ಮೈಸೂರು ನಗರದ ಚಾಮರಾಜೇಂದ್ರ ಮೃಗಾಲಯ ಮತ್ತು ಕಾರಂಜಿ ಕೆರೆ ಸುತ್ತಲಿನ ಪ್ರದೇಶ ಇನ್ಮುಂದೆ ‘ನಿಶ್ಯಬ್ದ ವಲಯ’ ಎಂದು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅಧಿಸೂಚನೆ ಹೊರಡಿಸಿದ್ದಾರೆ.
“ಮೈಸೂರು ನಗರದ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿ ಸುತ್ತ ಮುತ್ತಲಿನ 50 ಮೀಟರ್ ಸುತ್ತಳತೆಯ ವ್ಯಾಪ್ತಿ ಪ್ರದೇಶದಲ್ಲಿ ಪಟಾಕಿ ಸಿಡಿಸುವುದು, ಧ್ವನಿವರ್ಧಕ ಬಳಕೆ ಹಾಗೂ ವಾಹನಗಳ ಹಾರ್ನ್ ಶಬ್ದಗಳನ್ನು ಮೋಟಾರು ವಾಹನ ಕಾಯ್ದೆ-1988ರ ಕಲಂ 115, 116, ಕರ್ನಾಟಕ ಮೋಟಾರು 2-1989 2-218 2 ಸೆಕ್ಷನ್ 2(ಸಿ), 5ಎ ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿಯಂತ್ರಣ) ನಿಯಮಗಳು, 2000 (ಎಸ್.ಒ.2555(ಇ) ಮೂಲಕ 10/08/2017 ರವರೆಗೆ ತಿದ್ದುಪಡಿ ಮಾಡಿದಂತೆ)ರಲ್ಲಿ ಪ್ರದತ್ತವಾಗಿರುವ ಅಧಿಕಾರದಂತೆ, ಅಕ್ಟೋಬರ್ 16ರಿಂದ ಹೆಚ್ಚುವರಿ ಪರಿಷ್ಕೃತ ಅಧಿಸೂಚನೆ ಜಾರಿ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಅಪರಾಧ ಪ್ರಕರಣಗಳ ವಿಮರ್ಶನ ಸಭೆ; ಅಧಿಕಾರಿಗಳಿಗೆ ಎಸ್‌ಪಿ ಖಡಕ್ ಸೂಚನೆ
ಎಂ ಎಲ್ ಸೋಮಸುಂದರಂ ವೃತ್ತದಿಂದ ಎಸ್ ಲಿಂಗಣ್ಣ ವೃತ್ತದವರೆಗಿನ ಶಾಲಿವಾಹನ ರಸ್ತೆ, ಎಸ್ ಲಿಂಗಣ್ಣ ವೃತ್ತದಿಂದ ಸರ್ಕಸ್ ಗೌಂಡ್ ಜಂಕ್ಷನ್, ಲೋಕರಂಜನ್ ರಸ್ತೆಯಿಂದ ಸರ್ಕಸ್ ಗೌಂಡ್ ಜಂಕ್ಷನ್, ಮಹಾರಾಣಾ ಪ್ರತಾಪ ಸಿಂಹ ವೃತ್ತದಿಂದ ಟ್ಯಾಂಕ್ ಬಂಡ್ ರಸ್ತೆ, ಮಹಾರಾಣಾ ಪ್ರತಾಪ ಸಿಂಹ ವೃತ್ತದಿಂದ ಎಂ ಎಲ್ ಸೋಮಸುಂದರಂ ವೃತ್ತದವರೆಗಿನ ಎಂ ಜಿ ರಸ್ತೆಗಳನ್ನು ಸೂಕ್ಷ್ಮ, ಅಪರೂಪ ಮತ್ತು ವಿನಾಶದ ಅಂಚಿನಲ್ಲಿರುವ ಪ್ರಾಣಿಪಕ್ಷಿಗಳು ಮತ್ತು ವನ್ಯಜೀವಿಗಳ ಸುರಕ್ಷತೆ ಹಾಗೂ ಮೃಗಾಲಯದ ವೀಕ್ಷಕರ, ಸಾರ್ವಜನಿಕ ಸುರಕ್ಷತೆ ಹಿತದೃಷ್ಟಿಯಿಂದ “ನಿಶ್ಯಬ್ದ ವಲಯ” ಎಂದು ಘೋಷಿಸಿ ಅಧಿಸೂಚನೆ ಹೊರಡಿಸಲಾಗಿದೆ.