ಚಾಮುಂಡಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ನಂದಿಸಲು ಹರ ಸಾಹಸ ಪಡುತ್ತಿದ್ದಾರೆ. ಬೆಂಕಿಗೆ ಕಾರಣ ಕಿಡಿಗೇಡಿಗಳು ಬೀಡಿ, ಸಿಗರೇಟು ಸೇವಿಸಲು ಬಳಸಿರುವ ಬೆಂಕಿ ಕಡ್ಡಿ ಸರಿಯಾಗಿ ಆರಿಸದೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳೀಯರು, ಪ್ರವಾಸಿಗರು ಬೆಂಕಿ ನಂದಿಸುವ ಕೆಲಸಕ್ಕೆ ತಮ್ಮಿಂದಾಗುವ ನೆರವು ನೀಡುತಿದ್ದು, ದಟ್ಟವಾದ ಹೊಗೆಯಿಂದ ಸುತ್ತಲ ಪ್ರದೇಶ ಆವ್ರುತವಾಗಿದೆ. ಈಗಾಗಲೇ ಬೆಂಕಿ ನೂರಾರು ಎಕರೆಗೆ ವ್ಯಾಪಿಸಿದೆ ಎಂದು ತಿಳಿದುಬಂದಿದೆ.
ಬೇಸಿಗೆ ಆರಂಭದ ದಿನಗಳಾದ್ದರಿಂದ ಮರ, ಗಿಡಗಳು ಒಣಗಿ, ತರಗೆಲೆಗೆ ಬೆಂಕಿ ತಾಕಿ ಸುತ್ತಲೂ ವ್ಯಾಪಿಸುತ್ತಿದೆ. ರಸ್ತೆ ಬಂದಿಯಿಂದ ಹೊತ್ತಿಕೊಂಡಿರುವ ಬೆಂಕಿ ಗಮನಿಸಿದರೆ ಯಾರೋ ಕಿಡಿಗೇಡಿಗಳಿಂದ ಆಗಿರುವ ಕೃತ್ಯ ಎನ್ನುತ್ತಾರೆ ಸ್ಥಳೀಯರು.
ಈ ಸುದ್ದಿ ಓದಿದ್ದೀರಾ? ಕೊಡಗು | ಇಳೆಗೆ ತಂಪೆರೆದ ಮಳೆ
ಈಗಾಗಲೇ ಮೂರು ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿಕೊಂಡಿವೆ.ಎಷ್ಟೇ ಪ್ರಯತ್ನ ಪಟ್ಟರು ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ. ಒಣ ಗಿಡ ಮರಗಳಿಂದ ಬೆಂಕಿ ವ್ಯಾಪಾಕವಾಗಿ ಹಬ್ಬುತ್ತಿದೆ ಎಂದು ತಿಳಿದುಬಂದಿದೆ.
