡಿವಾಳ- ವಿಜಯಪುರ ಜಿಲ್ಲೆ, ಹುಸೇನ್ ಸಾಬ್ ಮುದಗಲ್- ಬಾಗಲಕೋಟೆ ಜಿಲ್ಲೆ, ಗಾಯತ್ರಿ- ಕಲಬುರಗಿ ಜಿಲ್ಲೆ, ತಬಸ್ಸುಮ್- ದಾವಣಗೆರೆ ಜಿಲ್ಲೆ, ಎಂ ಡಿ ಜಾಫರ್- ರಾಯಚೂರು ಜಿಲ್ಲೆ, ಬೀಮಪ್ಪ- ವಿಜಯನಗರ ಜಿಲ್ಲೆ, ಸುನೀಲ್- ಯಾದಗಿರಿ ಜಿಲ್ಲೆ, ಕ್ರಿಸ್ಟಲ್ ಪ್ರಭಾ- ಬೆಂಗಳೂರು ಹಾಗೂ ರಮೇಶ್‌ರವರು ಕೋಲಾರ ಜಿಲ್ಲಾ ಆಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್‌ನ ಜಿಲ್ಲಾವಾರು ಅಧ್ಯಕ್ಷರಾಗಿ ನೇಮಕವಾದರು.
ಈ ಸುದ್ದಿ ಓದಿದ್ದೀರಾ? ಗದಗ | ಶೋಷಣೆ ವಿರುದ್ಧ ದನಿ ಎತ್ತಲು ಧೈರ್ಯ ಬರಬೇಕಾದರೆ ಉನ್ನತ ಶಿಕ್ಷಣ ಪಡೆಯಬೇಕು: ವಿಠ್ಠಲ್ ವಗ್ಗನ್
ಇದೇ ವೇಳೆ, ಕರ್ನಾಟಕ ಆಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್‌ನ ನೂತನ ಪದಾಧಿಕಾರಿಗಳು ಹಾಗೂ ಸಕ್ರಿಯ ಕಾರ್ಯಕರ್ತರನ್ನು ಕಾರ್ಯಾಗಾರದಲ್ಲಿ ಸನ್ಮಾನಿಸಲಾಯಿತು.