ಸಮಾಜ ನಿರ್ಮಾಣಕ್ಕೆ ಸ್ವಾಮೀಜಿಯವರ ಪಾತ್ರ ಪ್ರಸ್ತುತದಲ್ಲಿ ಬಹಳ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಸ್ವಾಮೀಜಿಗಳು ಮುಂದಿನ ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮುಸ್ಲಿಂ ಬಾಂಧವ್ಯ ವೇದಿಕೆಯ ಅಧ್ಯಕ್ಷ ಅನೀಶ್ ಪಾಶಾ ಆಹ್ವಾನಿಸಿದರು.
ಮುಸ್ಲಿಂ ಸಾಹಿತಿಗಳು, ಲೇಖಕರು, ಚಿಂತಕರು ಮತ್ತು ಸಾಧಕರ ವೇದಿಕೆ “ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ” ಇದರ ನಿಯೋಗ ರಾಜ್ಯದ ರಾಜಕೀಯ ಧಾರ್ಮಿಕ ಸಾಮಾಜಿಕ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರವಹಿಸುವ ಜಗದ್ವಿಖ್ಯಾತ ಮಠ ಮಂಡ್ಯ ಜಿಲ್ಲೆ ಬೆಳ್ಳೂರು ತಾಲೂಕಿನ ಆದಿಚುಂಚನಗಿರಿಯಲ್ಲಿ ನಿರ್ಮಲಾನಂದ ಸ್ವಾಮೀಜಿಯವರನ್ನು ಭೇಟಿಯಾಗಿ ಮಾತನಾಡಿದರು.
ಸಂಘಟನೆಯ ಸ್ವರೂಪದ ಬಗ್ಗೆ ಸ್ವಾಮೀಜಿ ಅಭಿಮಾನ ವ್ಯಕ್ತಪಡಿಸಿದ್ದು, “ಕರ್ನಾಟಕದಲ್ಲಿ ಮುಸ್ಲಿಂ ಬಾಂಧವ್ಯ ವೇದಿಕೆಯು ಹಿಂದೂ ಮುಸ್ಲಿಂ ಬಾಂಧವ್ಯಕ್ಕೆ ಹೊಸ ಭಾಷ್ಯ ಮುನ್ನುಡಿ ಬರೆಯಲಿದೆ” ಎಂದು ಅಭಿಮಾನದಿಂದ ಹೇಳಿದರು.
ಈ ನಿಯೋಗದಲ್ಲಿ ಕಾರ್ಯದರ್ಶಿ ಮುಷ್ತಾಕ್ ಹೆನ್ನಾಬೈಲ್, ಖಜಾಂಚಿ ಮುಬಾರಕ್ ಗುಲ್ವಾಡಿ, ನಜೀರ್ ಬೆಳವಾಯಿ, ರಶೀದ್ ಉಪ್ಪಿನಂಗಡಿ, ಚಮನ್ ಷರೀಫ್ ಚಿತ್ರದುರ್ಗ, ಅಬ್ದುಲ್ ಘನಿ ಮಂಡ್ಯ, ಅಬ್ದುಲ್ ರೆಹಮನ್ ಬಿದರಕುಂದಿ, ದಸ್ತಗೀರ್ ಕಲಹಳ್ಳಿ, ಇಬ್ರಾಹಿಮ್ ಸಾಹೇಬ್ ಕೋಟಾ, ಮುಜ್ಹಫರ್ ಹುಸೈನ್ ಪಿರಿಯಾಪಟ್ಟಣ, ಜಾಕೀರ್ ಹುಸೇನ್, ಎಸ್ ಕೆ ಇಬ್ರಾಹಿಮ್, ಲೋಹಾನಿ ಮಳಗಿ, ಅಶ್ರಫ್ ಕುಂದಾಪುರ, ಉಸ್ಮಾನ್ ಹೈಕಾಡಿ, ಹಕೀಮ್ ತೀರ್ಥಹಳ್ಳಿ, ಇಕ್ಬಾಲ್ ಹಾಲಾಡಿ ಇದ್ದರು.