ಕೊಡಗಿನಾದ್ಯಂತ ಗಾಂಜಾ, ನಿಷೇದಿತ ಮಾದಕ ವಸ್ತುಗಳ ಸರಬಾರಾಜು, ಮಾರಾಟ ಜಾಲ ಹೆಚ್ಚಿದ್ದು, ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ವಿರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮೈಸೂರು ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಮೈಸೂರು ಸತ್ಯನಗರದ ನಿವಾಸಿ ಇಲಿಯಾಸ್ (47) ಬಂಧನಕ್ಕೊಳಗಾಗಿರುವ ಆರೋಪಿ. ಈತನಿಂದ ಸರಿ ಸುಮಾರು 30 ಕೆಜಿ 550 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ ಪೊಲೀಸರು.
ಆರೋಪಿಯು ವಿರಾಜಪೇಟೆ ನಿಸರ್ಗ ಬಡಾವಣೆಯ ಕಿರುಮಕ್ಕಿ ಜಂಕ್ಷನ ಸಮೀಪದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಮಹಿಳೆ ಪ್ರೇರಣಾ ಶಕ್ತಿಯ ಪ್ರತೀಕ : ಶಾಸಕ ಡಾ ಮಂತರ್ ಗೌಡ
ವಿರಾಜಪೇಟೆ ಪೊಲೀಸ್ ಉಪ ವಿಭಾಗದ ಡಿಎಸ್ಪಿ ಎಸ್ ಮಹೇಶ್ ಕುಮಾರ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಪಿ ಅನೂಪ್ ಮಾದಪ್ಪ, ವಿರಾಜಪೇಟೆ ನಗರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಿ ಎಸ್ ವಾಣಿಶ್ರೀ ಮತ್ತು ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿದ್ದರು. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರನ್ನು ಜಿಲ್ಲಾ ಅಧೀಕ್ಷಕ ಕೆ ರಾಮರಾಜನ್ ಶ್ಲಾಘಿಸಿದ್ದಾರೆ.