ಮೈಸೂರಿನ ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ಭಾನುವಾರ ಸಂಜೆ ‘ ನಿರಂತರ ಸಹಜ ರಂಗ – 2025 ‘ ರ ಉದ್ಘಾಟನೆಯನ್ನು ಹಿರಿಯ ರಂಗಕರ್ಮಿ ಸಿ. ಬಸವಲಿಂಗಯ್ಯನವರು ನೆರವೇರಿಸಿ ಮಾತನಾಡಿ “ರಂಗಭೂಮಿ ವರ್ತಮಾನದ ಕನ್ನಡಿಯಾಗಿ, ಸಮಾಜದಲ್ಲಿ ಪ್ರಶ್ನಿಸುವ ಮನೋಭಾವನೆಗಳನ್ನು ಬೆಳೆಸಬೇಕು” ಎಂದು ಅಭಿಪ್ರಾಯಪಟ್ಟರು.
ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಎಸ್. ನರೇಂದ್ರ ಕುಮಾರ್ ಮಾತನಾಡಿ ‘ ಸಂವಿಧಾನದ ಮೌಲ್ಯಗಳು ಹಾಗೂ ಆಶಯಗಳನ್ನು ಜನಸಾಮಾನ್ಯರಿಗೂ ತಲುಪಿಸುವ ಕಾರ್ಯ ಹೆಚ್ಚಾಗಿ ನಡೆಯಬೇಕು. ಸಂವಿಧಾನ ಹೇಳಿದ ವೈವಿಧ್ಯತೆಯಲ್ಲಿ ಏಕತೆಯ ಸಂದೇಶವನ್ನು ಮುಂದಿನ ತಲೆಮಾರಿಗೆ ಬಿತ್ತಲಿ ‘ ಎಂದು ಹಾರೈಸಿದರು.
ಡಾ. ಎಂ. ಡಿ. ಸುದರ್ಶನ್ ಮಾತನಾಡಿ, ‘ ನಿರಂತರ ರಂಗಭೂಮಿಯ ನಿಜವಾದ ಉದ್ದೇಶಗಳಿಗೆ ತಕ್ಕಂತೆ ಚಟುವಟಿಕೆಗಳನ್ನು ನಡೆಸುತ್ತಿದೆ. ಸಮಾಜಕ್ಕೆ ಅಗತ್ಯವಾದ ವಿಚಾರಗಳನ್ನು ಧಾಟಿಸುತ್ತಿದೆ ‘ ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಸಂವಿಧಾನದ ಪೀಠಿಕೆ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳೇ ರೂಪಿಸಿದ ಅಭಿಮುಖ ಮುಖವಾಣಿಯನ್ನು ಅನಾವರಣಗೊಳಿಸಲಾಯಿತು. ನಿರಂತರದ ಪ್ರಸಾದ್ ಕುಂದೂರು ಅವರು ಶಿಬಿರದ ಇತಿಹಾಸ ಮತ್ತು ಆಶಯಗಳ ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ನಿರಂತರದ ಅಶ್ವಿನಿ, ಯಶಸ್ವಿನಿ, ಪ್ರತಾಪ್ ಹುಣಸೂರು, ವಿವೇಕಾನಂದ ಆಶಯ ಗೀತೆಯನ್ನು ಹಾಡಿದರು.

ಆಗಸ್ಟ್. 15 ರಿಂದ ಆರಂಭವಾದ ಸಹಜ ರಂಗ ತರಬೇತಿ ಶಿಬಿರವು ಸೆಪ್ಟೆಂಬರ್ 18 ರಂದು ನಾಟಕ ಪ್ರದರ್ಶನದೊಂದಿಗೆ ಮುಕ್ತಾಯಗೊಳ್ಳಲಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಆಗಸ್ಟ್. 24 ರಂದು ಬನವಾಸಿ ತೋಟದಲ್ಲಿ ‘ ಪ್ರೂನಿಂಗ್ – ಗ್ರಾಫ್ಟಿಂಗ್ ‘ ಕುರಿತಾದ ಒಂದು ದಿನದ ಕಾರ್ಯಗಾರ
ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಎಸ್. ನರೇಂದ್ರ ಕುಮಾರ್, ನಿವೃತ್ತ ಪ್ರಾಧ್ಯಾಪಕ ಅಪ್ಪಾಜಿ ಗೌಡ, ನಿವೃತ್ತ ಪ್ರಾಧ್ಯಾಪಕಿ ಮಂಗಳಾ, ಎಸ್‌ಬಿಐ ಲೀಡ್ ಬ್ಯಾಂಕ್ ಮ್ಯಾನೇಜರ್ ಶಿವಲಿಂಗಯ್ಯ, ನಿರಂತರದ ಪ್ರಸಾದ್ ಕುಂದೂರು, ಸುಗುಣ ಎಂ.ಎಂ, ಶ್ರೀನಿವಾಸ್ ಪಾಲಹಳ್ಳಿ, ಹರಿಪ್ರಸಾದ್ ಬೇಸಾಯಿ, ಶಿರಾ ಸೋಮಶೇಖರ್, ರಾಜೇಶ್ ಹೆಬ್ಬಾರ್ ಸೇರಿದಂತೆ ಇನ್ನಿತರರು ಇದ್ದರು.