ಮೈಸೂರು | ಫೆಂಗಲ್‌ ಚಂಡಮಾರುತ; ಅಕಾಲಿಕ ಮಳೆ ಅವಾಂತರಕ್ಕೆ ಭತ್ತ, ರಾಗಿ, ಕಾಫಿ ಫಸಲು ಹಾನಿ

Date:

Advertisements

ಈ ಭಾರಿ ವರ್ಷಪೂರ್ತಿ ಮಳೆಯಾಗಿ ಪರಿಣಮಿಸಿದ್ದು, ಫೆಂಗಲ್‌ ಚಂಡಮಾರುತದಿಂದ ಇನ್ನೂ ಮಳೆ ಹೆಚ್ಚಾಗುವ ಕುರಿತು ಹವಾಮಾನ ಇಲಾಖೆ ಸೂಚನೆಯನ್ನು ನೀಡಿದೆ. ಕೊಡಗು, ಮೈಸೂರು ಭಾಗದಲ್ಲಿ ಕಟಾವಿಗೆ ಬಂದಿದ್ದ ಕಾಫಿ, ಭತ್ತ, ರಾಗಿ ಫಸಲು ಅಕಾಲಿಕ ಮಳೆಯಿಂದ ಹಾನಿಗೊಳಗಾಗಿದೆ.

ಫೆಂಗಲ್ ಚಂಡಮಾರುತ ಅಪ್ಪಳಿಸಿ ಸತತವಾಗಿ ಮಳೆಯಾಗುತ್ತಿರುವ ಕಾರಣ ಫಸಲು ಕಟಾವು ಮಾಡಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮೈಸೂರು ಭಾಗದಲ್ಲಿ ಕಟಾವಿಗೆ ಬಂದಿರುವ ಭತ್ತ, ರಾಗಿ ಬೆಳೆಗಳು ಹಾನಿಯಾಗಿದ್ದು, ಗದ್ದೆಯಲ್ಲಿ ಭತ್ತದ ಪೈರು,
ಹೊಲದಲ್ಲಿ ರಾಗಿ ಪೈರು ನೆಲಕಚ್ಚಿ ನೀರಿನ ತೇವಾಂಶಕ್ಕೆ ಮೊಳಕೆ ಹೊಡೆದಿದೆ. ಇನ್ನು ರೈತ ಕಟಾವು ಮಾಡಲು, ಅರಿ ಕಟ್ಟಲು, ಬಳಗುಪ್ಪ ಹುಯ್ಯಲು ಸಾಧ್ಯವಾಗುತ್ತಿಲ್ಲ. ಕಟಾವು ಮಾಡಿದ ಮೇಲೆ ಬಿಸಿಲಿನಲ್ಲಿ ಒಣಗಬೇಕು. ಸದ್ಯದ ಪರಿಸ್ಥಿತಿ ಮೋಡ ಕವಿದ ವಾತಾವರಣವಿದೆ.

ಗುಡ್ಡೆ ಒಟ್ಟಲು ಆಗುತ್ತಿಲ್ಲ, ಮತ್ತೆ ಮಳೆ ಬರುವ ಸೂಚನೆ ಇರುವುದರಿಂದ ರೈತನಿಗೆ ಚಿಂತೆ ಕಾಡತೊಡಗಿದೆ. ಅದರಲ್ಲೂ ರೈತರಿಗೆ ರಾಗಿ, ಭತ್ತ ಎಷ್ಟು ಮುಖ್ಯವೋ, ಜಾನುವಾರು ಮೇವಿಗೆ ಹುಲ್ಲು ಸಂಗ್ರಹಿಸಿ ಸಂಸ್ಕರಿಸುವುದೂ ಕೂಡಾ ಅಷ್ಟೇ ಅತ್ಯಗತ್ಯ. ಸದ್ಯದ ಸ್ಥಿತಿಯಲ್ಲಿ ಹುಲ್ಲು ನೀರಿನ ತೇವಾಂಶಕ್ಕೆ ಕೊಳೆತಂತೆ, ಬೂಸ್ಟ್ ಹಿಡಿದು ಮುಗ್ಗುಲು ವಾಸನೆ ಬಂದಿದೆ. ಹೀಗಿದ್ದರೆ ರಾಸುಗಳು ದುಂಡಾಡಿಸಲ್ಲ, ಮೇಯುವುದಿಲ್ಲ.

