ಮೈಸೂರಿನ ಶ್ರೀರಾಂಪುರದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯಂದು ಈದಿನ. ಕಾಮ್ ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ಹೋರ ತಂದಿರುವ ‘ ಅರಿವೇ ಅಂಬೇಡ್ಕರ ‘ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದರು.
ಲೇಖಕರಾದ ನಾ. ದಿವಾಕರ್ ವಿದ್ಯಾರ್ಥಿಗಳ ಕುರಿತು ಮಾತನಾಡಿ ” ಅಂಬೇಡ್ಕರ್, ಗಾಂಧಿ, ಕಾರ್ಲ್‌ಮಾರ್ಕ್ಸ್ ಸೇರಿದಂತೆ ಸಾಧಕ ಮಹನೀಯರ ಕುರಿತಾಗಿ ವಿಚಾರಗಳನ್ನು ಓದಿ ಮನನ ಮಾಡುವುದು. ಓದಿನ ಅರಿವಿನಿಂದ ತಮ್ಮದೇ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಲು ಸಹಕಾರಿ. ಅಂದಿನ ಹೋರಾಟಗಳು, ಸಾಗಿ ಬಂದ ಕಠಿಣ ಹಾದಿಗಳು, ಬದುಕಿನ ಸಾರ ಪುಸ್ತಕದ ಓದಿನಿಂದ ಮಾತ್ರ ತಿಳಿಯಲು ಸಾಧ್ಯ.’ ಓದಿನಲ್ಲಿ ಜೀವವಿದೆ, ಜೀವವಿದೆ ‘.
ಅದನ್ನ, ಅರ್ಥೈಸಿ ವಿದ್ಯಾರ್ಥಿಗಳು ಓದಿನ ಆಸಕ್ತಿ ಬೆಳೆಸಿಕೊಳ್ಳಬೇಕು ಉತ್ತಮವಾದ ಸಮಾಜ ನಿರ್ಮಿಸಲು ಮೊದಲು ನಿಮ್ಮಲ್ಲಿ ಅಂತಹ ಪರಿವರ್ತನೆ ಕಂಡುಕೊಳ್ಳಬೇಕು ಅದಕ್ಕಾಗಿ ಓದುವುದನ್ನು ರೂಡಿಸಿಕೊಳ್ಳಿ. ಪತ್ರಿಕೆ ಪುಸ್ತಕಗಳನ್ನು ಓದುವುದು ಮತ್ತು ಅದರ ಬಗ್ಗೆ ಪರಸ್ಪರ ಚರ್ಚಿಸುವುದು ಉತ್ತಮವಾದ ಬೆಳವಣಿಗೆಯಾಗಿದೆ ” ಎಂದು ಕಿವಿಮಾತು ಹೇಳಿದರು.

ಸಮಾಜ ಚಿಂತಕರಾದ ಶ್ರೀನಿವಾಸ ನಟೇಕರ್ ಮಾತನಾಡಿ ” ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡು, ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಬೇಕು. ಇದಕ್ಕಾಗಿ, ಅಂಬೇಡ್ಕರ್ ವಿಚಾರಗಳ ಸಾರಂಶ ರೂಪದಲ್ಲಿರುವ “ಅರಿವೇ ಅಂಬೇಡ್ಕರ್” ಪುಸ್ತಕವನ್ನು ನಿಮಗೆ ನೀಡುತ್ತೀದ್ದೇವೆ. ಇದನ್ನು ಓದಿ ನಿಮ್ಮ ಜ್ಞಾನ ಮಟ್ಟವನ್ನು ವಿಸ್ತರಿಸಿಕೊಳ್ಳಬೇಕು. ಅಂಬೇಡ್ಕರ್‌ರವರ ಮೂರ್ತಿಗಳನ್ನು ಸ್ವಾಪಿಸಿ ಹಾರ ಹಾಕಿ, ಫೋಟೋಗೆ ಪೂಜೆ ಮಾಡುವದಲ್ಲ, ಅವರ ವಿಚಾರಗಳನ್ನು ಓದಿ ಜೀವನದಲ್ಲಿ ಆಳವಡಿಸಿಕೊಳ್ಳಬೇಕು.
ಅಂಬೇಡ್ಕರ್ ಬರೀ ಹೆಸರಲ್ಲ ಅದೊಂದು ಶಕ್ತಿ ಇಡೀ ಜೀವನವೇ ಹೋರಾಟ. ಓದು, ಬರಹವೇ ಬದುಕಾಗಿತ್ತು. ಅಕ್ಷರ ಜ್ಞಾನ ಸಂಪಾದಿಸಿದ ಮೇರು ವ್ಯಕ್ತಿತ್ವ. ಅಂತಹ, ಮಹನೀಯರ ಬಗ್ಗೆ ಅರಿತು, ಬದುಕಲ್ಲಿ ಅಳವಡಿಸಿಕೊಳ್ಳಬೇಕು ” ಎಂದು ಕರೆ ನೀಡಿದರು.

