ಎಲ್ಲ ಜಾತಿ ವರ್ಗದ ಜನರೂ ಸಂವಿಧಾನದ ಆಶಯಗಳಿಗೆ ಬದ್ದರಾಗಿರಬೇಕು. ಆಗ ಮಾತ್ರ ಅಸ್ಪೃಷ್ಯತೆ ತೊಲಗಲು ಸಾಧ್ಯ ಎಂದು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಕುರಿತ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಸುರೇಶ್ ಚಲವಾದಿ ಹೇಳಿದ್ದಾರೆ.
ಗದಗ ಜಿಲ್ಲೆಯ ಕದಡಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಭಾರತದ ಪ್ರತಿಯೊಬ್ಬ ಪ್ರಜೆಗೂ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಬದುಕಲು ಸಮಾನ ಅವಕಾಶವನ್ನು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿದ್ದಾರೆ. ಅದರ ಭಾಗವಾಗಿ ಪ್ರಜ್ಞಾವಂತ ನಾಗರಿಕ ಬಂಧುಗಳು ಸಂವಿಧಾನದ ಆಶಯಗಳಿಗೆ ಬದ್ದರಾಗಿ ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳಬೇಕು ಅಂದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ” ಎಂದರು.
“ಬುದ್ದ ಬಸವ ಅಂಬೇಡ್ಕರ್ ಕಾಲದಿಂದ ಹಿಡಿದು ಪ್ರಸ್ತುತ ದಿನಮಾನದಲ್ಲಿಯೂ ಅಸ್ಪೃಷ್ಯತೆ ಆಚರಣೆಯಲ್ಲಿರುವುದು ನೋವಿನ ಸಂಗತಿ. ಅಸ್ಪೃಷ್ಯತೆ ನಿರ್ಮೂಲನೆ ಮಾಡಲು ಇಂತಹ ತಿಳುವಳಿಕೆ ಕಾರ್ಯಕ್ರಮವನ್ನು ನೀಡುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಾರ್ಯ ಶ್ಲಾಘನೀಯ. ಇಷ್ಟೆಲ್ಲಾ ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಾಗ್ಯೂ ಸಹಿತ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಅಸ್ಪೃಷ್ಯತೆ ಇನ್ನೂ ಜೀವಂತ ಇರುವದು ದುರಂತವೇ ಸರಿ. ಅಂತಹ ಗ್ರಾಮಗಳನ್ನು ಗುರ್ತಿಸಿ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಇನ್ನೂ ಹೆಚ್ಚು ಕಾನೂನು ತಿಳುವಳಿಕೆ ನೀಡಿ ಜಿಲ್ಲೆಯಲ್ಲಿ ಸಾಮರಸ್ಯದ ಬದುಕು ನಿರ್ಮಿಸಲು ಶ್ರಮವಹಿಸಬೇಕು” ಎಂದು ಹೇಳಿದರು.
ತಾಲೂಕ ಸಮಾಜ ಕಲ್ಯಾಣಾಧಿಕಾರಿ ವಿಜಯಲಕ್ಷ್ಮೀ ಇಂಗಳಳ್ಳಿ ಮಾತನಾಡಿ, “ಗ್ರಾಮೀಣ ಪ್ರದೇಶದ ಕೆಲವು ಗ್ರಾಮಗಳಲ್ಲಿ ಅಸ್ಪ್ರಷ್ಯತೆ ಇನ್ನೂ ಜೀವಂತವಿರುವದು ತುಂಬಾ ನೋವಿನ ಸಂಗತಿ ಇಂತಹ ಪ್ರಕರಣಗಳನ್ನು ಹೋಗಲಾಡಿಸಲು ಇಲಾಖೆ ಶ್ರಮಿಸುತ್ತಿದೆ. ಶೋಷಿತರ ಪರವಾಗಿ ನಮ್ಮ ಇಲಾಖೆ ಹಾಗೂ ನಮ್ಮ ಮೇಲಾಧಿಕಾರಿಗಳು ಸದಾಕಾಲ ಶ್ರಮಿಸುತ್ತೇವೆ” ಎಂದು ಹೇಳಿದರು.
ಜೇನುಗೂಡು ಕಲಾ ತಂಡ ಹಾಗೂ ಪ್ರಥ್ವಿಪ್ರಿಯಾ ಸಾರ್ವತ್ರಿಕ ಸೇವಾ ಸಂಸ್ಥೆಯವರು ಅಸ್ಪ್ರಷ್ಯತೆಯ ಕುರಿತು ಕ್ರಾಂತಿಗೀತೆ ಹಾಗೂ ಬೀದಿ ನಾಟಕ ಪ್ರದರ್ಶನ ಮಾಡಿ ಜನರಲ್ಲಿ ಜಾಗ್ರತಿ ಮೂಡಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಸಂಶಿಯವರು ಅಸ್ಪ್ರಷ್ಯತೆಯ ಆಚರಣೆಯಿಂದಾಗುವ ಮಾನದಂಡಗಳ ಕುರಿತು ಕಾನೂನು ತಿಳುವಳಿಕೆ ನೀಡಿದರು.ಈ ಸಂದರ್ಭದಲ್ಲಿ ಡಿ.ವೈ ಎಸ್ಪಿ ಗದಗ.ತಹಶಿಲ್ದಾರ್ ಗದಗ.ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕರಾದ ಶ್ರೀಮತಿ ಮಂಜುಳಾ ಅವರು.ತಾಲೂಕಾ ಪಂಚಾಯ್ತಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮ ಪಂಚಾಯ್ತಿ ಆಢಳಿತ ಮಂಡಳಿ ಹಾಗೂ ಗ್ರಾಮದ ಸಮಸ್ತ. ಗುರು ಹಿರಿಯರು ಯುವಕ ಮಿತ್ರರು ಉಪಸ್ಥಿತರಿದ್ದರು.