Advertisements
ಭತ್ತ ಹಾನಿ 1

ರೈತ ಮುಖಂಡ ಅಗ್ರಹಾರ ರಾಮೇಗೌಡ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ರಾಸುಗಳಿಗೆ ಭತ್ತ, ರಾಗಿ ಹುಲ್ಲು ಅತ್ಯಗತ್ಯ. ರಾಗಿ ಬೆಳೆಯೋದು ರಾಸುಗಳಿಗೆ ಹುಲ್ಲು ಸಿಗಲಿ ಅಂತ. ಮಳೆ ಹೆಚ್ಚಾಗಿ, ಬಿಸಿಲು ಇಲ್ಲವೆಂದರೆ ಹುಲ್ಲು ಸಿಂಡು ಬರುತ್ತದೆ. ಅದನ್ನು ದನ, ಕರ ತಿನ್ನುವುದಿಲ್ಲ. ಇನ್ನು ಹೊರಗೆ ತರ್ತೀನಿ ಅಂದ್ರೆ ಮೂರು ಕಟ್ಟು ಸೇರಿ ಒಂದು ಕಂತೆ ಈಗ ₹120 ರಿಂದ ₹130 ರೂಪಾಯಿ ಕೊಡಬೇಕು. ಒಂದು ಟ್ರ್ಯಾಕ್ಟರ್ ಹುಲ್ಲು ₹12,000ದಿಂದ ₹15,000 ಇದೆ. ಹೇಗೆ ತರುವುದು ಎನ್ನುವ ಚಿಂತೆಯಾಗಿದೆ” ಎನ್ನುತ್ತಾರೆ.

ರಾಗಿ ಬೆಳೆ

ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, “ಪ್ರಕೃತಿ ಮುಂದೆ ಏನೂ ಮಾಡಲು ಸಾಧ್ಯವಿಲ್ಲ. ಒಳ್ಳೆಯದೂ ಆಗುತ್ತೆ, ಕೆಟ್ಟದ್ದೂ ಆಗುತ್ತೆ. ಹಾಗಂತ ಧೃತಿಗೆಡಬಾರದು. ರೈತರು ಆದಷ್ಟು ಬೇಗ ಕಟಾವು ಮಾಡಿ ಒಕ್ಕಣೆ ಕೆಲಸ ಮಾಡಿದರೆ ಒಳ್ಳೆಯದು. ಮತ್ತೆ ಮಳೆ ಬಿದ್ದರೆ ಕೈಗೆ ಬಂದಿದ್ದು ಬಾಯಿಗೆ ಬರದಂತಾಗುತ್ತದೆ” ಎಂದು ಹೇಳಿದರು.

ರಾಗಿ ಬೆಳೆಹಾನಿ

“ಮಳೆ ಯಾವಾಗ ಬರುತ್ತೆ ಎನ್ನುವುದನ್ನು ಹೇಳಲೂ ಆಗುವುದಿಲ್ಲ. ರೈತನಿಗೆ ಒಂದು ಸಮಸ್ಯೆಯಲ್ಲ, ಬಿತ್ತನೆಗೆ ಮುಂಚೆಯಿಂದ ಬೆಳೆ ಮನೆಗೆ ತರುವವರೆಗೂ ಒಂದಲ್ಲ ಒಂದುರೀತಿ ಹೋರಾಟ ಮಾಡಬೇಕು. ನೆಮ್ಮದಿ ಜೀವನವಂತು ಇಲ್ಲವೇ ಇಲ್ಲ” ಎಂದು ವಿಷಾದಿಸಿದರು.

ಈ ಸುದ್ದಿ ಓದಿದ್ದೀರಾ? ತಮಿಳುನಾಡಿನಲ್ಲಿ ಮಳೆ ಅಬ್ಬರ; ಕರ್ನಾಟಕದ 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌: ಹವಾಮಾನ ಇಲಾಖೆ

ಕೊಡಗಿನಲ್ಲಿ ಸತತ ಮಳೆಯಿಂದಾಗಿ ಕಾಫಿ ಬೆಳೆ ನೆಲಕಚ್ಚಿದೆ. ಹೂವಾಗಿ, ಕಾಫಿ ಗೊಂಚಲಾಗುವ ಸಮಯದಲ್ಲಿ ಬಿದ್ದ ಮಳೆಯಿಂದ ಭಾರೀ ಹಾನಿಯಾಗಿದೆ. ಈ ಬಾರಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಫಸಲು ತೀರಾ ಕಡಿಮೆ. ಕೊಡಗಿನಲ್ಲಿ ಅತಿ ಹೆಚ್ಚಾಗಿ ಅರೆಬಿಕಾ ಕಾಫಿ. ಇನ್ನುಳಿದಂತೆ ರೊಬಸ್ಟಾ ಉತ್ಪಾದನೆ ಮಾಡಲಾಗುತ್ತೆ. ಅಂದರೆ ಸರಿಸುಮಾರು ‌1.6 ಲಕ್ಷ(ಒಂದು ಲಕ್ಷದ ಆರು ಸಾವಿರ) ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ವರ್ಷಕ್ಕೆ ಸುಮಾರು ಒಂದು ಲಕ್ಷದ ಹನ್ನೊಂದು ಸಾವಿರ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗುತ್ತದೆ. ಈ ಬಾರಿ ಉತ್ತಮ ಬೆಳೆ ನಿರೀಕ್ಷೆಯಲ್ಲಿರುವಾಗ ಮುಂಗಾರು ಮಳೆ ಸತತವಾಗಿ ಸುರಿದ ಪರಿಣಾಮ ಶೇ.60ರಷ್ಟು ಕಾಫಿ ಫಸಲು ನಷ್ಟ ಕಂಡಿದೆ. ಹೀಗಿರುವಾಗ ಹವಾಮಾನ ಇಲಾಖೆ ಮತ್ತೆ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಕಾಫಿ ಬೆಳೆಗಾರರ ನಿದ್ದೆಗೆಡಿಸಿದೆ.