” ಮೂರ್ತಿ ಭಂಜಕರಾದ ಅಂಬೇಡ್ಕರ್. ಮೂರ್ತಿಗಳನ್ನು ಕೆತ್ತುವುದರಲ್ಲೇ ತೃಪ್ತಿಪಡುವ ನಮ್ಮ ನಿಲವು ದುರಾದೃಷ್ಟಕರ. ಅವರು, ದಿನಕ್ಕೆ 18 ಗಂಟೆಗಳ ಕಾಲ ಓದಿ ಜ್ಞಾನ ಸಂಗ್ರಹಿಸಿದರಿಂದ ನಮಗೆ ಮಾರ್ಗದರ್ಶಕರಾಗಿ ನಿಂತಿದ್ದಾರೆ. ಸರ್ವ ಶ್ರೇಷ್ಠವಾದ ಸಂವಿಧಾನ ನೀಡಿದ್ದಾರೆ. ಮೊಬೈಲ್ ಬಳಕೆಗಿಂತ ಪುಸ್ತಕಗಳನ್ನು ಓದಬೇಕು. ಓದಿನಿಂದ ಮಾತ್ರ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯ, ಸ್ವಾಸ್ತ್ಯ ಬದುಕಿಗೆ ಓದು ಉತ್ತಮವಾದ ವೇದಿಕೆ.
ಎಂತಹದ್ದೇ ಆಧುನಿಕತೆ ತೆರೆದುಕೊಳ್ಳಲಿ, ತಂತ್ರಜ್ಞಾನ ಆವರಿಸಲಿ ಎಲ್ಲದಕ್ಕೂ ಓದುವುದೊಂದೆ ಮಾನದಂಡವಾಗಿದೆ. ಓದಿನ ಮೂಲಕ ಬದಲಾವಣೆ ಸಾಧ್ಯ. ಭವಿಷ್ಯದಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ರೂಪಿಸಿಕೊಳ್ಳಲು, ಉತ್ತಮ ಸಮಾಜ ಕಟ್ಟಲು ಜ್ಞಾನರ್ಜನೆ ಅಗತ್ಯವಿದ್ದು ಅದಕ್ಕಾಗಿ ಪ್ರತಿ ದಿನದ ಒಂದಷ್ಟು ಸಮಯವನ್ನಾದರೂ ಓದಿಗೆ ಮೀಸಲೀಡಬೇಕು ” ಎಂದು ವಕೀಲರಾದ ಬಾರುಕೋಲು ರಂಗಸ್ವಾಮಿ ಸಲಹೆ ನೀಡಿದರು.

ನೆರೆದಿದ್ದ ವಿದ್ಯಾರ್ಥಿಗಳಿಗೆ ‘ ಅರಿವೇ ಅಂಬೇಡ್ಕರ ‘ ವಿಶೇಷ ಸಂಚಿಕೆ ವಿತರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು ನಗರವೋ-ನರಕವೋ, ಕೇಳುವವರಾರು?
ಕಾರ್ಯಕ್ರಮದಲ್ಲಿ ಚಂದ್ರವಲ್ಲಿ, ಶಿಕ್ಷಣ ಇಲಾಖೆ ಮಹಾದೇವಯ್ಯ, ಹಾಸ್ಟೆಲ್ ವಾರ್ಡನ್ ಲೋಕೇಶ್ ಹಾಗೂ ವಿದ್ಯಾರ್ಥಿಗಳು ಇದ್ದರು.