ಕಾಫಿ ಬೆಳೆ

ನವೆಂಬರ್ ತಿಂಗಳಲ್ಲಿ ಕಾಫಿ ಕೊಯ್ಲು ಆರಂಭವಾದರೆ ಈ ಬಾರಿ ಅತಂತ್ರ ಮಳೆಗೆ ಅಕ್ಟೋಬರ್ ತಿಂಗಳಲ್ಲಿ ಕಾಫಿ ಹಣ್ಣಾಗಿದೆ.
ಇದಲ್ಲದೆ ಸತತ ಮಳೆಯಿಂದ ಕಾಫಿ ಒಣಗಿಸಲು ಸಾಧ್ಯವಾಗಿಲ್ಲ. ಗುಣಮಟ್ಟ ಕಳೆದುಕೊಳ್ಳುವ ಭೀತಿ ಆವರಿಸಿದೆ. ಮತ್ತೆ ಡಿಸೆಂಬರ್ ತಿಂಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾದರೆ ಕಾಫಿ ನೆಲಕಚ್ಚುವ ಆತಂಕ ಮನೆಮಾಡಿದೆ. ಗುಣಮಟ್ಟದ ಕಾಫಿ ಉಳಿಯದಿದ್ದರೆ ಸೂಕ್ತ ಬೆಲೆ ಸಿಗದೆ ಕಂಗಾಲಾಗುವ ಸ್ಥಿತಿ ಎದುರಾಗಲಿದೆ.

ಕಾಫಿಬೆಳೆ ಹಾನಿ 1

ಡಿಸೆಂಬರ್ ತಿಂಗಳ ಎರಡನೇ ವಾರ ಹಾಗೂ ಮೂರನೇ ವಾರದಲ್ಲಿ ಎರಡು ವಾಯುಭಾರ ಕುಸಿತವಾಗಲಿದ್ದು, ರಾಜ್ಯದಲ್ಲಿಯೂ ಕೂಡಾ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕಾಫಿಬೆಳೆ ಹಾನಿ

ಫೆಂಗಲ್ ಚಂಡಮಾರುತದ ಹಾನಿಯಿಂದ ರೈತರು ಇನ್ನೂ ಹೊರಬರಲಾರದ ಪರಿಸ್ಥಿತಿಯಲ್ಲಿ ಇರುವಾಗ ಮುಂದಿನ ಹತ್ತು ದಿನಗಳ ಅಂತರದಲ್ಲಿ ಮೊದಲ ಭಾಗವಾಗಿ ಡಿಸೆಂಬರ್ 14 ರಿಂದ 15 ರಂದು ಬಂಗಾಳ ಕೊಲ್ಲಿಯಲ್ಲಿ ತೀವ್ರ ಸ್ವರೂಪದ ವಾಯುಭಾರ ಕುಸಿತ ಕಾಣಲಿದೆ. ಬಳಿಕ ಡಿಸೆಂಬರ್ 16 ರಿಂದ 18ರ ಸಮಯದಲ್ಲಿ ಎರಡನೇ ವಾಯುಭಾರ ಕುಸಿತ ಕಾಣಲಿದ್ದು, ರಾಜ್ಯಾದ್ಯಂತ ವ್ಯಾಪಕವಾಗಿ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇರುವುದರಿಂದ ರೈತರು ಆದಷ್ಟು ಬೇಗ ಕಟಾವು ಕೆಲಸ ಮುಗಿಸಿ ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಬೇಕಿದೆ.

WhatsApp Image 2023 09 02 at 8.42.26 PM
ಮೋಹನ್ ಜಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X